ರೈತರ ಬೇಡಿಕೆ, ಹಕ್ಕುಗಳ ಮೇಲೆ ಬಜೆಟ್‌ ಮಂಡಿಸಲಿ

KannadaprabhaNewsNetwork |  
Published : Feb 07, 2024, 01:50 AM ISTUpdated : Feb 07, 2024, 04:26 PM IST
farmer

ಸಾರಾಂಶ

ರೈತರ ಬೇಡಿಕೆ ಹಾಗೂ ಹಕ್ಕುಗಳ ಮೇಲೆ ಸರ್ಕಾರ ಪ್ರಸಕ್ತ ಬಜೆಟ್‌ ಮಂಡಿಸುವುದು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರೈತರ ಬೇಡಿಕೆ ಹಾಗೂ ಹಕ್ಕುಗಳ ಮೇಲೆ ಸರ್ಕಾರ ಪ್ರಸಕ್ತ ಬಜೆಟ್‌ ಮಂಡಿಸುವುದು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಗಣೇಶ ಈಳಿಗೇರ ಮಾತನಾಡಿ, ಸಕ್ಕರೆ ಸಚಿವರು ರೈತರು ಬರಗಾಲ ಬರಬೇಕು ಎಂದು ಬಯಸುತ್ತಾರೆ, ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸುತ್ತಾರೆ. ವಿದ್ಯುತ್‌ ಉಚಿತವಾಗಿ ನೀಡಲಾಗುತ್ತಿದೆ. ಗೊಬ್ಬರಕ್ಕೆ ಸಬ್ಸಿಡಿಯನ್ನೂ ಕೊಡಲಾಗುತ್ತಿದೆ. ಹಾಗಾಗಿ, ಸಾಲ ಮನ್ನಾ ಮಾಡುವುದನ್ನು ಅವರು ನಿರೀಕ್ಷಿಸಬಾರದು ಎಂದು ಹೇಳಿರುವುದನ್ನು ಖಂಡಿಸಿದರು.

ರಾಜ್ಯದಲ್ಲಿ ರೈತರ ಬದುಕು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತತ್ತರಿಸಿ ಹೋಗಿದೆ. ಕಳೆದೊಂದು ವರ್ಷದಿಂದ ಭೀಕರ ಬರಗಾಲ ಎದುರಾಗಿದೆ. ರೈತರಿಗೆ ಸರ್ಕಾರ ಒಂದು ಎಕರೆ ಜಮೀನಿಗೆ ವೈಜ್ಞಾನಿಕ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಾಲಮನ್ನಾ ಮಾಡುವ ಜವಾಬ್ದಾರಿಯನ್ನು ಎಲ್ಲ ಶಾಸಕರು ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಶಾಸಕರೇ ಹೊಣೆಗಾರರಾಗುತ್ತಾರೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಹಲವಾರು ಗ್ರಾಮಗಳು ಕುಡಿಯಲು ಪರದಾಡುತ್ತಾ ಜಾನವಾರುಗಳಿಗೆ ನೀರಿಲ್ಲದೇ ಜಾನುವಾರುಗಳನ್ನು ಮಾರುವ ಪರಿಸ್ಥಿತಿಯಲ್ಲಿ ರೈತ ಕುಟುಂಬಗಳು ಬಂದಿವೆ. ಆದಕಾರಣ ಅಧಿಕಾರಿಗಳು ನೀರನ್ನು ತುಂಬಿಸಬೇಕು. ರೈತರ ಕಬ್ಬಿಗೆ ಮಹಾರಾಷ್ಟ್ರ ಮಾದರಿಯಾಗಿ ಬಿಲ್‌ನ್ನು ಒದಗಿಸಬೇಕು ಎಂದರು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!