ಗಂಗಾವತಿ: ಆರ್‌ಎಸ್‌ಎಸ್ ಮೇಲೆ ಇಡಿ ದಾಳಿ ಮಾಡಿದಾಗ ಇವರ ನಾಟಕ ಬಯಲಾಗುತ್ತದೆ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದರು.
ರಾಜ್ಯದಲ್ಲಿ ಎಸ್‌ಐಆರ್ ಕಾರ್ಯ ಚೆನ್ನಾಗಿ ನಡೆದಿದೆ. ಇದರಿಂದ ಬಿಜೆಪಿಗೆ ಟೆನ್ಷನ್ ಶುರುವಾಗಿದೆ. ಎಸ್‌ಐಆರ್ ಕಾಂಗ್ರೆಸ್ ಪಕ್ಷ ಮಾಡುತ್ತಿಲ್ಲ. ಚುನಾವಣಾ ಆಯೋಗ ಮಾಡುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಸಿಗಬೇಕು ಎನ್ನುವುದು ನಮ್ಮ ವಾದವಾಗಿದೆ ಎಂದರು.
ಯಾವ ಹಂತದಲ್ಲಿ ರಾಜ್ಯ ಸರ್ಕಾರ ದುರಪಯೋಗ ಮಾಡುತ್ತಿದೆ ಎನ್ನುವುದರ ಬಗ್ಗೆ ಸಾಕ್ಷಿ ನೀಡಲಿ. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಕುಮಾರಸ್ವಾಮಿ ಅವರು ವಿನಾ ಕಾರಣ ಮಾತನಾಡುತ್ತಿದ್ದಾರೆ ಎಂದು ಹೇಳಿದರು.ಪಶ್ಚಿಮ ಬಂಗಾಳ ಹಾಗೂ ಮದ್ಯಪ್ರದೇಶದಲ್ಲಿ 86 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಿದ್ದಾರೆ ಇದಕ್ಕೆ ಉತ್ತರ ನೀಡಲಿ ಎಂದರು.
ಈಗಾಗಲೇ ಅಯೋಧ್ಯೆಯಲ್ಲಿ ನಡೆದಿರುವ ಕಾಣಿಕೆ ಹುಂಡಿಯ ಭ್ರಷ್ಟಾಚಾರ ಬಯಲಾಗಿದ್ದು, ಈಗ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯ ಕಾಣಿಕೆ ಹುಂಡಿಗೆ ಕೈ ಹಾಕಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಶಾಸಕ ತಂಗಡಗಿ ಅರೋಪಿಸಿದರು. ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಬಂದರೆ ಹುಷಾರ್ ಅಂತ ಹೇಳುವ ಪರಿಸ್ಥಿತಿ ಒದಗಿ ಬಂದಿದೆ ಎಂದರು.
ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ವೇಳೆ ತಮಗೆ ಅವಕಾಶ ಸಿಕ್ಕೆ ಸಿಗುತ್ತದೆ, ನಾನು ಪ್ರಬಲ ಆಕಾಂಕ್ಷಿ ಆಗಿದ್ದೇನೆ ಎಂದರು.