ಕನ್ನಡಪ್ರಭ ವಾರ್ತೆ ಶಿವಮೊಗ್ಗ ಈಶ್ವರಾನಂದಪುರಿ ಸ್ವಾಮೀಜಿಗೆ ಅವಮಾನ ಆಗಿದ್ದರೆ ಅದು ಹಿಂದು ಸಮಾಜಕ್ಕೆ ಮಾಡಿದ ಅವಮಾನ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶ್ರೀಗಳು ಕನಕದಾಸರ ಅನುಯಾಯಿಗಳು ಆಗಿದ್ದು, ಮುಖ್ಯಮಂತ್ರಿ ಅವರು ಈ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಬಯಲಿಗೆ ಎಳೆಯಬೇಕು. ಈ ಘಟನೆ ಸತ್ಯವಾಗಿದ್ದರೆ ಸಂಬಂಧಪಟ್ಟವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇದು ಸತ್ಯವಾಗಿಲ್ಲವೆಂದರೆ ಇದಕ್ಕೆ ಕಾರಣವಾದರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಡ್ವಾಣಿಗೆ ಭಾರತ ರತ್ನ ಸಂತಸದಾಯಕ:ರಾಜಕೀಯ ಭೀಷ್ಮ, ಬಿಜೆಪಿ ಕಾರ್ಯಕರ್ತರನ್ನು ಸಂಘಟನೆಯಲ್ಲಿ ತೊಡಗಿಸಿ ರಾಮಮಂದಿರ ಹೋರಾಟಕ್ಕೆ ರಥಯಾತ್ರೆ ಮೂಲಕ ಇಡೀ ದೇಶವನ್ನು ಒಗ್ಗೂಡಿಸಿದ ಎಲ್.ಕೆ. ಅಡ್ವಾನಿ ಅವರಿಗೆ ಭಾರತ ರತ್ನ ದೊರೆತಿರುವುದು ಸಂತೋಷ ತಂದಿದೆ ಎಂದು ಈಶ್ವರಪ್ಪ ಹೇಳಿದರು.
ಸ್ಥಾನಮಾನ ಸಿಕ್ಕಿಲ್ಲ, ಟಿಕೆಟ್ ಸಿಕ್ಕಿಲ್ಲ ಎಂದು ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕಾರಣಿಗಳನ್ನು ನಾವು ನೋಡುತ್ತೇವೆ. ಆದರೆ, ಬಿಜೆಪಿಯ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಮುಂಬೈನಲ್ಲಿ ಮುಂದಿನ ಪ್ರಧಾನಿ ಯಾರು ಎಂಬ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅಟಲ್‍ಜೀ ಹೆಸರು ಮತ್ತು ಅಡ್ವಾಣಿ ಹೆಸರು ಕೇಳಿಬರುತ್ತಿತ್ತು. ಅಂದಿನ ಸಭೆಯಲ್ಲಿ ಮೊದಲು ಮಾತನಾಡಿದ ಅಡ್ವಾಣಿ ಅವರು ಅಟಲ್‍ಜೀ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿಯೇ ಬಿಟ್ಟರು. ಅದು ಪ್ರತಿಯೊಬ್ಬ ಕಾರ್ಯಕರ್ತನ ಹೃದಯದಲ್ಲಿ ಅವರ ತ್ಯಾಗ ಮತ್ತು ಸ್ನೇಹ ಸಂಬಂಧ ಹಾಗೂ ಬಿಜೆಪಿಯ ನಾಯಕರ ಮನಸ್ಥಿತಿ ಮನಸ್ಸಿನಲ್ಲಿ ಬೇರೂರಿದೆ ಎಂದರು.
ಕೋಟ್‌ತುರ್ತು ಪರಿಸ್ಥಿತಿ ಸಂದರ್ಭ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ವಾಧಿಕಾರದಿಂದ ಭಾರತ್ ಮಾತಾ ಕೀ ಜೈ ಎಂದ ಎಲ್.ಕೆ.ಅಡ್ವಾಣಿ, ಅಟಲ್‍ಜೀ ಸೇರಿದಂತೆ ಎಲ್ಲ ಬಿಜೆಪಿ ಕಾರ್ಯಕರ್ತರನ್ನು ಜೈಲಿಗಟ್ಟಿದ್ದರು. ಆದರೆ, ಖರ್ಗೆ ಅವರು ಮೋದಿ ಸರ್ವಾಧಿಕಾರಿ ಎಂದು ಹೇಳಿದಾಗ ತುರ್ತು ಪರಿಸ್ಥಿತಿಯ ನೆನಪಾಯಿತು. ಖರ್ಗೆ ಅವರು ಇಂದಿರಾ ಗಾಂಧಿಯ ಸರ್ವಾಧಿಕಾರವನ್ನು ಒಮ್ಮೆ ನೆನಪಿಸಿಕೊಳ್ಳಲಿ
- - -