ಕಾಂಗ್ರೆಸ್ಸಿಗರು ತಮ್ಮ ಮನೆಗೆ ಟಿಪ್ಪು ಹೆಸರಿಡಲಿ

KannadaprabhaNewsNetwork |  
Published : Dec 18, 2023, 02:00 AM IST
17ಕೆಡಿವಿಜಿ1-ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನೇಕಾರ ಸಮಾಜದ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು. ..............17ಕೆಡಿವಿಜಿ2-ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನೇಕಾರ ಸಮಾಜದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ಸಚಿವ ಎಂ.ಪಿ.ರೇಣುಕಾಚಾರ್ಯಗೆ ಸಮಾಜದ ಯುವಕರು ಸನ್ಮಾನಿಸಿದರು. | Kannada Prabha

ಸಾರಾಂಶ

ಕಾಂಗ್ರೆಸ್‌ ಸಚಿವರು ತಮ್ಮ ಮನೆಗಳಿಗೆ ಟಿಪ್ಪು ಮಂಜಿಲ್‌, ಔರಂಗಜೇಬ್ ಮಂಜಿಲ್ ಅಥವಾ ನಿವಾಸ ಅಂತಾ ಹೆಸರಿಟ್ಟುಕೊಳ್ಳಲಿ. ಆದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ನಾವು ತೀವ್ರವಾಗಿ ಖಂಡಿಸುತ್ತೇವೆ. ಓಟು ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಪ ಮಾಡುತ್ತಿದ್ದಾರೆ ಎಂದ ಎಂ.ಪಿ.ರೇಣುಕಾಚಾರ್ಯ

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಪ್ರಸ್ತಾಪಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ಷೇಪ । ಅಲ್ಪಸಂಖ್ಯಾತರ ಓಲೈಕೆಗೆ ಟಿಪ್ಪು ಜಪ

ಕನ್ನಡಪ್ರಭ ವಾರ್ತೆ ದಾವಣಗೆರೆ

ಟಿಪ್ಪು, ಬಾಬರ್‌, ಔರಂಗಜೇಬ, ಘಜ್ನಿ ಮಹಮ್ಮದ್ ಹೆಸರುಗಳು ಮಾತ್ರವೇ ಕಾಂಗ್ರೆಸ್ಸಿಗರ ನೆನಪಿಗೆ ಬರುತ್ತಿದ್ದು, ಇದೇ ಕಾರಣಕ್ಕೆ ಕಾಂಗ್ರೆಸ್‌ ನ ಸಚಿವರು ಟಿಪ್ಪು ಹೆಸರನ್ನೇ ಜಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ ಸಚಿವರು ತಮ್ಮ ಮನೆಗಳಿಗೆ ಟಿಪ್ಪು ಮಂಜಿಲ್‌, ಔರಂಗಜೇಬ್ ಮಂಜಿಲ್ ಅಥವಾ ನಿವಾಸ ಅಂತಾ ಹೆಸರಿಟ್ಟುಕೊಳ್ಳಲಿ. ಆದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ನಾವು ತೀವ್ರವಾಗಿ ಖಂಡಿಸುತ್ತೇವೆ. ಓಟು ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಕುಕ್ಕರ್ ಬ್ಲಾಸ್ಟ್ ಆದಾಗ ಅಲ್ಪಸಂಖ್ಯಾತರು ತಮ್ಮ ಸಹೋದರರೆಂದು ಇದೇ ಡಿಸಿಎಂ ಡಿ.ಕೆ.ಶಿವಕುಮಾರ ಹೇಳುತ್ತಾರೆ. ಮೈಸೂರು ಮಹಾರಾಜ, ಸುತ್ತೂರು ಶ್ರೀಗಳಂತಹವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲಿ. ಆದರೆ, ಓಟು ಬ್ಯಾಂಕ್‌ಗಾಗಿ ಟಿಪ್ಪುನಂತಹ ಮತಾಂಧರ ಹೆಸರಿಡುವುದಲ್ಲ. ಯಾವುದೇ ಕಾರಣಕ್ಕೂ ಟಿಪ್ಪು ಹೆಸರಿಡಲು ನಾವು ಬಿಡುವುದೂ ಇಲ್ಲ ಎಂದು ಆಕ್ರೋಶ ಹೊರ ಹಾಕಿದರು. ಘೋಷಣೆ, ಭರವಸೆಗಳು ಮಾತಿಗೆ ಸೀಮಿತ:

ಸಿದ್ದರಾಮಯ್ಯಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬರ ಪರಿಹಾರವಾಗಿ ಎಕರೆಗೆ 25 ಸಾವಿರ ರು. ನೀಡಲಿ. ನಿಮ್ಮ ಘೋಷಣೆಗಳು, ಭರವಸೆಗಳು ಕೇವಲ ಮಾತಿಗೆ ಸೀಮಿತವಾಗಿದ್ದು, ಕಾರ್ಯ ರೂಪಕ್ಕಂತೂ ಬಂದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್‌ ಬಂದಿಲ್ಲ. ರೈತರಿಗೆ ನೀವು ಕೊಟ್ಟ ಭರವಸೆ ಈಡೇರಿಲ್ಲ. ಶೀಘ್ರವೇ ಕಾಂಗ್ರೆಸ್ ಸರ್ಕಾರದ ವಿರುದ್ದ ಹೊನ್ನಾಳಿ ಕ್ಷೇತ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಡಿಕೆಶಿಯಿಂದ ಔತಣಕ್ಕೆ ಆಹ್ವಾನ:

ಕಾಂಗ್ರೆಸ್ಸಿಗರ ಔತಣಕೂಟಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಹ್ವಾನ ಮಾಡಿದ್ದಕ್ಕೆ ಕೆಲವು ಶಾಸಕರು ಮಾತ್ರ ಹೋಗಿದ್ದಾರೆ. ಔತಣಕೂಟಕ್ಕೆ ಹೋಗಿದ್ದಾರೆಂದ ಮಾತ್ರಕ್ಕೆ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೆಂದು ಅರ್ಥನಾ? ಸ್ವತಃ ಶಾಸಕರೇ ಹೇಳಿದ್ದಾರಲ್ಲವೇ? ಡಿಕೆಶಿ ಕಡೆಯಿಂದ ಆಹ್ವಾನವಿತ್ತು. ಹಾಗಾಗಿ ಔತಣ ಕೂಟಕ್ಕೆ ಹೋಗಿ ಬಂದಿದ್ದಾಗಿ ಪ್ರತಿಕ್ರಿಯಿಸಿದ್ದಾರಲ್ಲ ಎಂದು ಪ್ರಶ್ನೆಯೊಂದಕ್ಕೆ ರೇಣುಕಾಚಾರ್ಯ ತಮ್ಮ ಶಾಸಕರ ಪರ ಬ್ಯಾಟ್ ಬೀಸಿದರು.

ನಂತರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನೇಕಾರ ಸಮಾಜ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು. ಬಿಜೆಪಿ ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಪ್ರವೀಣ ಜಾಧವ್, ರಾಜು ವೀರಣ್ಣ, ಅಣಜಿ ಬಸವರಾಜ ಇತರರಿದ್ದರು.

.........................

ಯತ್ನಾಳ್ ಹುಚ್ಚುನಾಯಿ ಇದ್ದಂತೆ, ನಾಯಿ ನಿಯತ್ತೂ ಇಲ್ಲದ ವ್ಯಕ್ತಿ

ನಾಯಿ ಬೊಗಳಿದರೆ ಆನೆಯಂತಿರುವ ಯಡಿಯೂರಪ್ಪ ತೂಕ ಕಡಿಮೆ ಆಗುತ್ತಾ: ರೇಣುಕಾಚಾರ್ಯ

ದಾವಣಗೆರೆ: ಬಸವನಗೌಡ ಪಾಟೀಲ್ ಯತ್ನಾಳ್‌ ಒಂದು ಹುಚ್ಚುನಾಯಿ ಇದ್ದಂತೆ, ಯತ್ನಾಳ್‌ ಬಗ್ಗೆ ಮಾತನಾಡುವುದಕ್ಕೂ ನನಗೆ ಅಸಹ್ಯವೆನಿಸುತ್ತದೆ. ನಾಯಿಗೆ ಇರುವ ನಿಯತ್ತೂ ಯತ್ನಾಳ್‌ಗೆ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಆನೆ ಬೀದಿಗಿಳಿದಾಗ ಹುಚ್ಚು ನಾಯಿ ಬೊಗಳುತ್ತಿರುತ್ತದೆ. ಹಾಗೆ ನಾಯಿ ಬೊಗಳಿದರೆ ಆನೆಗೆ ಇರುವ ಆನೆ ತೂಕ ಕಡಿಮೆ ಆಗುತ್ತದಾ ಎಂದು ಸರ್ವಜ್ಞನ ವಚನ ಹೇಳುತ್ತಲೇ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯೇಂದ್ರ, ಯಡಿಯೂರಪ್ಪಗೆ ಟೀಕೆ ಮಾಡಿದರೆ ಅದು ನರೇಂದ್ರ ಮೋದಿ ಸೇರಿ ಕೇಂದ್ರ ವರಿಷ್ಠರ ಟೀಕಿಸಿದಂತೆ. ಯಡಿಯೂರಪ್ಪ ಆನೆ ಇದ್ದಂತೆ. ಬಿಎಸ್‌ವೈ ಬಗ್ಗೆ ಮಾತನಾಡೋರು ಹುಚ್ಚುನಾಯಿ ಇದ್ದಂತೆ. ಹುಚ್ಚುನಾಯಿ ಬಗ್ಗೆ ಮಾತನಾಡುವುದೂ ವ್ಯರ್ಥ. ಇನ್ನು ಆ ಹುಚ್ಚು ನಾಯಿ ಬಗ್ಗೆ ಮಾತನಾಡಬಾರದೆಂದುಕೊಂಡಿದ್ದೇನೆ ಎಂದರು.

ಶಿಕಾರಿಪುರದಲ್ಲಿ ವಿಜಯೇಂದ್ರಗೆ ಸೋಲಿಸಲು ಕುತಂತ್ರ ಮಾಡಿದವರು ಇಂತಹವರೆ. ಗೆದ್ದರೆ ದೊಡ್ಡ ನಾಯಕನಾಗುತ್ತಾನೆಂದು ಸೋಲಿಸಲು ಕುತಂತ್ರ ಮಾಡಿದ್ದರು. 2018ರಲ್ಲಿ ಸಚಿವ ಸ್ಥಾನ ನೀಡಲಿಲ್ಲವೆಂದು ಯತ್ನಾಳ್‌ ಹೀಗೆಲ್ಲ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ಹಿರಿತನ ಯತ್ನಾಳ್ ಗೆ ಇದೆ? ಇದೇ ರೀತಿ ಬೊಗಳುವುದೇ ಸೀನಿಯಾರಿಟಿನಾ? ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಯತ್ನಾಳ್‌ಗೆ ಯಾರು ಹೀಗೆಲ್ಲಾ ಬೊಗಳಲು ಹೇಳಿಕೊಟ್ಟಿದ್ದಾರೆಂದು ಹೇಳಲಿ ಎಂದು ರೇಣುಕಾಚಾರ್ಯ ಹರಿಹಾಯ್ದರು.

ಯತ್ನಾಳ್‌ ಎನ್ನುವ ಆ ಮನುಷ್ಯನಿಗೆ ನಿಯತ್ತಿಲ್ಲ

ಜೆಡಿಎಸ್‌ಗೆ ಹೋಗಿದ್ದ ಯತ್ನಾಳ್ ಗೆ ಮತ್ತೆ ಬಿಜೆಪಿಗೆ ಕರೆ ತಂದಿದ್ದೇ ಯಡಿಯೂರಪ್ಪ. ಮಾತೃಪಕ್ಷಕ್ಕೆ ವಾಪಸ್‌ ಕರೆ ತಂದ ವ್ಯಕ್ತಿಯ ಬಗ್ಗೆಯೇ ಹಾದಿ ಬೀದಿಯಲ್ಲಿ ಹಗುರವಾಗಿ ಮಾತನಾಡುವ ಯತ್ನಾಳ್‌ ಎನ್ನುವ ಆ ಮನುಷ್ಯನಿಗೆ ನಿಯತ್ತು ಅನ್ನೋದೇ ಇಲ್ಲ. ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ