ಚುನಾವಣಾ ಬಾಂಡ್‌ ಬಗ್ಗೆ ಮಾಧ್ಯಮಗಳು ಜಾಗೃತಿ ಮೂಡಿಸಲಿ: ನಟ ಪ್ರಕಾಶ್ ರಾಜ್

KannadaprabhaNewsNetwork |  
Published : Apr 30, 2024, 02:03 AM IST
29ಎಚ್‌ಪಿಟಿ3- ಹೊಸಪೇಟೆಯಲ್ಲಿ ಸೋಮವಾರ ನಡೆದ ಜಾಗೃತಿ ಸಮಾವೇಶದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಮಾತನಾಡಿದರು. | Kannada Prabha

ಸಾರಾಂಶ

ಪಿಎಂಪಿಕೆ ಕೇರ್‌ ಫಂಡ್‌ ನಲ್ಲಿ ₹3,300 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ತೋರಿಸಲಾಗಿದೆ.

ಹೊಸಪೇಟೆ: ದೇಶದಲ್ಲಿ ಚುನಾವಣಾ ಬಾಂಡ್ ಕುರಿತು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದೆ. ಈ ವಿಷಯವಾಗಿ ಜಾಗೃತ ಮಾಧ್ಯಮಗಳು ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎಂದು ಬಹುಭಾಷಾ ನಟ, ವಿಚಾರವಾದಿ ಪ್ರಕಾಶ್ ರಾಜ್ ಹೇಳಿದರು.

ನಗರದ ಬುದ್ದ-ಬಸವ ಪಂಕ್ಷನ್ ಹಾಲ್‌ನಲ್ಲಿ ಸೋಮವಾರ ಭಾರತದ ಸಂವಿಧಾನದ 75ನೇ ವರ್ಷಾಚರಣೆ ಪ್ರಯುಕ್ತ ದೇಶಪ್ರೇಮ, ನಾಗರಿಕ ಸಮಾಜದ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಒಂದು ನಿರ್ದಿಷ್ಟ ಪಕ್ಷಕ್ಕೆ ಕಳಪೆ ಔಷಧ ಮಾರಾಟ ಮಾಡುವ ಕಂಪನಿಯು ಹಣ ಸಂದಾಯ ಮಾಡಿದೆ. ಕಳಪೆ ಸೇತುವೆ ಕಾಮಗಾರಿ ನಡೆಸಿದ ಗುತ್ತಿಗೆ ಕಂಪನಿಯೊಂದಕ್ಕೆ ₹೧೪ ಸಾವಿರ ಕೋಟಿ ಮೊತ್ತದ ಟೆಂಡರ್‌ ನೀಡಿದೆ. ಈ ಕಂಪನಿ ಒಂದು ಪಕ್ಷಕ್ಕೆ ಒಂದು ಸಾವಿರ ಕೋಟಿ ರುಪಾಯಿ ಚುನಾವಣಾ ಬಾಂಡ್ ಖರೀದಿಸಿ ನೀಡಿದೆ. ಪಿಎಂಪಿಕೆ ಕೇರ್‌ ಫಂಡ್‌ ನಲ್ಲಿ ₹3,300 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ ಎಂದು ತೋರಿಸಲಾಗಿದೆ. ಈ ಕುರಿತು ನಿಖರ ಖರ್ಚು ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಪ್ರಸ್ತುತ ಸನ್ನಿವೇಶದಲ್ಲಿ ಪ್ರಶ್ನೆ ಮಾಡುವವರಿಗೆ ದೇಶದ ದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ, ಇದು ಡಾ.ಬಿ.ಆರ್ ಅಂಬೇಡ್ಕರ್ ಆಶಯಗಳಿಗೆ ಧಕ್ಕೆ ತರುತ್ತದೆ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಬಹುಭಾಷಾ ನಟ, ವಿಚಾರವಾದಿ ಪ್ರಕಾಶ್ ರಾಜ್ ಹೇಳಿದರು.ನಗರದ ಬುದ್ದ-ಬಸವ ಪಂಕ್ಷನ್ ಹಾಲ್‌ನಲ್ಲಿ ಸೋಮವಾರ ಭಾರತದ ಸಂವಿಧಾನದ 75ನೇ ವರ್ಷಾಚರಣೆ ಪ್ರಯುಕ್ತ ದೇಶಪ್ರೇಮ, ನಾಗರಿಕ ಸಮಾಜದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಶ್ನೆ ಮಾಡುವವರನ್ನು ಹಿಂದೂ ದ್ವೇಷಿಗಳು, ತುಕಡೆ, ತುಕಡೆ ಗ್ಯಾಂಗ್, ರೈತರನ್ನು ಆತಂಕವಾದಿಗಳು ಎಂದು ಕರೆಯಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ವೀರಸಂಗಯ್ಯ, ಗೋಣಿ ಬಸಪ್ಪ, ಎ.ಕರುಣಾನಿಧಿ, ಎಂ.ಜಂಬಯ್ಯ ನಾಯಕ, ಸೌಭಾಗ್ಯ ಲಕ್ಷ್ಮಿ, ಬಣ್ಣದಮನೆ ಸೋಮಶೇಖರ್, ಸದ್ದಾಂ ಹುಸೇನ್, ರಾಮಚಂದ್ರಪ್ಪ, ನಿಂಬಗಲ್‌ ರಾಮಕೃಷ್ಣ, ಭರತ್ ಕುಮಾರ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!