ಹುಬ್ಬಳ್ಳಿ:
ಅವರು ಬೆಂಗಳೂರಿನ ಪೋರ್ಥವೆ ಫೌಂಡೇಶನ್, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಪಂಚಾಯಿತಿ ಆಶ್ರಯದಲ್ಲಿ ನಗರದ ಸರ್ಕಾರಿ ಅಂಧರ ಪಾಠಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನದ ಪ್ರಯುಕ್ತ 7 ದಿನದ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಸಿ ಕೊಡುವಲ್ಲಿ ಅನೇಕ ಸಮಸ್ಯೆಗಳಾಗುತ್ತಿವೆ. ಆ ಸಮಸ್ಯೆಗಳಿಗೆ ಕಾರಣ ಹಾಗೂ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎನ್ನುವುದನ್ನು ಅಧಿಕಾರಿಗಳು ಗಮನಹರಿಸಬೇಕಿದೆ. ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಗವಿಕಲರಿಗೆ ಸೌಲಭ್ಯಗಳನ್ನು ಸರ್ಕಾರದಿಂದ ಮತ್ತು ಪಂಚಾಯಿತಿ ಅನುದಾನದಲ್ಲಿ ಹಂತ-ಹಂತವಾಗಿ ಹೇಗೆ ಒದಗಿಸಬೇಕು ಎನ್ನುವುದನ್ನು ಅಧಿಕಾರಿಗಳಿಗೆ ಸಲಹೆ ನೀಡಿದರು.
ಹುಬ್ಬಳ್ಳಿಯ ಬಿಐಇಆರ್‌ಟಿ ಆದ ಕೆ.ಎಂ. ಗದಗೇರಿ ಮಾತನಾಡಿ, ಅಂಗವಿಕಲರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುವಲ್ಲಿ ವಿ.ಆರ್.ಡಬ್ಲ್ಯೂ. ಅವರ ಕರ್ತವ್ಯ ಪ್ರಮುಖವಾದದ್ದು ಎಂದರು.ಶಾಲೆಯ ಸಂಯೋಜಕ ಬಸವರಾಜ್ ಮ್ಯಾಗೇರಿ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ರಾಜಕುಮಾರ ಸಾಭೋಜಿ, ಶಿಕ್ಷಕ ಅಣ್ಣಪ್ಪ ಕೋಳಿ, ಹುಬ್ಬಳ್ಳಿಯ ಎಂ.ಆರ್.ಡಬ್ಲ್ಯೂ. ಮಹಾಂತೇಶ ಕುರ್ತಕೋಟಿ, ಎಪಿಡಿ ಸಂಸ್ಥೆಯ ಪಿಜಿಯೋಥೆರಪಿಸ್ಟ ಹೊನ್ನಪ್ಪಸ್ವಾಮಿ ಸೇರಿದಂತೆ ಹಲವರಿದ್ದರು. ಜಿಲ್ಲಾ ಸಂಯೋಜಕ ಆಶಿಫ್ ಆಡಿನ ವಂದಿಸಿದರು.