ಜೀತ ವಿಮುಕ್ತರಿಗೆ ಸರ್ಕಾರ ಪುನರ್ವಸತಿ ಕಲ್ಪಿಸಲಿ

KannadaprabhaNewsNetwork |  
Published : Feb 16, 2025, 01:47 AM IST
15ಕೆಬಿಪಿಟಿ.1.ಬಂಗಾರಪೇಟೆ ದೊಡ್ಡವಲಗಮಾದಿಯಲ್ಲಿ ಡೆದ ಕಾರ್ಯಕ್ರಮದಲ್ಲಿ ಜೀತ ಮುಕ್ತರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜೀತ ಪದ್ಧತಿಯನ್ನು ಸಂಪೂರ್ಣವಾಗಿ ತೊಳೆದು ಹಾಕಲು ಮತ್ತು ಜೀತ ವಿಮುಕ್ತರ ಪುನರ್ವಸತಿಗಾಗಿ ಸರ್ಕಾರದ ಬದ್ಧತೆಯನ್ನು ಸಮುದಾಯಕ್ಕೆ ತಲುಪಿಸಲು ಆಯೋಜಿಸಲಾಗಿದೆ. ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನಾ) ಕಾಯ್ದೆ, ೧೯೭೬ರ ಅಡಿಯಲ್ಲಿ ಜೀತ ಕಾರ್ಮಿಕರ ಹಕ್ಕುಗಳು, ಪುನರ್ವಸತಿ ಯೋಜನೆಗಳು, ಮತ್ತು ಸಮುದಾಯದ ಪಾತ್ರ ಕುರಿತು ಚರ್ಚಿಸಲಾಗಿದೆ. ಜೀತ ಪದ್ಧತಿ ನಿರ್ಮೂಲನೆಗೆ ಎಲ್ಲ ಅಧಿಕಾರಿಗಳು ಶ್ರಮಿಸಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಜೀತ ವಿಮುಕ್ತರಿಗೆ ಪುನರ್ವಸತಿ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜೀತ ನಿರ್ಮೂಲನೆಯಾಗಬೇಕೆಂದು ಅಪರ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ ಬಂಗಾರಪೇಟೆ ಹಾಗೂ ಪ್ರಭಾರ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ್ ಅಲಬೂರ್ ಅಭಿಪ್ರಾಯಪಟ್ಟರು. ತಾಲೂಕಿನ ದೊಡ್ಡವಲಗಮಾದಿ ಗ್ರಾ.ಪಂ ಕಾರ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲ್ಲೂಕು ಪಂಚಾಯಿತಿ ಮತ್ತು ಆರ್‌ಎಫ್‌ಎಫ್-ಜೀವಿಕ ಸಂಸ್ಥೆ ಸಹಯೋಗದಲ್ಲಿ ಜೀತ ಪದ್ಧತಿ ನಿರ್ಮೂಲನೆ ದಿನಾಚರಣೆ ಮತ್ತು ಕಾರ್ಯಗಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜೀತಪದ್ಧತಿ ತೊಲಗಿಸಬೇಕು

ಈ ಕಾರ್ಯಕ್ರಮವನ್ನು ಜೀತ ಪದ್ಧತಿಯನ್ನು ಸಂಪೂರ್ಣವಾಗಿ ತೊಳೆದು ಹಾಕಲು ಮತ್ತು ಜೀತ ವಿಮುಕ್ತರ ಪುನರ್ವಸತಿಗಾಗಿ ಸರ್ಕಾರದ ಬದ್ಧತೆಯನ್ನು ಸಮುದಾಯಕ್ಕೆ ತಲುಪಿಸಲು ಆಯೋಜಿಸಲಾಗಿದೆ. ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನಾ) ಕಾಯ್ದೆ, ೧೯೭೬ರ ಅಡಿಯಲ್ಲಿ ಜೀತ ಕಾರ್ಮಿಕರ ಹಕ್ಕುಗಳು, ಪುನರ್ವಸತಿ ಯೋಜನೆಗಳು, ಮತ್ತು ಸಮುದಾಯದ ಪಾತ್ರ ಕುರಿತು ಚರ್ಚಿಸಲಾಗಿದೆ. ಜೀತ ಪದ್ಧತಿ ನಿರ್ಮೂಲನೆಗೆ ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಜೀತ ಮುಕ್ತರಿಗೆ ಪುನರ್ವಸತಿ

ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಡಾ.ರಾಮಚಂದ್ರಪ್ಪ ಅವರು ಮಾತನಾಡಿ, ಕೃಷಿ ಕ್ಷೇತ್ರ, ಕಲ್ಲುಕೊರೆ, ಕೋಳಿ ಪಾರಂ, ಮನೆಗೆಲಸ, ಇಟ್ಟಿಗೆ ಕಾರ್ಖಾನೆಗಳಲ್ಲಿ ಹೆಚ್ಚಾಗಿ ಜೀತದಾಳುಗಳು ದುಡಿಯುತ್ತಿದ್ದು, ಹಾಗೂ ವಿಶೇಷವಾಗಿ ಹೊರರಾಜ್ಯಗಳಿಂದ ಬಂದು ಜೀತದಾಳುಗಳಾಗಿ ದುಡಿಯುತ್ತಿರುವ ಕಾರ್ಮಿಕರಿಗೆ ವಿಶೇಷ ರಕ್ಷಣೆ ನೀಡುವುದರೊಂದಿಗೆ, ಪುನರ್ವಸತಿ ಕಲ್ಪಿಸಲು ನಮ್ಮ ಸಂಘಟನೆ ಸತತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ನಾರಾಯಣಪ್ಪ, ಗ್ರೇಡ್-೨ ತಹಸೀಲ್ದಾರ್ ಗಾಯಿತ್ರಿ, ಇಓ ರವಿಕುಮಾರ್, ಸಿಡಿಪಿಓ ಮುನಿರಾಜು, ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ.ಕೆ, ಪಿಡಿಓ ಸರಸ್ವತಿ, ಹಿರಿಯ ವಕೀಲ ಎನ್.ಜಯಪ್ರಕಾಶ್, ಗ್ರಾ.ಪಂ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ