ಬಿಜೆಪಿಗರು ವಿನಾಕಾರಣ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲು ಪ್ರಶ್ನಿಸಲಿ, ಬಿಜೆಪಿ ಸುಳ್ಳುಗಾರರ ಪಕ್ಷ, ಅವರಿಗೆ ಸಾರಿಗೆ ಇಲಾಖೆಯ ನೌಕರರ ಬಗ್ಗೆ ಕಾಳಜಿ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ವಿಜಯಪುರ : ಬಿಜೆಪಿಗರು ವಿನಾಕಾರಣ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲು ಪ್ರಶ್ನಿಸಲಿ, ಬಿಜೆಪಿ ಸುಳ್ಳುಗಾರರ ಪಕ್ಷ, ಅವರಿಗೆ ಸಾರಿಗೆ ಇಲಾಖೆಯ ನೌಕರರ ಬಗ್ಗೆ ಕಾಳಜಿ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಉತ್ತರ ನೀಡುವುದಿಲ್ಲ. ಬೇರೆಯವರ ಮಾತಿಗೆ ನಾನು ಉತ್ತರ ನೀಡುವುದಿಲ್ಲ. ಈ ವಿಷಯವಾಗಿ ಬಹಿರಂಗವಾಗಿ ಏನೂ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ನಮ್ಮ ಹೈಕಮಾಂಡ್ ಏನು ಸೂಚನೆ ನೀಡಿದ್ದಾರೆ, ಅದನ್ನು ನಾವು ಫಾಲೋ ಮಾಡುವುದಾಗಿ ತಿಳಿಸಿದರು.
ಉತ್ತರ ಕರ್ನಾಟಕದವರು ಸಿಎಂ ಆಗುವ ಯೋಗ ಇದೆ ಎಂದು ಕೋಡಿಮಠದ ಶ್ರೀಗಳ ಭವಿಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ, ನನಗೆ ಭವಿಷ್ಯವಾಣಿಯಲ್ಲಿ ನಂಬಿಕೆ ಇಲ್ಲ, ಆದರೆ, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಸಂತೋಷ ಪಡುವವರಲ್ಲಿ ನಾನು ಒಬ್ಬ. ಆದರೆ, ನನಗೆ ಭವಿಷ್ಯವಾಣಿಯಲ್ಲಿ ನಂಬಿಕೆ ಇಲ್ಲ. ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ನನಗೂ ಸಂತೋಷವೇ ಎಂದರು.
ಎರಡು ವರ್ಷದ ಅವಧಿಯಲ್ಲಿ ೧೦೩೧ ಬಸ್ ಖರೀದಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ೨೦೦೦ ಬಸ್ ಖರೀದಿ ಮಾಡಲಾಗುವುದು. ಕಲ್ಯಾಣ ಕರ್ನಾಟಕಕ್ಕೆ ಹೊಸ ಬಸ್‌ಗಳನ್ನ ನೀಡಲಾಗುವುದು ಎಂದು ತಿಳಿಸಿದ ಅವರು, ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ₹ ೨ ಸಾವಿರ ಕೋಟಿಯಷ್ಟು ಸಾಲ ಕೊಡಿಸಿದೆ. ಈ ೨ ಸಾವಿರ ಕೋಟಿ ಸಾಲವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಡಪಡಿಸಿದರು.
ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರದಿಂದ ಸಾರಿಗೆ ಇಲಾಖೆಗೆ ಬರಬೇಕಾದ ಅನುದಾನ ಬಾಕಿಯಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಮ್ಮ ಇಲಾಖೆಗೆ ಹೊರೆ ಇಲ್ಲ. ಉಚಿತವಾಗಿ ರಾಜ್ಯ ಸರ್ಕಾರ ನಮಗೆ ₹ ೨ಸಾವಿರ ಕೋಟಿ ಕೊಟ್ಟಂತಾಯಿತು. ಮೋಟಾರ್ ವಾಹನ ಟ್ಯಾಕ್ಸ್ ಪ್ರತಿ ವರ್ಷ ₹ ೭ನೂರು ಕೋಟಿ ಇತ್ತು. ಎರಡು ವರ್ಷದಿಂದ ವಿನಾಯಿತಿ ಕೊಟ್ಟಿದ್ಧಾಗಿ ಅವರು ತಿಳಿಸಿದರು.