ಕಾನೂನು ರೀತಿಯಲ್ಲಿ ನಡೆಯಲಿ ಅಂತರ್ ಧರ್ಮೀಯ ವಿವಾಹ

KannadaprabhaNewsNetwork |  
Published : May 25, 2024, 12:49 AM IST
24ಡಿಡಬ್ಲೂಡಿ1ಅಂತರ್‌ ಧರ್ಮೀಯ ವಿವಾಹ ನೋಂದಣಿಯನ್ನು ಕಾನೂನು ರೀತಿಯಲ್ಲಿ ನೋದಣಿ ಮಾಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಇಲ್ಲಿಯ ಹಿರಿಯ ಉಪ ನೊಂದಣಿ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ನೋಂದಣಿ ಇಲಾಖೆಯಲ್ಲಿ ಮಧ್ಯವರ್ತಿಗಳಿಂದ ಅಂತರ್‌ ಧರ್ಮೀಯ ವಿವಾಹ ನೋಂದಣಿ ನಡೆಯುತ್ತಿವೆ ಎಂಬ ದೂರುಗಳು ಬಂದಿದ್ದು, ಈ ಕುರಿತು ಗಂಭೀರವಾಗಿ ಪರಿಗಣಿಸಿ ಅಂತಹವುಗಳನ್ನು ತಡೆಯಬೇಕು.

ಧಾರವಾಡ:

ಅಂತರ್‌ ಧರ್ಮೀಯ ವಿವಾಹ ನೋಂದಣಿಯನ್ನು ಕಾನೂನು ರೀತಿಯಲ್ಲಿ ನೋಂದಣಿ ಮಾಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಇಲ್ಲಿಯ ಹಿರಿಯ ಉಪ ನೋಂದಣಿ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಅಂತರ್‌ ಧರ್ಮದ ವಿವಾಹ ನೋಂದಣಿಗೆ ಕಾನೂನು ಬದ್ಧವಾಗಿ ದಾಖಲೆ ಪರಿಶೀಲನೆ ನಡೆಸಬೇಕು. ಸರಿಯಾಗಿ ಕಾಣುವಂತೆ ನೋಟಿಸ್‌ ಹಚ್ಚಬೇಕು. ಕೋಮು ಸೌಹಾರ್ದ ಕದಡುವ ಹಾಗೂ ಪುಂಡ ಕಿಡಿಗೇಡಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದಾರೆ. ಹಿಂದೂ ಯುವತಿಯರನ್ನು ಅಕ್ರಮವಾಗಿ ಮದುವೆಯಾಗುತ್ತಿದ್ದಾರೆ. ಅದಕ್ಕೆ ನೋಂದಣಿ ಅಧಿಕಾರಿಗಳು ಎಚ್ಚರದಿಂದ ಇಂತಹ ವಿವಾಹಗಳನ್ನು ನೋಂದಣಿ ಮಾಡಬೇಕು. ಮತಾಂತರ ಪ್ರಕ್ರಿಯೆಯನ್ನು ಕಾನೂನು ಪ್ರಕಾರ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನೋಂದಣಿ ಇಲಾಖೆಯಲ್ಲಿ ಮಧ್ಯವರ್ತಿಗಳಿಂದ ಅಂತರ್‌ ಧರ್ಮೀಯ ವಿವಾಹ ನೋಂದಣಿ ನಡೆಯುತ್ತಿವೆ ಎಂಬ ದೂರುಗಳು ಬಂದಿದ್ದು, ಈ ಕುರಿತು ಗಂಭೀರವಾಗಿ ಪರಿಗಣಿಸಿ ಅಂತಹವುಗಳನ್ನು ತಡೆಯಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಸೇನೆಯ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐತಿಹಾಸಿಕ ಸ್ಮಾರಕ ಮುಂದಿನ ಪೀಳಿಗೆಗೆ ಉಳಿಯಲಿ: ಡಿಸಿ ಸಂಗಪ್ಪ
ಚೇರಂಬಾಣೆ: ವಾರ್ಷಿಕ ಕ್ರೀಡಾ ದಿನಾಚರಣೆ