)
ಕನ್ನಡಪ್ರಭ ವಾರ್ತೆ ವಿಜಯಪುರ
ಕೇಂದ್ರ ಬರ ತಂಡ ರಾಜ್ಯಕ್ಕೆ ಆಗಮನ ವಿಚಾರದ ಕುರಿತು ನಗರದಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದಲ್ಲಿ ಮಳೆ ಆಗಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಆಗಿಲ್ಲ. ಆದರೆ ಮಳೆಯಾಧಾರಿತ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಪರಿಹಾರ ಕೊಡಬೇಕು. ಆದರೆ ಹಳೆಯ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಾರ್ಮ್ಸ್ ಪ್ರಕಾರ ಪರಿಹಾರ ಕೊಟ್ಟರೆ ಅದು ಯಾವುದಕ್ಕೂ ಉಪಯೋಗ ಆಗಲ್ಲ. ನಾವು ನಮ್ಮ ಸರ್ಕಾರದಿಂದ ₹2500 ಕೊಟ್ಟಿದ್ದೇವೆ. ಅದು ಯಾವುದಕ್ಕೂ ಆಗಲ್ಲ. ಕೇಂದ್ರ ಸರ್ಕಾರ ಕೊಡಬೇಕಾಗುತ್ತದೆ ಎಂದರು.ಜಿಲ್ಲೆಯಿಂದ ಸರಿಯಾದ ವರದಿ ಕಳಿಸದೇ ಇರೋದಕ್ಕೆ ಜಿಲ್ಲೆಗೆ ಕೇಂದ್ರ ತಂಡ ಬರುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕೇಂದ್ರ ಬರ ತಂಡ 30 ಜಿಲ್ಲೆಗೆ ಹೋಗಲು ಸಾಧ್ಯವಿಲ್ಲ. ಮೂರ್ನಾಲ್ಕು ಜಿಲ್ಲೆಗೆ ಮಾತ್ರ ಹೋಗುತ್ತದೆ. ಸುಮ್ಮನೆ ಅಸಂಬದ್ಧವಾಗಿ ಮಾತನಾಡಬಾರದು. ಪ್ರತಿಯೊಂದು ಮಾಹಿತಿಯೂ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ಹೋಗುತ್ತದೆ. ಬರ ಘೋಷಣೆ ಆ ಮಾಹಿತಿ ಆಧಾರದಲ್ಲೇ ಆಗುತ್ತದೆ. ವಿಜಯಪುರಕ್ಕೆ ಬಂದರೆ ಕಲಬುರ್ಗಿಗೆ ಬರದೆ ಇರಬಹುದು. ಕಲಬುರ್ಗಿಗೆ ಬಂದರೆ ವಿಜಯಪುರಕ್ಕೆ ಬರದೇ ಇರಬಹುದು. ನಾಲ್ಕೈದು ಕಡೆ ಸ್ಯಾಂಪಲ್ ಅಷ್ಟೆ ಇದೆ ಎಂದರು.