ಪಾವಗಡ : ನರೇಂದ್ರ ಮೋದಿ ಮತ್ತೊಮ್ಮೆ ಈ ದೇಶದ ಪ್ರದಾನಿಯಾಗಬೇಕು. ಹೆಚ್ಚಿನ ಮತಹಾಕುವ ಮೂಲಕ ಕೋಟೆನಾಡು ಕ್ಷೇತ್ರದಲ್ಲಿ ಕಮಲ ಆರಳಿಸುವಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಮನವಿ ಮಾಡಿದರು.ಶನಿವಾರ ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಭೆಯಲ್ಲಿ ಕಾರ್ಯಕರ್ತರನ್ನು ದ್ದೇಶಿಸಿ ಮಾತನಾಡಿ, ಮೋದಿಜಿ ಕೈಬಲಪಡಿಸುವ ಶಕ್ತಿ ನಿಮ್ಮಲಿದೆ. ಇದೇ ಏ 26ರಂದು ಬಿಜೆಪಿಗೆ ಹೆಚ್ಚಿನ ಮತ ಹಾಕಿ ಗೆಲ್ಲಿಸುವಂತೆ ಕರೆ ನೀಡಿದರು.ಅಭಿವೃದ್ಧಿ ತಾಲೂಕು ಹಿಂದಿದೆ. ನಗರ ಪ್ರದೇಶಗಳ ವಲಸೆ ತಪ್ಪಿಸುವ ಹಿನ್ನೆಲೆಯಲ್ಲಿ ಉದ್ಯೋಗ ಸೃಷ್ಟಿಗೆ ಪ್ರಥಮ ಅದ್ಯತೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿಗೆ 2500 ಕೋಟಿ ಅನುದಾನ ಬಿಡುಗಡೆ ಸೇರಿದಂತೆ ಶುದ್ಧ ಕುಡಿವ ನೀರು ಅನುಷ್ಠಾನಕ್ಕೆ ಬದ್ಧರಿರುವುದಾಗಿ ಹೇಳಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಗೋವಿಂದ ಕಾರಜೋಳರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಯ ಬಗ್ಗೆ ಮಾತನಾಡಲು ಯಾವು ದೇ ಪದಗಳಿಲ್ಲ. ಬರೀ ಸುಳ್ಳು ಗ್ಯಾರಂಟಿಗಳನ್ನು ಕೊಡುತ್ತಿದೆ. ತಮ್ಮ ಅಧಿಕಾರ ದಾಹಕ್ಕಾಗಿ ಜನರಿಗೆ ಸುಳ್ಳು ಆಶ್ವಾಸನೆ ನೀಡುವುದು ಬಿಡಬೇಕು.ಸಿಎಂ ಸಿದ್ದರಾಮಯ್ಯ ಅವರೇ ದಲಿತ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು ? ಈ ರಾಜ್ಯದ ರೈತ ಸಮುದಾಯಕ್ಕೆ ನಿಮ್ಮ ಕೊಡುಗೆ ಆದರೂ ಏನು ? ಬೊಮ್ಮಾಯಿ ನೀಡಿದ ಸಹಾಯಧನ ಅದನ್ನು ನೀವು ಹಿಂದೆ ತೆಗೆದುಕೊಂಡಿದ್ದೀರಾ. ಯಡಿಯೂರಪ್ಪ ಜಾರಿಗೆ ತಂದ ಯೋಜನೆ ನಿಲ್ಲಿಸಿದ್ದೀರಿ. ಸಂವಿಧಾನ ಬದಲಾವಣೆ ಎಂದು ಹೇಳಿ ಈ ರಾಜ್ಯದ ದಲಿತರವನ್ನು ಮಾನಸಿಕವಾಗಿ ದಿಕ್ಕು ತಪ್ಪಿಸುತ್ತಿದ್ದೀರಿ. ಭಯೋತ್ಪಾದಕರಿಗೆ ತಾವು ಬಿರಿಯಾನಿ ಕೊಟ್ಟಿಲ್ವ ? ಟಿಎಡಿಎ ಏರ್ ಟಿಕೆಟ್ ಕೊಟ್ಟಿಲ್ಲವಾ ? ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿದರು.
ಬಿಜೆಪಿ ಜೆಡಿಎಸ್ ಹಿರಿಯ ಮುಖಂಡರಾದ ಎನ್.ತಿಮ್ಮಾರೆಡ್ಡಿ, ವೈ.ಎಸ್.ಹುಚ್ಚಯ್ಯ, ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ಡಾ.ವೆಂಕಟರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ, ಬಿಜೆಪಿ ಅಧ್ಯಕ್ಷ ರಂಗಣ್ಣಗೌಡ, ರಾಜಶೇಖರಪ್ಪ, ರವಿಶಂಕರ ನಾಯ್ಕ್, ಎಸ್.ವಿ.ಗೋವಿಂದಪ್ಪ, ವೈ.ಆರ್.ಚೌದರಿ, ರಾಮಕೃಷ್ಣರೆಡ್ಡಿ, ಮನುಮಹೇಶ್, ಜಿ.ಎ.ವೆಂಕಟೇಶ್, ಕಾವಲಗರೆ ರಾಮಾಂಜಿನಪ್ಪ, ಸಿಂಗರೆಡ್ಡಿಹಳ್ಳಿ ಪುರುಷೋತ್ತಮ್ ಉಪಸ್ಥಿತರಿದ್ದರು.