ಹೂಗಾರ ಸಮುದಾಯ ಅಭಿವೃದ್ಧಿಗಾಗಿ ಒಗ್ಗಟ್ಟಾಗಲಿ: ಡಾ.ಸಿದ್ದಲಿಂಗಪ್ಪ

KannadaprabhaNewsNetwork |  
Published : Oct 10, 2026, 03:15 AM IST
ಚಿತ್ರ 9ಬಿಡಿಆರ್50 | Kannada Prabha

ಸಾರಾಂಶ

ವೀರಶೈವ ಧರ್ಮಕ್ಕೆ ಸೇರಿದ ಹೂಗಾರ ಸಮುದಾಯ ಆರ್ಥಿಕ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಾಗಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್

ವೀರಶೈವ ಧರ್ಮಕ್ಕೆ ಸೇರಿದ ಹೂಗಾರ ಸಮುದಾಯ ಆರ್ಥಿಕ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಾಗಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.

ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾದಿಂದ ಗುರುವಾರ ಆಯೋಜಿಸಿದ್ದ ಕಾಯಕಯೋಗಿ ಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಹಾಗೂ ಹೂಗಾರ ಸಮಾಜದ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹೂಗಾರ ಸಮಾಜವು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದೆ. ಎಲ್ಲ ಜಾತಿ, ಧರ್ಮದವರೊಂದಿಗೆ ಸೌಹಾರ್ದತೆಯಿಂದ ಬದುಕುವ ಪರಂಪರೆಯನ್ನು ಹೊಂದಿರುವ ಸಮು ದಾಯ ಸುಧಾರಣೆಗೆ ಶೈಕ್ಷಣಿಕ ಜಾಗೃತಿ ಅಗತ್ಯ. ಅದಕ್ಕಾಗಿ ಶಿಕ್ಷಣಕ್ಕೆ ಒತ್ತು ನೀಡಬೇಕು.

ಸಮಾಜದ ಸಮಗ್ರ ಅಭಿವೃದ್ಧಿಗೆ ಬೇಕಾಗುವ ಎಲ್ಲ ನೆರವು ನೀಡಲು ಬದ್ಧನಾಗಿದ್ದೇನೆ. ಹಳ್ಳಿಖೇಡ(ಬಿ)ಯಲ್ಲಿ ಸಮುದಾಯ ಭವನ ನಿರ್ಮಾಣ ಸೇರಿದಂತೆ ಸಮಾಜ ದ ವಿವಿಧ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಹೂಗಾರ ಮಾತನಾಡಿ, ಹೂಗಾರ ನಿಗಮ ಮಂಡಳಿಗೆ ಸರ್ಕಾರ ಸಮರ್ಪಕ ಅನುದಾನ ಒದಗಿಸಿ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಮಾಜದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಹ ಕಾರ್ಯದರ್ಶಿ ದುರ್ಯೋಧನ ಹೂಗಾರ ಮಾತನಾಡಿ, ಹೂವಿನಂತೆ ಮೃದು ಮನಸ್ಸಿನ ಹೂಗಾರ ಸಮಾಜದ ಸಂಘಟನೆ ಇನ್ನಷ್ಟು ಬಲಶಾಲಿ ಯಾಗ ಬೇಕು. ಎಲ್ಲ ರಾಜಕೀಯ ಪಕ್ಷಗಳು ಈ ಸಮಾಜದ ನೆರವಿಗೆ ಧಾವಿಸಬೇಕೆಂದರು

ಜಿಲ್ಲಾ ಗೌರವಾಧ್ಯಕ್ಷ ರೇವಣಪ್ಪ ಹೂಗಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಹೂಗಾರ ಮಾತನಾಡಿದರು. ಚಿಕ್ಕಮಠ ಸಂಸ್ಥಾನದ ಪಂಡಿತಾರಾಧ್ಯ ಶಿವಾ ಚಾರ್ಯರು ಆಶೀರ್ವದಿಸಿದರು. ಸಮಾವೇಶಕ್ಕೂ ಮೊದಲು ಹಳ್ಳಿಖೇಡ (ಬಿ) ಪಟ್ಟಣದ ಬಸವೇಶ್ವರ ವೃತ್ತದಿಂದ ಆರ್ಯ ಸಮಾಜದವರೆಗೆ ಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವದ ಅಂಗವಾಗಿ ಭವ್ಯ ಮೆರವಣಿಗೆ ಜರುಗಿತು.

ರಾಜ್ಯ ಉಪಾಧ್ಯಕ್ಷ ಪಡಿಯಪ್ಪ ಹೂಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಹೂಗಾರ, ರಾಜ್ಯ ಸಂಚಾಲಕ ವಿಶ್ವನಾಥ ಹೂಗಾರ, ಸಂಘಟನಾ ಕಾರ್ಯ ದರ್ಶಿ ಅಶೋಕ ಹೂಗಾರ, ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಹೂಗಾರ, ತಾಲೂಕು ಅಧ್ಯಕ್ಷ ಪ್ರವೀಣ ಹೂಗಾರ, ಪ್ರಧಾನ ಕಾರ್ಯದರ್ಶಿ ಮಹೇಶ್ ಹೂಗಾರ ಸೇರಿದಂತೆ ಸಮಾಜದ ಮುಖಂಡರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

- ಜಲಸಂಕಷ್ಟಕ್ಕೆ ಪರಿಹಾರಾತ್ಮಕ, ಮಾರ್ಗದರ್ಶಕ ಎಂದ ಕೇಂದ್ರ ತಂಡ । ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ತಂಡ ಭೇಟಿ, ಅಧ್ಯಯನ
ರಾಹುಲ್‌ ಗಾಂಧಿ ಸೆರೆ ಖಂಡಿಸಿ ಬಸವಕಲ್ಯಾಣದಲ್ಲಿ ಪ್ರತಿಭಟನೆ