ಹಿರಿಯರ ಸಾಧನೆಗಳು ನಮಗೆ ಮಾರ್ಗದರ್ಶಿಯಾಗಲಿ: ಪ್ರಭಾಕರ ಕಾರಂತ್

KannadaprabhaNewsNetwork |  
Published : Dec 05, 2025, 03:30 AM IST
ಹರಿಹರಪುರ ಮರೆಯಲಾರದ ಮಹನೀಯರು ಪುಸ್ತಕ ಬಿಡುಗಡೆ  | Kannada Prabha

ಸಾರಾಂಶ

ಕೊಪ್ಪ ಸಮಾಜದ ಏಳಿಗೆಗಾಗಿ ದುಡಿದ ನಮ್ಮ ಹಿರಿಯರ ಸಾಧನೆಗಳು ನಮಗೆ ಮಾರ್ಗದರ್ಶಿಯಾಗಬೇಕು. ಅಂತಹವರ ಬಗ್ಗೆ ಗೌರವವಿರಬೇಕು ಎಂದು ಸಾಹಿತಿ ಲೇಖಕ, ಹಿರಿಯ ಪತ್ರಕರ್ತ ಪ್ರಭಾಕರ ಕಾರಂತ್ ತಿಳಿಸಿದರು

- ಹರಿಹರಪುರ - ಮರೆಯಲಾರದ ಮಹನೀಯರು ಪುಸ್ತಕ ಬಿಡುಗಡೆ

ಕನ್ನಡಪ್ರಭ ವಾರ್ತೆ ಕೊಪ್ಪ

ಸಮಾಜದ ಏಳಿಗೆಗಾಗಿ ದುಡಿದ ನಮ್ಮ ಹಿರಿಯರ ಸಾಧನೆಗಳು ನಮಗೆ ಮಾರ್ಗದರ್ಶಿಯಾಗಬೇಕು. ಅಂತಹವರ ಬಗ್ಗೆ ಗೌರವವಿರಬೇಕು ಎಂದು ಸಾಹಿತಿ ಲೇಖಕ, ಹಿರಿಯ ಪತ್ರಕರ್ತ ಪ್ರಭಾಕರ ಕಾರಂತ್ ತಿಳಿಸಿದರು. ಹರಿಹರಪುರ ರೋಟರಿ ಸಮುದಾಯದಳದಿಂದ ಕೊಪ್ಪದ ಹರಿಹರಪುರದಲ್ಲಿ ನಡೆದ ನಾಡು ನುಡಿಗೆ ನಮನ ಹಾಗೂ ಮರೆಯ ಲಾರದ ಮಹನೀಯರು ಪುಸ್ತಕ ಬಿಡುಗಡೆಯಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿ ಇನ್ನೊಬ್ಬರ ಗುಣ ಗಮನಿ ಸುವ, ಇನ್ನೊಬ್ಬರನ್ನು ಅರಿಯುವ ಮನಸ್ಥಿತಿ ನಮ್ಮದಾಗಬೇಕು. ಕೇವಲ ತನ್ನ ಸಾಧನೆ ಹೇಳಿ ಕೊಳ್ಳುತ್ತಾ ತಾನೇ ಶ್ರೇಷ್ಠ ಎನ್ನುವ ಆತ್ಮಪ್ರಶಂಸೆ ತರವಲ್ಲ. ಸಮಾಜಮುಖಿ ಕಾರ್ಯಗಳಲ್ಲಿ ಪ್ರಾಮಾಣಿಕ ಕಳಕಳಿ ಇರಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಶೃಂಗೇರಿ ಸಾಮಾಜಿಕ ಕಾರ್ಯಕರ್ತ ಎ.ಎಸ್. ನಯನಾ ಮಾತನಾಡಿ ರಾಷ್ಟçಕವಿ ಕುವೆಂಪು ರಚಿಸಿದ ನಮ್ಮ ನಾಡಗೀತೆಯಲ್ಲಿ ಕನ್ನಡನಾಡಿನ ಸಾರಸತ್ವವೇ ಅಡಗಿದೆ. ಇಂತಹ ಶ್ರೇಷ್ಠ ಸಾಹಿತ್ಯ ರಚಿಸಿದ ಕವಿಗಳು ಸಾಹಿತಿಗಳ ಆಶಯ ಅರಿಯುವಲ್ಲಿ ಅಧ್ಯಯನಶೀಲರಾಗಬೇಕು. ಕನ್ನಡದ ಕುರಿತು ನಮಗೆ ನೈಜ ಅಭಿಮಾನವಿರಬೇಕು ಎಂದು ಕರೆ ನೀಡಿದರು. ಹರಿಹರಪುರದ ಟಿ.ಕೆ. ಮಂಜುನಾಥ್ ಸಂಪಾದಕತ್ವದಲ್ಲಿ ರೋಟರಿ ಸಮುದಾಯದಳ ಹೊರತಂದ ಮರೆಯಲಾರದ ಮಹನೀಯರು ಪುಸ್ತಕ ಬಿಡುಗಡೆ ಮಾಡಿ ತೀರ್ಥಹಳ್ಳಿ ಪತ್ರಕರ್ತ ಡಿ.ಎಸ್. ವಿಶ್ವನಾಥ ಶೆಟ್ಟಿ ಮಾತನಾಡಿ, ಎಲ್ಲ ಕ್ಷೇತ್ರ ಗಳಲ್ಲೂ ಬದಲಾವಣೆ ಪರಿವರ್ತನೆ ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಸಮಾಜವನ್ನು ಸಶಕ್ತವಾಗಿ ಸದೃಢವಾಗಿ ಮುನ್ನಡೆ ಸುವಲ್ಲಿ ಪ್ರಾಮಾಣಿಕ ಕಳಕಳಿ ನಾಯಕರು ಬೇಕು. ಇಂದು ನಾವೆಲ್ಲ ಬಹಳಷ್ಟು ವೇಗವಾಗಿ ಮುಂದುವರಿಯುತ್ತಿದ್ದೇವೆ. ನಮ್ಮ ಹಿರಿಯರಲ್ಲಿದ್ದ ಸಾತ್ವಿಕತೆ ವಿನಯಶೀಲತೆ ನಮಗೆ ಮಾದರಿಯಾಗಬೇಕು. ಯುವ ಪೀಳಿಗೆಗೆ ನಮ್ಮ ಹಿರಿಯರ ಬದುಕು ಸಾಧನೆಗಳು ಆದರ್ಶವಾಗಬೇಕು. ಹರಿಹರಪುರದಲ್ಲಿ ಹಿರಿಯರ ಬದುಕು ಸಾಧನೆ ದಾಖಲಿಸುವ ಮರೆಯಲಾರದ ಮಹನೀಯರು ಕೃತಿ ಹೊರ ತರುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು. ಪುಸ್ತಕ ಸಂಪಾದಕ ಮಂಜುನಾಥ್ ಪುಸ್ತಕ ರಚನೆ ಆಶಯ ತಿಳಿಸಿದರು. ಕೊಪ್ಪ ತಾಲೂಕು ಕಸಾಪ ಅಧ್ಯಕ್ಷ ಜೆ.ಎಂ. ಶ್ರೀಹರ್ಷ ಮರೆಯಲಾರದ ಮಹನೀಯರು ಕೃತಿ ಪರಿಚಯಿಸಿದರು. ಹರಿಹರಪುರ ಹೋಬಳಿ ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿಗಳ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಉದ್ಯಮಿ ವಿಕಾಸ್ ಬೇಗಾನೆ ಬಹುಮಾನ ವಿತರಿಸಿದರು. ರೋಟರಿ ಸಮುದಾಯದಳದ ಅಧ್ಯಕ್ಷ ನರಸಿಂಹಮೂರ್ತಿ ಅಡಿಗ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೊ.ಸ. ದಳದ ಕಾರ್ಯದರ್ಶಿ ರವಿರಾಜ್, ಎ.ಒ.ವೆಂಕಟೇಶ್, ಸವಿತಾ ಶ್ರೀಹರ್ಷ ಹಾಗೂ ಡಾ.ಶುಭಾ ಶಾಸ್ತಿç ಆಶಿತಾ, ವರ್ಷಿಣಿ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣ ಮನುಷ್ಯನ ಬದುಕಿನ ಅವಿಭಾಜ್ಯ ಅಂಗ: ಟಿ.ಡಿ.ರಾಜೇಗೌಡ
ವಿಕಲಚೇತನರ ಅನುದಾನ ಪೂರ್ಣ ಪ್ರಮಾಣದ ಸದ್ಬಳಕೆಗೆ ಕ್ರಮ