ಕಾಲೇಜುಗಳು ಒಳ್ಳೆಯ ಪ್ರವೃತ್ತಿ ಬೆಳೆಸುವ ಕೇಂದ್ರಗಳಾಗಲಿ

KannadaprabhaNewsNetwork |  
Published : Nov 13, 2024, 12:46 AM IST
ಸಿಂದಗಿ | Kannada Prabha

ಸಾರಾಂಶ

ಪಠ್ಯಪೂರಕ ಚಟುವಟಿಕೆಗಳ ಸಮಾರಂಭ ಉದ್ಘಾಟನೆಯಲ್ಲಿ ಮಾಜಿ ಎಂಎಲ್ಸಿ ಅರುಣ ಶಹಾಪೂರ ಅವರು ಹಲವಾರು ಸಲಹೆ ನೀಡಿದರು.

ಕನ್ನಡಪ್ರೌಭ ವಾರ್ತೆ ಸಿಂದಗಿ

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪದವಿಯ ಹಂತ ಅತ್ಯಂತ ಪ್ರಮುಖವಾದದ್ದು, ಕಾಲೇಜುಗಳು ವೃತ್ತಿಗಾಗಿ ಮಾತ್ರ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸದೇ ಅವರಲ್ಲಿ ಒಳ್ಳೆಯ ಪ್ರವೃತ್ತಿಗಳನ್ನು ಬೆಳೆಸುವ ಕೇಂದ್ರಗಳಾಗಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪೂರ ಹೇಳಿದರು.

ನಗರದ ಶ್ರೀಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ಪಠ್ಯಪೂರಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಕಾಲ ಬದಲಾಗಿದೆ ಎನ್ನುತ್ತೇವೆ. ಆದರೆ, ಬದಲಾಗಿರುವುದು ಕಾಲವಲ್ಲ ನಮ್ಮ ಚಿಂತನೆ, ಪ್ರವೃತ್ತಿ ಮತ್ತು ಮಾನಸಿಕತೆ. ಸಂಕ?್ಟದ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ ಪುಟಿದೇಳಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಅಗತ್ಯವಿದೆ. ಕಾಲೇಜುಗಳೂ ಸಾಧಕರ ಛಾವಣಿಗಳಾಗಬೇಕು. ಕೇವಲ 11 ವರ್ಷದ ಅವಧಿಯಲ್ಲಿ ಈ ಮಹಾವಿದ್ಯಾಲಯವು ಅಗಾಧ ಸಾಧನೆ ಮಾಡುವ ಮೂಲಕ, ನುರಿತ ಉಪನ್ಯಾಸಕರನ್ನು ಹೊಂದಿರುವ ಕಾಲೇಜು ಮಕ್ಕಳ ಜ್ಞಾನದಾಹ ನೀಗಿಸುತ್ತಿರುವುದು ಶ್ಲಾಘನೀಯ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಮಾತನಾಡಿ, ಪರಿಶ್ರಮ, ತಾಳ್ಮೆ, ಶಿಸ್ತು ಮತ್ತು ಪಾಲಕರ ಪ್ರೋತ್ಸಾಹ ಇದ್ದರೇ ಏನು ಬೆಕಾದರೂ ಸಾಧಿಸಬಹುದು. ಈಗಿನ ವಿದ್ಯಾರ್ಥಿಗಳು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು. ಪ್ರತಿ ಮಗುವಿನಲ್ಲಿಯೂ ವಿಭಿನ್ನ ಪ್ರತಿಭೆಯಿರುತ್ತದೆ. ಪ್ರತಿಭೆಯನ್ನು ಗುರುತಿಸಿ ಪೋಷಿಸುವುದು ಅಗತ್ಯ. ಶೈಕ್ಷಣಿವಾಗಿ ಎತ್ತರಕ್ಕೆ ಬೆಳೆದರೂ ಕೂಡ, ಸಂಸ್ಕೃತಿ, ಪರಂಪರೆ ಮರೆಯಬಾರದು. ಅಕ್ಷರ ಜ್ಞಾನದ ಜತೆಗೆ ನೀತಿಯುತ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳು ಮುಖ್ಯವಾಗಿದೆ ಎಂದು ತಿಳಿಸಿದರು.

ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ ಎಸ್.ಎಂ.ಪೂಜಾರಿ ಅಧ್ಯಕ್ಷೀಯ ಮಾತಗಳನ್ನಾಡಿದರು. ಕಾರ್ಯಧ್ಯಕ್ಷ ಕಾಯಾಧ್ಯಕ್ಷ ಸಾಹೇಬಗೌಡ ದುದ್ದಗಿ ಸ್ವಾಗತಿಸಿದರು. ಪ್ರಿಯಾಂಕ ಕಕ್ಕಳಮೇಲಿ ಚನ್ನಮ್ಮ ಹಿರೇಮಠ ನಿರೂಪಿಸಿದರು. ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಿನಾಜ್ ಗೋಲಗೇರಿ ವಂದಿಸಿದರು. ಈ ವೇಳೆ ಮಹಿಳಾ ಪುಪೂ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಹೈಯಾಳಕರ, ಭೀಮನಗೌಡ ಸಿಂಗನಳ್ಳಿ, ಶಿವಾನಂದ ರೋಡಗಿ, ಮಲ್ಲಿಕಾರ್ಜುನ ಅಲ್ಲಾಪೂರ, ಗವಿಸಿದ್ದಪ್ಪ ಆನೆಗುಂದಿ, ಡಾ.ಬಾಹುಬಲಿ ಒನಕುದರಿ, ಮಹಾವಿದ್ಯಾಲಯದ ಸಿಬ್ಬಂದಿಯರಾದ ಮಹಾಂತೇಶ ನೂಲಾನವರ, ಉಮೇಶ ಪೂಜೇರಿ, ಅನಿಲಕುಮಾರ ರಜಪೂತ, ಗಿರೀಶ ಕುಲಕರ್ಣಿ, ಶೃತಿ ಹೂಗಾರ, ಮುರ್ತುಬಿಬೇಗಂ ಬಿರಾದಾರ, ಪ್ರಿಯಾಂಕ ಬ್ಯಾಕೋಡ, ಹೇಮಾ ಹಿರೇಮಠ, ಮಂಗಳಾ ಈಳಗೇರ, ಡಿ.ಎಂ.ಪಾಟೀಲ, ಮಮತಾ ಹರನಾಳ, ಶಿವಶಂಕರ ಕುಂಬಾರ ಮತ್ತು ಮುದ್ದು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ