ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಭಾರತ ವಿಶ್ವಕ್ಕೆ ಮಾದರಿಯಾದ ದೇಶ. ಇಂಥ ಪುಣ್ಯಭೂಮಿಯಲ್ಲಿ ಜನಿಸಿದ ನಾವೆಲ್ಲ ಪುಣ್ಯವಂತರು. ಇದು ಇಂಡಿಯಾ ಅಲ್ಲ, ಭಾರತ, ಭರತನಿಂದ ಭಾರತವಾಗಿದೆ. ಪ್ರಾಚೀನ ಕಾಲದಿಂದಲೂ ವಿಶ್ವವಂದ್ಯವಾಗಿದೆ ಎಂದು ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದ ಜೈನಮುನಿ ಆಚಾರ್ಯ ಕುಲರತ್ನಭೂಷಣ ಮಹಾರಾಜರು ಹೇಳಿದರು.ಗುರುವಾರ ಹಳಿಂಗಳಿ ಗ್ರಾಮದ ಭದ್ರರಿಗಿ ಬೆಟ್ಟದಲ್ಲಿ ಜರುಗಿದ ೯ ದಿನಗಳ ನಡೆದ ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಆಂಗ್ಲರು ಸ್ವತಂತ್ರ ಪೂರ್ವದಲ್ಲಿ ಭಾರತವನ್ನು ಇಂಡಿಯಾ ಎಂದು ಕರೆದರು. ಇದಕ್ಕೆ ಗುಲಾಮರು ಎಂದರ್ಥ. ನಾವು ಆಗ ಅವರ ಗುಲಾಮರಾಗಿದ್ದೆವು. ಆದರೆ, ಅನೇಕರ ಪ್ರಾಣತ್ಯಾಗ ಬಲಿದಾನದಿಂದ ಗುಲಾಮರಿಗಿಯಿಂದ ಹೊರಬಂದು ಸ್ವತಂತ್ರರಾಗಿದ್ದೇವೆ. ಇಂಡಿಯಾ ಈಗ ಸ್ವತಂತ್ರವಾದ ಬಳಿಕ ಭಾರತವಾಗಬೇಕು. ಲೋಕಸಭೆಯಲ್ಲಿ ಈ ವಿಷಯ ಚರ್ಚೆಯಲ್ಲಿದ್ದು, ಅದು ಅಂಗೀಕಾರವಾಗಿ ಭಾರತ ಎಂದಾಗಬೇಕೆನ್ನುವುದು ನಮ್ಮ ಆಭಿಪ್ರಾಯ ಎಂದರು.
ಪ್ರತಿವರ್ಷ ಮಕ್ಕಳಿಗೆ ಇಂಥ ಸಂಸ್ಕಾರ ಶಿಬಿರಗಳು ನಡೆಯುತ್ತಿರಬೇಕು. ಆಂದಾಗ ಮಾತ್ರ ಜೈನಧರ್ಮ ಉಳಿದು ಬೆಳೆಯುತ್ತದೆ. ಅದು ಪ್ರಾಥಮಿಕ ಹಂತದಲ್ಲಿ ಇಂಥ ಭಾರತೀಯ ಸಂಪ್ರದಾಯದಡಿಯಿರುವ ಜೈನ ಧರ್ಮದ ಪ್ರತಿಯೊಂದು ಮಗುವಿಗೂ ಕಲಿಕೆ ಪ್ರಾರಂಭಿಸಿದಾಗ ಮಾತ್ರ ದೇಶದಲ್ಲಿ ವ್ಯಾಜ್ಯ, ಅಪರಾಧಗಳು ನಶಿಸಿ ಪೊಲೀಸ್ ಠಾಣೆ ಮತ್ತು ಕೋರ್ಟಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ ರಬಕವಿ ಉದ್ದಿಮೆದಾರ ಸತೀಶ ಹಜಾರೆ ಮಾತನಾಡಿ, ಧರ್ಮದ ಉಳಿವಿಗೆ ಆಚಾರ್ಯ ಶ್ರೀಗಳು ಪ್ರತಿದಿನ ಮಕ್ಕಳಿಗೆ ಹಾಗೂ ಹಿರಿಯರಿಗೆ ಧರ್ಮೋಪದೇಶ ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಅವರ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿ ದಾನ ಧರ್ಮಗಳ ಕೈಂಕರ್ಯ ಹಮ್ಮಿಕೊಂಡಾಗ ಮಾತ್ರ ಅದು ಉಳಿದು ಬೆಳೆಯುತ್ತದೆ ಎಂದರು.
ಈ ಸಮಾರಂಭದಲ್ಲಿ ಐಲಕ ಶ್ರೀ ೧೦೫ ಶಾಂತಿಧರ್ಮ ಭೂಷಣ ಮಹಾರಾಜರು, ಜೈನ ಧರ್ಮದ ಹಿರಿಯರು, ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ಸಂಸ್ಕಾರ ಶಿಬಿರದಲ್ಲಿ ೧೮೯ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.