ಶೈಕ್ಷಣಿಕ ಪ್ರಗತಿಗಾಗಿ ದಾನಿಗಳ ಸಂಖ್ಯೆ ಹೆಚ್ಚಲಿ: ಡಾ.ಜಯಪ್ಪ

KannadaprabhaNewsNetwork |  
Published : Jun 21, 2025, 12:49 AM IST
ತಾಲೂಕಿನ ಸಂತೆಬೆನ್ನೂರು ಗ್ರಾಮದ ಎಸ್.ಎಸ್.ಜೆ.ವಿ.ಪಿ(ಕೆ.ಪಿ.ಎಸ್) ಪಿಯು ಕಾಲೇಜಿನಲ್ಲಿ ಶುಕ್ರವಾರ ಬೆಂಗಳೂರಿನ ರಾಜಮನೆ ಪೌಂಡೇಷನ್ ವತಿಯಿಂದ 1100ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉನ್ನತ ಶಿಕ್ಷಣ ಪರಿಷತ್ತಿನ ನಿವೃತ್ತ ಅಧಿಕಾರಿ ಡಾ.ಎಂ.ಜಯಪ್ಪ | Kannada Prabha

ಸಾರಾಂಶ

ಬೆಂಗಳೂರಿನ ರಾಜಮನೆ ಫೌಂಡೇಷನ್ ವತಿಯಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಎಲ್.ಕೆ.ಜಿ.ಯಿಂದ ಹಿಡಿದು ಪಿಯುಸಿ ಶಿಕ್ಷಣವರೆಗಿನ 1100 ಮಕ್ಕಳಿಗೆ ಉಚಿತವಾಗಿ ಪೆನ್ನು, ನೋಟ್ ಪುಸ್ತಕಗಳನ್ನು ನೀಡಲಾಗುತ್ತಿದೆ. ಶಿಕ್ಷಣ ಪ್ರಗತಿಗಾಗಿ ದುಡಿಮೆಯ ಲಾಭದ ಸ್ವಲ್ಪ ಭಾಗವನ್ನು ದಾನ ಮಾಡುತ್ತಿರುವ ಸಂಸ್ಥೆಯ ನಡೆ ಮಾದರಿಯಾಗಿದೆ ಎಂದು ಉನ್ನತ ಶಿಕ್ಷಣ ಪರಿಷತ್ತಿನ ನಿವೃತ್ತ ಅಧಿಕಾರಿ ಡಾ.ಎಂ.ಜಯಪ್ಪ ಹೇಳಿದ್ದಾರೆ.

- ಸಂತೆಬೆನ್ನೂರಲ್ಲಿ ಬಡವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಬೆಂಗಳೂರಿನ ರಾಜಮನೆ ಫೌಂಡೇಷನ್ ವತಿಯಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಎಲ್.ಕೆ.ಜಿ.ಯಿಂದ ಹಿಡಿದು ಪಿಯುಸಿ ಶಿಕ್ಷಣವರೆಗಿನ 1100 ಮಕ್ಕಳಿಗೆ ಉಚಿತವಾಗಿ ಪೆನ್ನು, ನೋಟ್ ಪುಸ್ತಕಗಳನ್ನು ನೀಡಲಾಗುತ್ತಿದೆ. ಶಿಕ್ಷಣ ಪ್ರಗತಿಗಾಗಿ ದುಡಿಮೆಯ ಲಾಭದ ಸ್ವಲ್ಪ ಭಾಗವನ್ನು ದಾನ ಮಾಡುತ್ತಿರುವ ಸಂಸ್ಥೆಯ ನಡೆ ಮಾದರಿಯಾಗಿದೆ ಎಂದು ಉನ್ನತ ಶಿಕ್ಷಣ ಪರಿಷತ್ತಿನ ನಿವೃತ್ತ ಅಧಿಕಾರಿ ಡಾ.ಎಂ.ಜಯಪ್ಪ ಹೇಳಿದರು.

ತಾಲೂಕಿನ ಸಂತೆಬೆನ್ನೂರು ಗ್ರಾಮದ ಎಸ್.ಎಸ್.ಜೆ.ವಿ.ಪಿ. (ಕೆ.ಪಿ.ಎಸ್) ಪಿಯು ಕಾಲೇಜಿನಲ್ಲಿ ಶುಕ್ರವಾರ ಬೆಂಗಳೂರಿನ ರಾಜಮನೆ ಫೌಂಡೇಷನ್ ವತಿಯಿಂದ 1100 ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ನೆರವು ಬಡ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ. ಇಂತಹ ದಾನಿಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದರು.

ತಣಿಗೆರೆ ಗ್ರಾಮದ ರಾಜಮನೆ ಫೌಂಡೇಷನ್ ನಿರ್ಮಾತೃ ಸನ್ನಿ ರಾಜಮನೆ ಮಾತನಾಡಿ, ಬಡಮಕ್ಕಳಿಗೆ ಮತ್ತು ಅಶಕ್ತ ಬಡವರಿಗೆ ಶೈಕ್ಷಣಿಕವಾಗಿ ಸಹಾಯ ಮಾಡುವುದು ನಮ್ಮಗಳ ಉದ್ದೇಶವಾಗಿದೆ ಎಂದರು.

ಫೌಂಡೇಷನ್ ಪ್ರತಿನಿಧಿ ಸಂತೋಷ್ ರಾಜಮನೆ ಮಾತನಾಡಿ, 11 ವರ್ಷಗಳಿಂದ ಸಂಸ್ಥೆಯಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡಲಾಗುತ್ತಿದೆ. ಈ ವರ್ಷ 40 ಸಾವಿರ ನೋಟ್ ಪುಸ್ತಕಗಳನ್ನು ನೀಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಗೊಲ್ಲರಹಳ್ಳಿ ಪ್ರಭು, ತಣಿಗೆರೆ ಪ್ರಭಕರ್, ಎಸ್.ಟಿ.ನಾಯಕ್, ಮಧು, ಪ್ರಾಂಶುಪಾಲೆ ಯಶೋಧಮ್ಮ, ಮಹಮದ್ ಯುನೋಸ್, ರವಿ, ಪಾಪಯ್ಯ, ಎಂ.ಬಿ. ನಾಗರಾಜ್, ದ್ಯಾಮೇಶ್, ನಾಗರಾಜ್ ಸೇರಿದಂತೆ ಶಿಕ್ಷಕರು ಹಾಜರಿದ್ದರು.

- - -

-20ಕೆಸಿಎನ್‌ಜಿ1.ಜೆಪಿಜಿ:

ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಪರಿಷತ್ತಿನ ನಿವೃತ್ತ ಅಧಿಕಾರಿ ಡಾ.ಎಂ.ಜಯಪ್ಪ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ