ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಚಿಕ್ಕೋಡಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ 57ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ರೈತರು ಕಾರ್ಖಾನೆಗೆ ಉತ್ತಮ ಕಬ್ಬು ಕಳಿಸಿದರೆ ಕಾರ್ಖಾನೆಗಳು ಉತ್ತಮವಾಗಿ ನಡೆಯುತ್ತವೆ. ರೈತರ ಕಬ್ಬು ತೂಕ ಮಾಡಲು ಅಟೋಮೆಟಿಕ್ ಮಷೀನ್ ಅಳವಡಿಸಲಾಗಿದೆ. ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಮಾಡಲು ಹೊಸ ಹೊಸ ತಳಿಗಳನ್ನು ಬಳಸಿ ಕಬ್ಬು ಬೆಳೆಯಬೇಕೆಂದರು.
ವಿಧಾನ ಪರಿಷತ್ ಮಾಜಿ ಸದಸ್ಯರು ಮತ್ತು ಕಾರ್ಖಾನೆ ನಿರ್ದೇಶಕ ಮಹಾಂತೇಶ ಕವಟಗಿಮಠ ಮಾತನಾಡಿ, ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿ ಸಹಕಾರಿ ರಂಗದಲ್ಲಿ ಈ ಕಾರ್ಖಾನೆಯು ರೈತರ ವಿಶ್ವಾಸ ಗಳಿಸಿದೆ. ರೈತರ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡುತ್ತಿದೆ. ಸರ್ಕಾರದ ಆದೇಶ ಪಾಲನೆ ಮಾಡಿ ರೈತರ ಕಾಮದೇನುವಾಗಿ ಕೆಲಸ ಮಾಡುತ್ತದೆ. ರೈತರು ಮತ್ತು ಕಾರ್ಮಿಕರ ವಿಶ್ವಾಸ ಉಳಿಸಿಕೊಂಡು ಡಾ.ಕೋರೆಯವರ ಮುಂದಾಲೋಚನೆ ಅನುಗುಣವಾಗಿ ಸಕ್ಕರೆ ಉತ್ಪಾದನೆ ಜೊತೆಗೆ ಕಾರ್ಖಾನೆ ಸದಸ್ಯರಿಗೆ ಜೀವವಿಮೆ ಕೊಡಲಾಗುತ್ತದೆ ಎಂದರು.ರಾಷ್ಟ್ರೀಯ ಸಕ್ಕರೆ ಮಹಾಮಂಡಳದ ನಿರ್ದೇಶಕ ಅಮಿತ ಕೋರೆ ಮಾತನಾಡಿ, 3 ಕೋಟಿ ಲೀಟರ ಎಥೆನಾಲ್ ತಯಾರು ಮಾಡಲಾಗಿದೆ. ಡಿಜಿಟಲ್ ವೇಬ್ರಿಜ್ ಮಾಡಲಾಗಿದೆ. ಇದು ಕರ್ನಾಟಕದಲ್ಲಿ ಮೊದಲ ಪ್ರಯೋಗವಾಗಿದ್ದು ರೈತರಿಗೆ ಅನುಕೂಲವಾಗಲಿದೆ. ಕಿಸಾನ್ ಬಜಾರದಿಂದ ಹೆಚ್ಚು ಲಾಭವಾಗಿದೆ. 20 ಶಾಖೆ ಮಾಡುವ ಸಂಕಲ್ಪ ಇದೆ ಎಂದರು.