ಜೆಡಿಎಸ್‌ನವರೇ ಬಹಿರಂಗ ಚರ್ಚೆಗೆ ದಿನಾಂಕ ನಿಗದಿಪಡಿಸಲಿ

KannadaprabhaNewsNetwork |  
Published : Sep 30, 2026, 01:15 AM IST
29ಕೆಆರ್ ಎಂಎನ್ 3.ಜೆಪಿಜಿಬಮುಲ್ ನಿರ್ದೇಶಕ ಹರೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹಾರೋಹಳ್ಳಿ: ನಮ್ಮ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದನ್ನು ಸಹಿಸುವುದಿಲ್ಲ. ಆರೋಪ ಮಾಡುವವರು ಮೊದಲು ದಾಖಲೆಗಳನ್ನು ಬಹಿರಂಗಪಡಿಸಿ ಮಾತನಾಡಬೇಕು. ಅಭಿವೃದ್ಧಿ ವಿಚಾರವಾಗಿ ಕೊಳ್ಳಿಗನಹಳ್ಳಿಯಲ್ಲೇ ಬಹಿರಂಗ ಚರ್ಚೆ ನಡೆಸೋಣ. ದಿನಾಂಕ ನೀವೇ ನಿಗದಿಪಡಿಸಿ, ನಾವು ಚರ್ಚೆಗೆ ಸಿದ್ಧ ಎಂದು ಬಮೂಲ್ ನಿರ್ದೇಶಕ ಹರೀಶ್ ಕುಮಾರ್ ಸವಾಲು ಹಾಕಿದರು

ಹಾರೋಹಳ್ಳಿ: ನಮ್ಮ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದನ್ನು ಸಹಿಸುವುದಿಲ್ಲ. ಆರೋಪ ಮಾಡುವವರು ಮೊದಲು ದಾಖಲೆಗಳನ್ನು ಬಹಿರಂಗಪಡಿಸಿ ಮಾತನಾಡಬೇಕು. ಅಭಿವೃದ್ಧಿ ವಿಚಾರವಾಗಿ ಕೊಳ್ಳಿಗನಹಳ್ಳಿಯಲ್ಲೇ ಬಹಿರಂಗ ಚರ್ಚೆ ನಡೆಸೋಣ. ದಿನಾಂಕ ನೀವೇ ನಿಗದಿಪಡಿಸಿ, ನಾವು ಚರ್ಚೆಗೆ ಸಿದ್ಧ ಎಂದು ಬಮೂಲ್ ನಿರ್ದೇಶಕ ಹರೀಶ್ ಕುಮಾರ್ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಲಗನದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಸವರಾಜು ಅವರು ದಾಖಲೆಗಳೊಂದಿಗೆ ಮಾತನಾಡಬೇಕು. ಆಧಾರವಿಲ್ಲದೆ ಸುಮ್ಮನೆ ಆರೋಪ ಮಾಡು ವುದು ಸರಿಯಲ್ಲ, ಏಕವಚನದಲ್ಲಿ ಮಾತನಾಡುವ ಸಂಸ್ಕೃತಿ ಬೇಡ ಎಂದು ಎಚ್ಚರಿಸಿದರು.

ತಮ್ಮ ವಿರುದ್ಧ ಮಾಡಿರುವ ಹಾಲು ಹಾಗೂ ತರಕಾರಿ ಖರೀದಿ ಕುರಿತ ಆರೋಪಗಳಿಗೂ ಪ್ರತಿಕ್ರಿಯಿಸಿದ ಅವರು, 50 ಲೀಟರ್ ಹಾಲು ಹಾಕಿದ್ದಾರೆ, ತರಕಾರಿ ತೆಗೆದು ಕೊಂಡಿದ್ದಾರೆ ಎಂಬ ಆರೋಪಕ್ಕೆ ಸಾಕ್ಯವಿದ್ದರೆ ಬಹಿರಂಗ ಪಡಿಸಲಿ. ನಮ್ಮ ಅಣ್ಣ 10-12 ಹಸುಗಳನ್ನು ಸಾಕಿದ್ದಾರೆ. 50 ಲೀಟರ್ ಹಾಲು ಹಾಕಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಬೇಕು. ನಾವು 18-20 ಲೀ ಹಾಲು ಮಾತ್ರ ಉತ್ಪಾದಿಸುತ್ತಿದ್ದೇವೆ ಎಂದು ಹೇಳಿದರು.

ಸೊಂಟೇನಹಳ್ಳಿ ಕಾಂಗ್ರೆಸ್ ಮುಖಂಡ ದಿನೇಶ್ ಮಾತನಾಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಮು ಮತ್ತು ಲಕ್ಷ್ಮಣ್ ಅವರು ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ. ಪಿ - ನಂಬರ್ ದುರಸ್ತಿಗಾಗಿ ರೈತರಿಂದ ಹಣ ಪಡೆದಿರುವುದಾಗಿ ಹೇಳಿದ್ದಾರೆ. ರೈತರ ಬಳಿ ನಾವು ಯಾವುದೇ ರೀತಿಯ ಹಣ ಪಡೆದಿಲ್ಲ. ಒಬ್ಬ ರೈತರ ಬಳಿ ಹಣ ಪಡೆದಿದ್ದೇನೆ ಎಂದಾದರೆ ಅವರು ಹೇಳಿದ ಹಾಗೆ ಕೇಳುತ್ತೇನೆ ಅಧಿ ಕಾರ ಇದ್ದಾಗ ಏನೂ ಮಾಡದವರು ಇಂದು ಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಎಲ್.ನಂಜೇಗೌಡ, ವೆಂಕಟೇಶ್‌ ಕೆ.ಟಿ, ವಿಜಯಕುಮಾರ್, ಎಸ್.ಟಿ.ರಾಜು, ಜಿ.ತಿಮ್ಮಪ್ಪ, ಶಿವಕುಮಾರ್, ಎಚ್.ಶ್ರೀನಿವಾಸ್, ತಿಮ್ಮಪ್ಪ, ನಂಜಪ್ಪ, ನಾಗರಾಜ್, ಶಿವರಾಜ್ ಇತರರಿದ್ದರು.

29ಕೆಆರ್ ಎಂಎನ್ 3.ಜೆಪಿಜಿ

ಹಾರೋಹಳ್ಳಿ ತಾಲೂಕಿನ ಕೊಳ್ಳಿಗನಹಳ್ಳಿಯಲ್ಲಿ ಬಮೂಲ್ ನಿರ್ದೇಶಕ ಹರೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಂಜೇಗೌಡ, ವೆಂಕಟೇಶ್‌, ಜಯ ಕುಮಾರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಕುಶಲ ಕಲೆಗಳಿವೆ ತನ್ನದೇ ವೈಶಿಷ್ಟ್ಯತೆ: ಕಿರಣ
ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸ್ವಪಕ್ಷದವರ ಆಕ್ರೋಶ