ಉಪನ್ಯಾಸಕರು ಜಡತ್ವದಿಂದ ಹೊರಬರಲಿ

KannadaprabhaNewsNetwork |  
Published : Nov 21, 2025, 02:15 AM IST
20ಕೆಪಿಎಲ್24 ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಕನ್ನಡ, ರಾಜ್ಯಶಾಸ್ತç ಹಾಗೂ ಅರ್ಥಶಾಸ್ತ್ರ ವಿಷಯಗಳ ಎರಡು ದಿನದ ಪುನಶ್ಚೇತನ ಕಾರ್ಯಗಾರ | Kannada Prabha

ಸಾರಾಂಶ

ಮುಂದುವರೆದು ಉಪನ್ಯಾಸಕರು ಜಡತ್ವದಿಂದ ಹೊರಬರಬೇಕು, ಇಲಾಖೆಯ ನಿಯಮ ಬದಲಾದಾಗ ಉಪನ್ಯಾಸಕರೂ ಸಹ ಬದಲಾಗಬೇಕು

ಕೊಪ್ಪಳ: ಉಪನ್ಯಾಸಕರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ ಮಾತ್ರ ಮಕ್ಕಳ ಭವಿಷ್ಯ ಉತ್ತಮಗೊಳ್ಳಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಚ್. ಜಗದೀಶ ಹೇಳಿದ್ದಾರೆ.

ಅವರು ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಕನ್ನಡ, ರಾಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳ ಎರಡು ದಿನದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಉಪನ್ಯಾಸಕರು ಜಡತ್ವದಿಂದ ಹೊರಬರಬೇಕು, ಇಲಾಖೆಯ ನಿಯಮ ಬದಲಾದಾಗ ಉಪನ್ಯಾಸಕರೂ ಸಹ ಬದಲಾಗಬೇಕು ಆಗ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ ಮಾತನಾಡಿ, ಉಪನ್ಯಾಸಕರು ಸಮಾಜಮುಖಿಯಾಗಿ ಕೆಲಸ ಮಾಡಬೇಕು, ಮಕ್ಕಳಲ್ಲಿ ಹೊಸತನ ತರಬೇಕೆಂದು ನುಡಿದರು.

ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರ ಗೌಡ ಮಾತನಾಡಿ, ಉಪನ್ಯಾಸಕರಿಗೆ ಒತ್ತಡವಿರುವುದು ನಿಜ, ಆದರೆ ಮಕ್ಕಳಿಗೆ ಅನ್ಯಾಯ ಮಾಡಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎ.ಆರ್.ಶಿವಾನಂದ ಮಾತನಾಡಿ, ನಮ್ಮದು ಉತ್ತಮ ಫಲಿತಾಂಶದ ಕಡೆ ಗುರಿ ಇರಬೇಕು ಎಂದರು. ವೇದಿಕೆಯ ಮೇಲೆ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಳಗುಂದಿ ಮತ್ತು ಎಸ್.ವಿ. ಮೇಳಿ ಉಪಸ್ಥಿತರಿದ್ದರು.

ನಯನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಸ್ವಾಗತಿಸಿದರೆ ಕೊನೆಗೆ ಯಂಕಪ್ಪ ಗೊಲ್ಲರ್ ವಂದಿಸಿದರು. ಶೇಖ್‌ಬಾಬು ಶಿವಾಪುರ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಕನ್ನಡ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರಗಳ ಉಪನ್ಯಾಸಕರುಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!