ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾವರಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಆವೆಸ್ಪೈರ್ ಫೌಂಡೇಷನ್ ಮತ್ತು ಸ್ಕೇಲಾರ್ ಕಂಪನಿಗಳ ವತಿಯಿಂದ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ನೈರ್ಮಲ್ಯಕ್ಕೆ ಸಂಬಂಧಿಸಿದ ಮತ್ತು ಪುಸ್ತಕಗಳು, ಪಠ್ಯ, ಸಹಪಠ್ಯ ಚಟುವಟಿಕೆಗಳಿಗೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಸಿಎಸ್‌ಆರ್ ನಿಧಿ ಸದ್ಬಳಕೆಯಾಗಲಿಸಿಎಸ್.ಆರ್ ಫಂಡನ್ನು ಗಡಿಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಹಕಾರ ನೀಡುತ್ತಿರುವ ಸ್ಕೇಲಾರ್ ಕಂಪನಿ,ಆವಸ್ಪೈರ್ ಫೌಂಡೇಷನ್ ನಂತಹ ಹಲವಾರು ಸಂಘ ಸಂಸ್ಥೆಗಳು ಮಾಡುತ್ತಿರುವ ಸೇವೆಯನ್ನು ಎಂದಿಗೂ ಮರೆಯಲಾಗದು ಎಂದ ಅವರು ಇಂತಹ ಸಂಘ ಸಂಸ್ಥೆಗಳು ನೀಡುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಕೇಲಾರ್ ಕಂಪನಿಯ ನಿರ್ದೇಶಕ ಫ್ರಾಂಕ್, ಆಸ್ಟೈರ್ ಫೌಂಡೇಷನ್‍ನ ನಿದೇರ್ಶಶಕಿ ಲಾವಣ್ಯ, ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಅರ್ಚನಾ, ಶಾಲಾ ಶಿಕ್ಷಕರು ಮತ್ತಿತರರು ಇದ್ದರು.