ಸುದ್ದಿ ಜನರ ಹಿತ ಕಾಯುವ ಕಳಕಳಿ ಹೊಂದಿರಲಿ

KannadaprabhaNewsNetwork |  
Published : Sep 15, 2024, 02:00 AM IST
ಪೋಟೋ೧೪ಸಿಎಲ್‌ಕೆ೨ ಚಳ್ಳಕೆರೆ ನಗರದ ಹಿಂದೂಮಹಾಗಣಪತಿ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿ, ಪತ್ರಕರ್ತ ಡಾ.ಬಾಬುಕೃಷ್ಣಮೂರ್ತಿ, ಗದಗದ ರಾಮಕೃಷ್ಣ ಆಶ್ರಮದ ನಿರ್ಭಯಾನಂದಸರಸ್ವತಿ ಸ್ವಾಮೀಜಿ ಭೇಟಿ ನೀಡಿ ದೇವರ ದರ್ಶನ ಪಡೆದರು. | Kannada Prabha

ಸಾರಾಂಶ

ಮಂಗಳ ಕಲಾಸಾಹಿತ್ಯ ವೇದಿಕೆಯ ಸಂಸ್ಥಾಪಕರಾದ ಹಿರಿಯ ಸಾಹಿತಿ, ಪತ್ರಕರ್ತ ಡಾ. ಬಾಬುಕೃಷ್ಣಮೂರ್ತಿ ಚಳ್ಳಕೆರೆ ಹಿಂದೂ ಮಹಾಗಣಪತಿ ಕಾರ್ಯಕ್ರಮಕ್ಕೆ ಆಗಮಿಸಿ ಗಣೇಶನ ದರ್ಶನ ಪಡೆದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಮಂಗಳ ಕಲಾಸಾಹಿತ್ಯ ವೇದಿಕೆಯ ಸಂಸ್ಥಾಪಕರಾದ ಹಿರಿಯ ಸಾಹಿತಿ, ಪತ್ರಕರ್ತ ಡಾ. ಬಾಬುಕೃಷ್ಣಮೂರ್ತಿ ಚಳ್ಳಕೆರೆ ಹಿಂದೂ ಮಹಾಗಣಪತಿ ಕಾರ್ಯಕ್ರಮಕ್ಕೆ ಆಗಮಿಸಿ ಗಣೇಶನ ದರ್ಶನ ಪಡೆದರು.

ನೆರೆದಿದ್ದ ಭಕ್ತರು ಹಾಗೂ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ. ಇಂದು ಎಲ್ಲರ ಕೈಯಲ್ಲಿ ಮೊಬೈಲ್, ವಾಟ್ಸ್ಆಫ್ ಇಂಟರ್‌ನೆಟ್ ಸೌಲಭ್ಯವಿದ್ದು ಅದನ್ನು ಪತ್ರಕರ್ತರು ಸದುಪಯೋಗ ಪಡಿಸಿಕೊಳ್ಳುವಲ್ಲಿ ಮುಂದಾಗಬೇಕಿದೆ. ಪತ್ರಕರ್ತರು ಯಾವ ಸುದ್ದಿಯನ್ನೇ ಪ್ರಕಟಿಸಲಿ, ಅದರಲ್ಲಿ ಸಾಮಾಜಿಕ ಕಳಕಳಿಯ ಜತೆಗೆ ಸಾರ್ವಜನಿಕರ ಹಿತವನ್ನು ರಕ್ಷಿಸುವಂತಹ ವರದಿಗಳನ್ನು ಜನರು ಇಷ್ಟಪಡುತ್ತಾರೆ. ಚಳ್ಳಕೆರೆ ಜನತೆ ಹಾಗೂ ನನ್ನ ನಡುವೆ ಸುಮಾರು ೫೦ ವರ್ಷಗಳ ಸ್ನೇಹ ಬಾಂಧ್ಯವಿದೆ ಎಂದರು.

ಗದಗದ ರಾಮಕೃಷ್ಣ ಆಶ್ರಮದ ನಿರ್ಭಯಾನಂದಸರಸ್ವತಿ ಸ್ವಾಮೀಜಿ ಮಾತನಾಡಿ, ದೇವಾನು ದೇವತೆಗಳ ಪೂಜೆಯಲ್ಲಿ ಮೊದಲ ಆದ್ಯತೆಯನ್ನು ನಾವು ಶ್ರೀಗಣೇಶನಿಗೆ ನೀಡುತ್ತಾ ಬಂದಿದ್ದೇವೆ. ಸಾವಿರಾರು ವರ್ಷಗಳಿಂದ ಗಣೇಶನ ಪೂಜೆಯನ್ನು ಭಕ್ತಿಯಿಂದ ನಡೆಸಿಕೊಂಡು ಬಂದಿದ್ದೇವೆ. ವಿಶ್ವದಲ್ಲಿ ಸನಾತನ ಹಿಂದೂಧರ್ಮಕ್ಕೆ ವಿಶೇಷವಾಗಿ ಗೌರವವಿದೆ. ನಾವೆಲ್ಲರೂ ಹಿಂದೂಧರ್ಮವನ್ನು ಗೌರವಿಸಿ ಆರಾಧಿಸುವವರಾಗಿದ್ದೇವೆ. ನಮ್ಮೆಲ್ಲರ ಸಂರಕ್ಷಣೆ ಹಿಂದೂಧರ್ಮದಿAದ ಮಾತ್ರ ಸಾಧ್ಯ. ಎಂತಹ ಸಂದರ್ಭ ಬಂದರೂ ನಾವು ಧರ್ಮವನ್ನು ರಕ್ಷಣೆ ಮಾಡುವತ್ತ ಮುನ್ನಡೆಯಬೇಕು. ನಾವು ಮಾಡುವ ಧಾರ್ಮಿಕ ಕಾರ್ಯಕ್ರಮಗಳು ನಮಗೆ ನಮ್ಮ ಹಿರಿಯರು ನೀಡಿದ ಪರಂಪರೆಯ ಕೊಡುಗೆಯಾಗಿದೆ ಎಂದರು.

ವಿಶ್ವಹಿಂದೂಪರಿಷತ್ ತಾಲ್ಲೂಕು ಅಧ್ಯಕ್ಷ ಡಾ.ಡಿ.ಎನ್.ಮಂಜುನಾಥ, ಪದಾಧಿಕಾರಿಗಳಾದ ಬಾಳೆಮಂಡಿರಾಮದಾಸ್, ಮಾತೃಶ್ರೀಎನ್.ಮಂಜುನಾಥ, ಡಿ.ಎಸ್.ಪ್ರಕಾಶ್, ಮಲ್ಲಿಕಾರ್ಜುನಶ್ರೀವತ್ಸ, ಲಕ್ಷಿö್ಮಶ್ರೀವತ್ಸ, ಮಂಗಳ ಸಾಹಿತ್ಯ ವೇದಿಕೆ ಮಾಜಿ ರಾಜ್ಯಾಧ್ಯಕ್ಷ ಬಿ.ವಿ.ಚಿದಾನಂದಮೂರ್ತಿ, ಹಿರಿಯ ನಿರ್ದೇಶಕ ಡಿ.ಮಂಜುನಾಥ, ಎಂ.ಆರ್.ರವಿಪ್ರಸಾದ್, ಜಿ.ಟಿ.ಮಲ್ಲಿಕಾರ್ಜುನ್, ಬಿ.ಸುರೇಶ್‌ಬಾಬು ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ