ವಚನ ಬದುಕಿನ ಬದಲಾವಣೆ ಮೆಟ್ಟಿಲಾಗಲಿ: ತರಳಬಾಳು ಶ್ರೀ

KannadaprabhaNewsNetwork |  
Published : Feb 11, 2026, 01:15 AM IST
ಸಸ | Kannada Prabha

ಸಾರಾಂಶ

ವಚನಗಾರ್ತಿ ಆಯ್ದಕ್ಕಿ ಲಕ್ಕಮ್ಮನಂತೆ ‘ಈಸಕ್ಕಿಯಾಸೆ ನಿಮಗೇಕೆ?, ‘ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ?’ ಎಂದು ಹೆಚ್ಚು ಅಕ್ಕಿ ತಂದ ಪತಿಯನ್ನು ಪ್ರಶ್ನಿಸುವ ಮತ್ತು ಎಚ್ಚರಿಸುವ ಎಷ್ಟು ಪತ್ನಿಯರು ಈಗ ಇದ್ದಾರೆ. ಶರಣರ ವಚನಗಳು ನಡೆ-ನುಡಿಯ ಸಿದ್ಧಾಂತಗಳದ್ದು, ಮೊದಲು ನಡೆದುಕೊಂಡು ಆ ನಂತರ ನುಡಿದಂತವರು. ವಚನಗಳು ಭಾಷಣದ ಸರಕು ಆಗದೇ ವ್ಯಕ್ತಿಗತ ಬದುಕಿನಲ್ಲಿ ಬದಲಾವಣೆ ತರುವ ಮೆಟ್ಟಿಲು ಆಗಬೇಕು ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಚನಗಾರ್ತಿ ಆಯ್ದಕ್ಕಿ ಲಕ್ಕಮ್ಮನಂತೆ ‘ಈಸಕ್ಕಿಯಾಸೆ ನಿಮಗೇಕೆ?, ‘ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ?’ ಎಂದು ಹೆಚ್ಚು ಅಕ್ಕಿ ತಂದ ಪತಿಯನ್ನು ಪ್ರಶ್ನಿಸುವ ಮತ್ತು ಎಚ್ಚರಿಸುವ ಎಷ್ಟು ಪತ್ನಿಯರು ಈಗ ಇದ್ದಾರೆ. ಶರಣರ ವಚನಗಳು ನಡೆ-ನುಡಿಯ ಸಿದ್ಧಾಂತಗಳದ್ದು, ಮೊದಲು ನಡೆದುಕೊಂಡು ಆ ನಂತರ ನುಡಿದಂತವರು. ವಚನಗಳು ಭಾಷಣದ ಸರಕು ಆಗದೇ ವ್ಯಕ್ತಿಗತ ಬದುಕಿನಲ್ಲಿ ಬದಲಾವಣೆ ತರುವ ಮೆಟ್ಟಿಲು ಆಗಬೇಕು ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರದ ಒಕ್ಕಲಿಗರ ಭವನದಲ್ಲಿ ಆಯೋಜಿಸಿರುವ 40ರ ಸಂಭ್ರಮದ ವಿಚಾರಗೋಷ್ಠಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಇಂತಹ ಗೋಷ್ಠಿಗಳು ಆತ್ಮಾವಲೋಕನಕ್ಕೆ, ನಮ್ಮ ನಡೆ ನುಡಿ ತಿದ್ದುಕೊಳ್ಳುವುದಕ್ಕೆ ದಾರಿ ಆಗಬೇಕು. ಆಗ ಮಾತ್ರ ಶರಣರು ಕಂಡ ಕಲ್ಯಾಣ ರಾಜ್ಯವನ್ನು ಕಾಣುವುದಕ್ಕೆ ಸಾಧ್ಯ. ಅಂತಹ ಪ್ರಯತ್ನ ಮಾಡುವುದಕ್ಕೆ ಈ ರೀತಿಯ ಗೋಷ್ಠಿಗಳು ಎಲ್ಲರಿಗೂ ಸ್ಪೂರ್ತಿ ಆಗಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ಎಸ್‌,ಜಿ.ಸಿದ್ದರಾಮಯ್ಯ ಮಾತನಾಡಿ, ಪರಂಪರೆ, ಚರಿತ್ರೆಯ ಅರಿವು ಇಲ್ಲವಾದರೆ, ವರ್ತಮಾನದ ವಿದ್ಯಾಮಾನಗಳು ಅರ್ಥವಾಗುವುದಿಲ್ಲ. ಭವಿಷ್ಯವನ್ನು ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ. ವರ್ತಮಾನದ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೂ ಸಾಧ್ಯವಿಲ್ಲ ಎಂದು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಘೋಷವಾಕ್ಯವನ್ನು ಜಿಲ್ಲಾಧಿಕಾರಿ ನಾಗರಾಜ್‌ ಬಿಡುಗಡೆ ಮಾಡಿದರು. ನಮ್ಮೊಳಗಿನ ಶೋಧನೆಗೆ ವಚನಗಳ ಓದು ಎಂಬ ವಿಷಯದ ಬಗ್ಗೆ ಸಾಹಿತಿ ಡಾ. ಎಚ್.ಎಸ್.ಅನುಪಮಾ, ವಚನ ಸಂಪಾದನೆಗಳ ಸಾಂಸ್ಕೃತಿಕ ರಾಜಕಾರಣ ವಿಷಯದ ಬಗ್ಗೆ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಈವರೆಗಿನ ಓದು ಮತ್ತು ಹೊಸ ಸಾಧ್ಯತೆ ಬಗ್ಗೆ ಸಾಹಿತಿ ದೇವುಪತ್ತಾರ್ ವಿಷಯ ಮಂಡನೆ ಮಾಡಿದರು

ವಚನ ಕ್ರಾಂತಿಯ ಮಂದಣ ಕಥನ ಕುರಿತಂತೆ ಡಾ. ಬಂಜಗೆರೆ ಜಯಪ್ರಕಾಶ್, ವಚನ ಪ್ರತಿರೋಧದ ನೆಲೆಗಳು ಬಗ್ಗೆ ಸಾಹಿತಿ ಮೀನಾಕ್ಷಿ ಬಾಳಿ, ವಚನ ಚಳವಳಿಗಳ ಉಗಮದ ಕಾರಣ, ಸ್ವರೂಪ ಮತ್ತು ಉದ್ದೇಶಗಳು ವಿಷಯದಲ್ಲಿ ಡಾ. ಜೆ.ಎಸ್.ಪಾಟೀಲ್ ಉಪನ್ಯಾಸ ನೀಡಿದರು. ಶರಣ ಸಾಹಿತ್ಯ ಪರಿಷತ್ತುನ ಜಿಲ್ಲಾ ಹಾಲಿ, ಮಾಜಿ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಶರಣ ಸಾಹಿತ್ಯ ಪರಿಷತ್ತು ಚಿಕ್ಕಮಗಳೂರು ಅಧ್ಯಕ್ಷ ರವೀಶ್‌ ಕ್ಯಾತನಬೀಡು, ಪರಿಸರ ಮೌಲ್ಯ ಮಾಪನ ಸಮಿತಿ ಅಧ್ಯಕ್ಷ ಎ.ಎನ್‌.ಮಹೇಶ್‌, ಬಿಜೆಪಿಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲಿಂಗೇಗೌಡರನ್ನು ಕೊಬ್ಬರಿ ಕಳ್ಳ ಎಂದಿದ್ದು ತಪ್ಪು
14 ರಂದು ಬೃಹತ್ ಸಾಮೂಹಿಕ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞ