ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಮಾಡಿಕೊಳ್ಳಲಿ

KannadaprabhaNewsNetwork |  
Published : Apr 26, 2026, 02:15 AM IST
ಊಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಆಗಮಿಸಿ ಸಲಹೆ ಪಡೆದುಕೊಂಡ ಸಾರ್ವಜನಿಕರು ಹಾಗೂ  ಬೆಂಗಳೂರಿನ ವೈದೇಹಿ ಇನ್ಸ್ಟಿಟ್ಯೂಟ್ ಆಫ್  ‌ಮೆಡಿಕಲ್ ಸೈನ್ಸ್ ತಂಡ. | Kannada Prabha

ಸಾರಾಂಶ

ವೈದ್ಯಾಧಿಕಾರಿ ಮಣಿ ಶಂಕರ್ ಸಲಹೆ । ಪರಶುರಾಂಪುರದಲ್ಲಿ ಉಚಿತ ಆರೋಗ್ಯ ತಪಾಸಣೆ

ಕನ್ನಡಪ್ರಭ ವಾರ್ತೆ ಪರಶುರಾಂಪುರ

ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಾರ್ವಜನಿಕರು ಬಂದು ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಆರೋಗ್ಯ ತಪಾಸಣಾ ಶಿಬಿರದ ವೈಧ್ಯಾಧಿಕಾರಿ ಡಾಕ್ಟರ್ ಮಣಿ ಶಂಕರ್ ತಿಳಿಸಿದರು.

ಶನಿವಾರ ಆರ್ಯವೈಶ್ಯ ಸಮುದಾಯದ ಹಾಗೂ ಆರ್ಯವೈಶ್ಯ ಮಹಿಳಾ ಸಂಘಗಳ ವತಿಯಿಂದ ತಮ್ಮ ಕುಲದೇವತೆ ಶ್ರೀ ವಾಸವಿ ಜಯಂತಿಯ ಅಂಗವಾಗಿ ಗ್ರಾಮಸ್ಥರಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ವೈದೇಹಿ ಇನ್ಸ್ಟಿಟ್ಯೂಟ್ ಆಫ್ ‌ಮೆಡಿಕಲ್ ಸೈನ್ಸ್ ತಂಡದಿಂದ ಗ್ರಾಮದಲ್ಲಿ ಬಂದು ರೋಗಿಗಳಿಗೆ ಆರೋಗ್ಯ ತಪಾಸಣೆ ಕೈಗೊಂಡು ಮಾತನಾಡಿದರು.

ಸಮುದಾಯದಲ್ಲಿ ದರ್ಶನಿಕರ ಜಯಂತಿಗಳು ಹಬ್ಬ ಹರಿದಿನಗಳು ದುಂದು ವೆಚ್ಚ ಮಾಡುವ ಬದಲಾಗಿ ಜನರಿಗೆ ಉಪಯುಕ್ತವಾಗುವ ಸಮಾಜಪಯೋಗಿ ಕಾರ್ಯಗಳನ್ನು ಕೈಗೊಂಡು ಜಯಂತಿಗಳ ಕುರಿತು ಸಾರ್ವಜನಿಕರಿಗೆ ಅಭಿಯಾನ ಮತ್ತು ಪ್ರೀತಿ ಮೂಡಿಸುವುದು ಮುಡಿಸಬೇಕು ಎಂದರು.

ಆರ್ಯವೈಶ್ಯ ಸಮುದ ಸಂಘಗಳ ಸಮುದಾಯದ ಸಂಘಟಕ ಕಿರಣ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಆರ್ಯವೈಶ್ಯ ಸಂಘದ ಪದಾಧಿಕಾರಿಗಳ ಸಲಹೆಯಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ನೂರಕ್ಕೂ ಹೆಚ್ಚು ರೋಗಿಗಳಿಗೆ ಹೃದಯ, ಕಣ್ಣು, ಕಿವಿ, ಮೂಗು, ಮೂಳೆ, ಸಾಮಾನ್ಯ ಚಿಕಿತ್ಸೆ ಉಚಿತ ವೈದ್ಯಕೀಯ ಸಲಹೆ ನೀಡಿ ಉಚಿತವಾಗಿ ಔಷಧಿಗಳನ್ನು ವಿತರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಡಾಕ್ಟರ್ ಹರೀಶ್ ಕುಮಾರ್ ಮಾತನಾಡಿ, ಇಂದಿನ ಆಧುನಿಕ ಕಾಲಘಟ್ಟದ ಜನರು ನಿಯಮಿತವಾಗಿ ಸಮೀಪದ ಆಸ್ಪತ್ರೆಗಳಲ್ಲಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ಜೀವನ ಕ್ರಮವನ್ನು ರೂಡಿಸಿಕೊಳ್ಳಬೇಕು ಎಂದರು.

ಈ ವೇಳೆ ಗ್ರಾಮಸ್ಥರು ಆರೋಗ್ಯ ತಪಾಸಣೆಗೆ ಒಳಗಾಗಿ ತಮ್ಮ ರೋಗಗಳ ಕುರಿತು ವೈದ್ಯಕೀಯ ಸಲಹೆ ಪಡೆದುಕೊಂಡು ಔಷಧಿಗಳನ್ನು ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮುದಾಯದ ಮುಖಂಡರಾದ ಕಿರಣ್ ಕುಮಾರ್, ಸಂದೀಪ್, ಮಹೇಶ್, ರಾಜು, ವೆಂಕಟಾಚಲ, ಮದನ, ಶ್ರೀನಿವಾಸ, ರಾಜಣ್ಣ, ಪ್ರಣವ್, ಆರ್ಯ, ನಿಶಾಂತ್, ಲಹರಿ, ಸ್ನೇಹ, ವೈದ್ಯಾಧಿಕಾರಿಗಳಾದ ಡಾಕ್ಟರ್ ಸುಹಾಸ್, ಡಾಕ್ಟರ್ ಮೋಹಿತ್, ಡಾಕ್ಟರ್ ವಿಶ್ವಾಸ್, ಡಾಕ್ಟರ್ ಸುಪ್ರೀತ್ ಮತ್ತು ಡಾಕ್ಟರ್ ಪವನ್ ಗ್ರಾಮದ ಆರ್ಯವೈಶ್ಯ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಿಗೆ ಸೋನಿಯಾ, ಪ್ರಿಯಾಂಕಾ ಅಷ್ಟೇ ಮಹಿಳೆಯರು: ಹರೀಶ್
ಒಳಮೀಸಲಾತಿಯಲ್ಲಿ ಲಂಬಾಣಿ ಜನಾಂಗಕ್ಕೆ ನ್ಯಾಯ ನೀಡಿ: ಮಿಥುನ್ ಚಕ್ರವರ್ತಿ