ಚಿಕ್ಕಮಗಳೂರುಕಲಿಕೆಯ ವಯಸ್ಸು ಸಂಯಮದಿಂದ ಕೂಡಿರಬೇಕು. ಕಠಿಣ ಪರಿಶ್ರಮ ವಿದ್ಯಾರ್ಥಿಗಳ ಭವಿಷ್ಯವನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯಲು ಸಾಧ್ಯ. ಅದರಿಂದ ಓದಿನ ಸಮಯದಲ್ಲಿ ಆಕರ್ಷಣೆಗಳಿಗೆ ಒಳಗಾಗದೇ ನಿರಂತರ ಕಲಿಕೆಯತ್ತ ಗಮನಹರಿಸಬೇಕು ಎಂದು ಬಸವತತ್ತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಲಿಕೆಯ ವಯಸ್ಸು ಸಂಯಮದಿಂದ ಕೂಡಿರಬೇಕು. ಕಠಿಣ ಪರಿಶ್ರಮ ವಿದ್ಯಾರ್ಥಿಗಳ ಭವಿಷ್ಯವನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯಲು ಸಾಧ್ಯ. ಅದರಿಂದ ಓದಿನ ಸಮಯದಲ್ಲಿ ಆಕರ್ಷಣೆಗಳಿಗೆ ಒಳಗಾಗದೇ ನಿರಂತರ ಕಲಿಕೆಯತ್ತ ಗಮನಹರಿಸಬೇಕು ಎಂದು ಬಸವತತ್ತ್ವ ಪೀಠದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.ನಗರದ ದೊಡ್ಡಕುರುಬರಹಳ್ಳಿ ಸಮೀಪದ ಶ್ರೀ ಬಸವ ಮಂದಿರದಲ್ಲಿ ಸೋಮವಾರ ಪೋಕಾಸ್ ವೈಲ್ಡ್ ಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಗಮನ ಕೇಂದ್ರೀಕರಣ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಶ್ರೀಗಳು ಆರ್ಶೀವಚನ ನೀಡಿದರು.ಪಿಯುಸಿ ವ್ಯಾಸಂಗದಲ್ಲಿ ಮಕ್ಕಳು ಹಲವು ಆಕರ್ಷಣೆಗೆ ಒಳಗಾಗುವುದು ಸಹಜ. ವಿದ್ಯಾರ್ಥಿ ಬದುಕಿನ ಬಂಡಿಯಲ್ಲಿ ಸೂಕ್ಷ್ಮ ಹಾಗೂ ಪ್ರಜ್ಞಾವಂತರಾಗಿ ಹೆಜ್ಜೆಯಿಡಬೇಕು. ಓದುವ ವಯಸ್ಸಿನಲ್ಲಿ ಅಪಾರ ಶಕ್ತಿಯಿದ್ದು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಾಗುವುದೇ ಬುದ್ದಿವಂತರ ಲಕ್ಷಣ ಎಂದು ಹೇಳಿದರು.ಅಂತಿಮ ಪರೀಕ್ಷಾ ಘಟ್ಟದಲ್ಲಿ ಮಕ್ಕಳು ಸಾಕಷ್ಟು ತಯಾರಿಗಳಿಂದಲೇ ಪರೀಕ್ಷೆ ಎದುರಿಸಬೇಕು. ಅಲ್ಲದೇ ಪೋಕಾಸ್ ಸಂಸ್ಥೆ ನಡೆಸುತ್ತಿರುವ ಶಿಬಿರಗಳು ಪರೀಕ್ಷೆಗೆ ಫಲಪ್ರದವಾಗಲಿದ್ದು, ಕಾರ್ಯಾಗಾರದಲ್ಲಿ ತಿಳಿದು ಕೊಳ್ಳುವ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳುವ ಮೂಲಕ ಹೆತ್ತವರ ಕನಸನ್ನು ಸಾಕಾರ ಗೊಳಿಸಬೇಕು ಎಂದು ತಿಳಿಸಿದರು.ವಿದ್ಯಾರ್ಥಿದೆಸೆಯಿಂದಲೇ ತಿಳುವಳಿಕೆ ರೂಪಿಸಿಕೊಂಡು ಬೇಡದ ಚಟುವಟಿಕೆಗಳಿಗೆ ಮಣೆಹಾಕದೇ, ಕಲಿಕೆಗೆ ಮಹತ್ವ ನೀಡಬೇಕು. ಆದಷ್ಟು ಮೊಬೈಲ್‌ಗಳ ಹಾವಳಿಯಿಂದ ದೂರವಿದ್ದು ಭದ್ರ ಭವಿಷ್ಯದ ಕನಸನ್ನು ಪರಿವರ್ತಿಸಿಕೊಳ್ಳುವ ವಯಸ್ಸು ಇದಾಗಿದೆ. ಹೀಗಾಗಿ ತರಬೇತಿ ಶಿಬಿರದಲ್ಲಿ ಸಮಗ್ರವಾಗಿ ಕಲಿತು ಕೊಳ್ಳುವುದು ಪ್ರತಿ ವಿದ್ಯಾರ್ಥಿಯ ಜವಾಬ್ದಾರಿ ಎಂದರು.ಪೋಕಾಸ್ ವೈಲ್ಡ್ ಸಂಸ್ಥೆ ಗಿರಿಧರ್ ರೇವಂತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಮೊಬೈಲ್ ಪೋನ್ ಅವಲಂಬನೆ, ಚಂಚಲತೆ, ಸ್ವಯಂ ಶಿಸ್ತಿನ ಕೊರತೆ, ಪರಸ್ಪರ ಹೋಲಿಕೆಯಿಂದ ಉಂಟಾದ ಕೀಳರಿಮೆ, ನಿಖರ ಗುರಿ ಇಲ್ಲದಿರುವಿಕೆ, ಗೊಂದಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಬಿರ ಅನುಕೂಲವಾಗಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಸವತತ್ತ್ವ ಪೀಠದ ಖಜಾಂಚಿ ಸಿ.ಎಸ್. ಸದಾಶಿಪಪ್ಪ, ಪೋಕಾಸ್ ವೈಲ್ಡ್ ಸಂಸ್ಥೆಯ ಯೋಗರಾಜ್, ತೇಜಸ್ವಿನಿ, ಗಿರೀಶ್, ಮಂಜುನಾಥ್, ಎಂಇಎಸ್ ಪಿಯು ಕಾಲೇಜು ಉಪನ್ಯಾಸಕಿ ಸುಭಾಷ್ ಉಪಸ್ಥಿತರಿದ್ದರು. 22 ಕೆಸಿಕೆಎಂ 2ಚಿಕ್ಕಮಗಳೂರಿನ ದೊಡ್ಡಕುರುಬರಹಳ್ಳಿ ಸಮೀಪದ ಶ್ರೀ ಬಸವ ಮಂದಿರದಲ್ಲಿ ಸೋಮವಾರ ಪೋಕಾಸ್ ವೈಲ್ಡ್ ಸಂಸ್ಥೆ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಗಮನ ಕೇಂದ್ರೀಕರಣ ತರಬೇತಿ ಶಿಬಿರಕ್ಕೆ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.