ವರ್ಷ ಪೂರ್ತಿ ಕನ್ನಡಮ್ಮನ ಉತ್ಸವ ನಡೆಯಲಿ

KannadaprabhaNewsNetwork | Published : Dec 17, 2024 12:46 AM

ಸಾರಾಂಶ

ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ಸರಿಯಲ್ಲ. ಅದರ ಬದಲಾಗಿ ವರ್ಷಪೂರ್ತಿ ನಮ್ಮ ನಾಡು, ನುಡಿ, ಜಲದ ಅಧಿದೇವತೆಯಾಗಿರುವ ಕನ್ನಡಮ್ಮನ ಉತ್ಸವವನ್ನು ಆಚರಿಸಬೇಕು ಎಂದು ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ಸರಿಯಲ್ಲ. ಅದರ ಬದಲಾಗಿ ವರ್ಷಪೂರ್ತಿ ನಮ್ಮ ನಾಡು, ನುಡಿ, ಜಲದ ಅಧಿದೇವತೆಯಾಗಿರುವ ಕನ್ನಡಮ್ಮನ ಉತ್ಸವವನ್ನು ಆಚರಿಸಬೇಕು ಎಂದು ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಹೇಳಿದರು. ತಾಲೂಕಿನ ದಬ್ಬೇಘಟ್ಟ ಹೋಬಳಿ ಅರೇಮಲ್ಲೇನಹಳ್ಳಿ ಗ್ರಾಮದಲ್ಲಿ ರಂಗ ತರಂಗ ಕ್ರೀಡೆ ಮತ್ತು ಸಾಂಸ್ಕೃತಿಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ೬೯ ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ಹಾಗೂ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕನ್ನಡ ನಾಡು ನುಡಿಗೆ ಹಲವರು ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸುವ ಕಾಯಕ ಆಗಬೇಕು. ಕನ್ನಡ ಭಾಷೆಯಲ್ಲಿರುವ ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಹಲವಾರು ಕವಿಗಳು ತನ್ನ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮೂಲಕ ಕನ್ನಡಕ್ಕೆ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳು ಕನ್ನಡ ನಾಡಿನ ಇತಿಹಾಸ ಪರಂಪರೆ ತಿಳಿದುಕೊಳ್ಳಬೇಕಿದೆ. ಅಲ್ಲದೇ ಕನ್ನಡ ಉಳಿಸುವ ಬೆಳೆಸುವ ಜವಾಬ್ದಾರಿಯೂ ಇದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗ್ರಾಮ ಪಂಚಾಯ್ತಿ ಸದಸ್ಯ ಆರ್.ಶಿವಣ್ಣ ಮತ್ತು ಆರೋಗ್ಯ ನಿರೀಕ್ಷಕರಾದ ಎಚ್.ಬಿ.ಮಂಜುನಾಥ್ ರವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಆರ್.ಹೇಮಚಂದ್ರು, ಮಾಜಿ ಅಧ್ಯಕ್ಷ ಆರ್.ಶಿವಣ್ಣ, ರಮೇಶ್, ಗುತ್ತಿಗೆದಾರರಾದ ತ್ಯಾಗರಾಜು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎ.ಬಿ.ಜಗದೀಶ್, ಹುಲಿಕಲ್ ಜಗದೀಶ್, ಪರಮೇಶ್, ಗೋವಿಂದಯ್ಯ, ಕೆ.ಪಿ.ಜಯರಾಮ್, ಸ್ವರೂಪ್, ವೈದ್ಯ ಮಂಜಣ್ಣ ಗೆಳೆಯರ ಬಳಗದ ಅಧ್ಯಕ್ಷ ಜಿ.ಗಗನ್, ಉಪಾಧ್ಯಕ್ಷ ಎ.ಎಸ್.ರಾಕೇಶ್, ಪ್ರಧಾನ ಕಾರ್ಯದರ್ಶಿ ಜಗದೀಶ್, ವೇಣುಗೋಪಾಲ್ ಸೇರಿದಂತೆ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.

೧೬ ಟಿವಿಕೆ ೧ - ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿ ಅರೇಮಲ್ಲೇನಹಳ್ಳಿಯಲ್ಲಿ ರಂಗ ತರಂಗ ಕ್ರೀಡೆ ಮತ್ತು ಸಾಂಸ್ಕೃತಿಕ ಗೆಳೆಯರ ಬಳಗವತಿಯಿಂದ ಹಮ್ಮಿಕೊಂಡಿದ್ದ ೬೯ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.

Share this article