ಮಹಿಳೆಯರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಲಿ: ಡಾ. ಮಹಾಂತೇಶ್ ಹೊಸಮನಿ

KannadaprabhaNewsNetwork |  
Published : Nov 26, 2026, 01:15 AM IST
ಮಧುಗಿರಿಯ ಟಿವಿವಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಏರ್ಪಡಿಸಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ದಿನ  ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಮಹಂತೇಶ್ ವೈ ಹೊಸಮನಿ ಮಾತನಾಡಿದರು..ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮತ್ತು ವಿದ್ಯಾರ್ಥಿನಿಯರು ಇದ್ದಾರೆ.   | Kannada Prabha

ಸಾರಾಂಶ

ಮೂಢನಂಬಿಕೆಗಳಿಗೆ ದಾಸರಾಗದೆ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮೋಜು ಮಸ್ತಿಗಳಿಂದ ದೂರವಿದ್ದಾಗ ಇತರರ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳುವುದಿಲ್ಲ, ಪ್ರಚೋಧನೆಯ ಮಾತುಗಳಿಗೆ ಹಾಗೂ ವಿಲಕ್ಷಣ ಉಡುಪುಗಳಿಗೆ ಮಾರು ಹೋಗದೆ ಸಾಮಾಜಿಕ ಸಭ್ಯತೆ ಮೈಗೂಡಿಸಿಕೊಂಡು ಉತ್ತಮ ಬದುಕನ್ನು ತಾವು ಕಟ್ಟಿಕೊಂಡು ಸಂಸ್ಕಾರವಂತರಾಗಿ ಮನೆ, ಸಮಾಜಕ್ಕೆ ಗೌರವ ತರಬೇಕು.

ಮಧುಗಿರಿ: ಮಹಿಳೆಯರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯಕರ ಚಿಂತನೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಮಹಾಂತೇಶ್ ವೈ. ಹೊಸಮನಿ ತಿಳಿಸಿದರು.

ಬುಧವಾರ ಪಟ್ಟಣದ ಟಿ.ವಿ.ವಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ದೈಹಿಕ, ಮಾನಸಿಕ, ಲೈಂಗಿಕ ಮತ್ತು ಕೌಟುಂಬಿಕ ದೌರ್ಜನ್ಯಗಳ ಬಗ್ಗೆ ತಿಳಿಸಿ, ಕಾನೂನುಗಳ ಪರಿಚಯಿಸುವ ಪ್ರಯತ್ನ ಮಾಡಿದರು. ಮಹಿಳೆಯರ ಆತ್ಮವಿಶ್ವಾಸ, ಅರಿವು ಕುಂದಬಾರದು ಎಂದರಲ್ಲದೆ, ಸಂಯಮ, ನಡುವಳಿಕೆಯಲ್ಲಿ ಮಹಿಳೆಯರು ತಪ್ಪು ಹೆಜ್ಜೆ ಇಡದಂತೆ ಸಮಾಜದ ಹಾಗೂ ಕುಟುಂಬದ ಏಳಿಗೆಗೆ ಕಟಿಬದ್ಧರಾಗಿ ಜೀವನ ನಿರ್ವಹಣೆ ಮಾಡಬೇಕು. ಆಗ ಮಾತ್ರ ನೈತಿಕ ತಳಹದಿಯ ಮೇಲೆ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು.

ಹಿರಿಯ ಸಾಹಿತಿ ಪ್ರೊ. ಮ.ಲ.ನ.ಮೂರ್ತಿ ಮಾತನಾಡಿ, ಮೂಢನಂಬಿಕೆಗಳಿಗೆ ದಾಸರಾಗದೆ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು. ಮೋಜು ಮಸ್ತಿಗಳಿಂದ ದೂರವಿದ್ದಾಗ ಇತರರ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳುವುದಿಲ್ಲ, ಪ್ರಚೋಧನೆಯ ಮಾತುಗಳಿಗೆ ಹಾಗೂ ವಿಲಕ್ಷಣ ಉಡುಪುಗಳಿಗೆ ಮಾರು ಹೋಗದೆ ಸಾಮಾಜಿಕ ಸಭ್ಯತೆ ಮೈಗೂಡಿಸಿಕೊಂಡು ಉತ್ತಮ ಬದುಕನ್ನು ತಾವು ಕಟ್ಟಿಕೊಂಡು ಸಂಸ್ಕಾರವಂತರಾಗಿ ಮನೆ, ಸಮಾಜಕ್ಕೆ ಗೌರವ ತರಬೇಕು ಎಂದರು.

ಉಪನ್ಯಾಸಕರಾದ ವಿದ್ಯಾಶ್ರೀ, ವಿಮಲಾ, ಹಸೀನಾ, ತೋಹೀದಾಬಾನು ಮೊದಲಾದವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆಯಲ್ಲಿ ಮುಳುಗಿವೆ ಕೊಳಚೆ ಮಂಡಳಿಯ ನಿವಾಸಗಳು: ರವಿಶಂಕರ್ ರೆಡ್ಡಿ
ಸಂತ್ರಸ್ತ ಕುಟುಂಬಗಳಿಗೆ ಸಚಿವ ಶಿವಲಿಂಗೇಗೌಡ ಸಾಂತ್ವನ