ಜಗತ್ತಿಗೆ ಒಳಿತಾಗುವ ತಂತ್ರಜ್ಞಾನ ಬಳಕೆ ಆಗಲಿ: ಬಸವಲಿಂಗ ಶ್ರೀ

KannadaprabhaNewsNetwork |  
Published : Sep 26, 2024, 11:33 AM IST
23ಎಚ್‌ಪಿಟಿ5- ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ 2024ನೇ ಸಾಲಿನ ತರಗತಿಗಳ ಪ್ರಾರಂಭೋತ್ಸವ ‘ಶುಭಾರಂಭ-2024’ ಸಮಾರಂಭವನ್ನು ಸ್ಥಳೀಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜ.ಶ್ರೀ ಬಸವಲಿಂಗ ಮಹಾಸ್ವಾಮೀಜಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಜಗತ್ತನ್ನು ಉಳಿಸುವ ಮಾರ್ಗಡೆದೆಗೆ ಎಂಜಿನಿಯರ್‌ಗಳು ಕೈ ಜೋಡಿಸಿದರೆ ಮಾನವನ ಸಂಕುಲವನ್ನು ಶ್ರೀಮಂತಗೊಳಿಸಬಹುದು.

ಹೊಸಪೇಟೆ: ಅತಿ ತಂತ್ರಜ್ಞಾನದಿಂದ ಪ್ರಪಂಚ ಕೆಡಬಾರದು. ಆ ತಂತ್ರಜ್ಞಾನ ಜಗತ್ತನ್ನು ಉಳಿಸುವ ನಿಟ್ಟಿನಲ್ಲಿ ಬಳಕೆಯಾದರೆ ಅದೇ ಎಂಜಿನಿಯರ್‌ಗಳು ಕಂಡುಕೊಳ್ಳುವ ಯಶಸ್ಸು ಎಂದು ಸ್ಥಳೀಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜ.ಶ್ರೀ ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ 2024ನೇ ಸಾಲಿನ ತರಗತಿಗಳ ಪ್ರಾರಂಭೋತ್ಸವ ಶುಭಾರಂಭ-2024 ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು,

ಹೊಸ ತಂತ್ರಜ್ಞಾನದ ಆವಿಷ್ಕಾರಗಳು ಪ್ರಪಂಚದ ನೆಲ, ಜಲ ಹಾಗೂ ಪರಿಸರಕ್ಕೆ ಯಾವುದೇ ಹಾನಿ ಉಂಟು ಮಾಡದೆ ಜಗತ್ತನ್ನು ಉಳಿಸುವ ಮಾರ್ಗಡೆದೆಗೆ ಎಂಜಿನಿಯರ್‌ಗಳು ಕೈ ಜೋಡಿಸಿದರೆ ಮಾನವನ ಸಂಕುಲವನ್ನು ಶ್ರೀಮಂತಗೊಳಿಸಬಹುದು ಎಂದರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಹೊಸಪೇಟ್ ಸ್ಟೀಲ್ಸ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾಂಕ್ ಪಾಲ್ ಮಾತನಾಡಿದರು.

ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಯು.ಎಂ. ರೋಹಿತ್, ಉಪ ಪ್ರಾಂಶುಪಾಲೆ ಡಾ. ಪಾರ್ವತಿ ಕಡ್ಲಿ ಮತ್ತಿತರರಿದ್ದರು.

ಕೀರ್ತನ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಡಾ. ಶರಣ ಬಸಮ್ಮ ನಿರ್ವಹಿಸಿದರು.

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ 2024ನೇ ಸಾಲಿನ ತರಗತಿಗಳ ಪ್ರಾರಂಭೋತ್ಸವ ‘ಶುಭಾರಂಭ-2024’ ಸಮಾರಂಭವನ್ನು ಸ್ಥಳೀಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜ.ಶ್ರೀ ಬಸವಲಿಂಗ ಮಹಾಸ್ವಾಮೀಜಿ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ