ಕನ್ನಡಪ್ರಭ ವಾರ್ತೆ ಗುಬ್ಬಿ

ಅರಸಿಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ ಶಿವಲಿಂಗೇಗೌಡರನ್ನು ಅಧಿವೇಶನದಲ್ಲಿ ಕೊಬ್ಬರಿ ಕಳ್ಳ ಎಂದಿರುವುದು ಸರಿಯಲ್ಲ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಬಿದರೆ, ಕಾಶಿಮಠ ನಿಂಬೆಕಟ್ಟೆ ಹಾಗೂ ಮಾರನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು ಶಿವಲಿಂಗೇಗೌಡರು ಹಿರಿಯ ರಾಜಕಾರಣಿ ಆದರೆ ಒಂದು ವರ್ಷದಿಂದಲೂ ಶಿವಲಿಂಗೇಗೌಡರನ್ನ ಮಂಗಳೂರು ಕಡೆಯ ಮೂರು ಜನ ಶಾಸಕರು ಹೊಸದಾಗಿ ಗೆದ್ದಿದ್ದಾರೆ. ಅವರು ಶಿವಲಿಂಗೇಗೌಡರನ್ನು ಟಾರ್ಗೆಟ್ ಮಾಡಿ ಅವರು ಮಾತನಾಡಲು ಪ್ರಾರಂಭಿಸಿದರೆ ಮೈಕ್ ಆನ್ ಮಾಡಿಕೊಂಡು ಕೊಬ್ಬರಿಕಳ್ಳ ಎಂದು ಕೂಗಾಡಿದರು. ಅದಕ್ಕೆ ಶಿವಲಿಂಗೇಗೌಡರು ಸಿಟ್ಟಾಗಿ ಅವರನ್ನು ಬೈದಿದ್ದಾರೆ. ಆದರೆ ಅಧಿವೇಶನದಲ್ಲಿ ಇವೆಲ್ಲ ಮಾತನಾಡಬಾರದಿತ್ತು. ಅಧಿವೇಶನವನ್ನು ಇಡೀ ದೇಶವೇ ನೋಡುತ್ತಿರುತ್ತದೆ ಎಂದರು. ಗುಬ್ಬಿ ತಾಲೂಕಿನಲ್ಲಿ ಈಗಾಗಲೇ ಸಿಸಿಟಿವಿಗಳನ್ನು ಅಳವಡಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಸುಮಾರು 280 ಸಿಸಿಟಿವಿಗಳನ್ನು ತಾಲೂಕಿನ ಒಳಗಡೆ ಹಾಗೂ ಹೊರಗಡೆ ಯಾರೇ ಬಂದರು ನೋಡುವ ದೃಷ್ಟಿಯಿಂದ ಅಳವಡಿಸಲು ಎಚ್ಎಎಲ್ ಕಾರ್ಖಾನೆ ವತಿಯಿಂದ ಮಾಸ್ಟರ್ ಪ್ಲಾನ್ ನೀಡಿದ್ದಾರೆ. ಲವೇ ತಿಂಗಳಲ್ಲಿ ಎಲ್ಲಾ ಕಡೆ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಯತೀಶ್, ನಿಂಗಪ್ಪ, ಪಿಡಿಓಗಳಾದ ಯುವರಾಜು, ಅಶೋಕ್,ಬಸವನಾಳು, ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದರಾಜು, ಸಾತೇನಹಳ್ಳಿ ರಾಜಣ್ಣ , ವತ್ಸಲ, ಮೈಲಾರಯ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.