ಗ್ರಾಮೀಣ ಯುವಕರು ಕೃಷಿಯತ್ತ ಒಲವು ತೋರಲಿ: ಡಾ. ಎಸ್.ವಿ.ಸುರೇಶ

KannadaprabhaNewsNetwork | Published : Jan 13, 2024 1:35 AM

ಸಾರಾಂಶ

ಗ್ರಾಮೀಣ ಯುವಕರು ವಲಸೆ ಹೋಗದಂತೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಯುವಕರು ಹೆಚ್ಚು ಗ್ರಾಮೀಣ ಕೃಷಿಯತ್ತ ಬರಬೇಕಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ ಅಭಿಪ್ರಾಯಪಟ್ಟರು. ಅರಸೀಕೆರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಬಿರ । ಬೆಂಗಳೂರು ಕೃಷಿ ವಿವಿ ಕುಲಪತಿ । ಕೃಷಿ ವಸ್ತುಪ್ರದರ್ಶನ, ರೈತರೊಂದಿಗೆ ಸಂವಾದ

ಕನ್ನಡಪ್ರಭ ವಾರ್ತೆ ಅರಸೀಕೆರೆ

ವೈಜ್ಞಾನಿಕ ಬೆಳೆ ಪದ್ಧತಿ, ಕೃಷಿ ಸಂಕಷ್ಟಗಳ ಪರಿಹಾರ, ಪ್ರಾಯೋಗಿಕವಾಗಿ ಹಳ್ಳಿಗಳಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಇಂದು ಬೃಹತ್ ಕೃಷಿ ವಸ್ತು ಪ್ರದರ್ಶನ ಮತ್ತು ೮೦ ರಿಂದ ೧೦೦ ಮಳಿಗೆಗಳು ಈ ಕಾರ್ಯಕ್ರಮದಲ್ಲಿ ಭಾಗ ವಹಿಸಿರುವುದು ಹರ್ಷದಾಯಕ ಸಂಗತಿ. ಗ್ರಾಮೀಣ ಯುವಕರು ವಲಸೆ ಹೋಗದಂತೆ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಯುವಕರು ಹೆಚ್ಚು ಗ್ರಾಮೀಣ ಕೃಷಿಯತ್ತ ಬರಬೇಕಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ ಅಭಿಪ್ರಾಯಪಟ್ಟರು.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕೃಷಿ ಮಹಾವಿದ್ಯಾಲಯ, ಹಾಸನ, ವತಿಯಿಂದ ತಾಲೂಕಿನ ಗಂಡಸಿ ಹ್ಯಾಂಡ್ ಪೋಸ್ಟ್ ಎಪಿಎಂಸಿ ಆವರಣದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಕೃಷಿ ವಸ್ತುಪ್ರದರ್ಶನ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

೧೯೪೭ ರಲಿದ್ದ್ಲ ೫೩ ಟನ್ ಆಹಾರ ಉತ್ಪಾದನೆ ಇಂದು ೩೨೩ ಟನ್ ಧಾನ್ಯ ಉತ್ಪಾದನೆ ತಲುಪಿದ್ದು ಭಾರತವು ಆಹಾರ ಉತ್ಪಾದನೆಯಲ್ಲಿ ಸ್ಪಾಲಂಬನೆಯೊಂದಿಗೆ ಹೊರ ದೇಶಕ್ಕೆ ರಪ್ತು ಮಾಡುತ್ತಿದೆ. ೧೯೬೫ ರಲ್ಲಿ ಡಾ. ಸ್ವಾಮಿನಾಥನ್ ರವರ ಹಸಿರು ಕ್ರಾಂತಿಯೊಂದಿಗೆ ಹೆಚ್ಚು ಇಳುವರಿ ಪಡೆಯಲು ರಸಗೊಬ್ಬರ, ನೀರಾವರಿ, ರಾಸಾಯನಿಕಗಳ ಬಳಕೆಯಿಂದ ಆಹಾರ ಭದ್ರತೆ ಸಾಧಿಸಿದ್ದೇವೆ. ಇದರಿಂದ ಮಣ್ಣಿನ ಫಲವತ್ತತೆ ಮತ್ತು ಗುಣ ಧರ್ಮಗಳಲ್ಲಿ ಏರುಪೇರು ಕಂಡು ಬಂದಿದೆ, ಕೃಷಿ ಕಾರ್ಮಿಕರು ಕೊರತೆ, ಎಕಬೆಳೆ ಪದ್ಧತಿ ಇವುಗಳಲ್ಲಿ ಬದಲಾವಣೆಗಳುಂಟಾಗಿ ರೈತರು ಉತ್ಪಾದನೆಯ ಜತೆಗೆ ಆಧಾಯವನ್ನು ಹೆಚ್ಚಿಸಿಕೊಳ್ಳಿವ ನಿಟ್ಟಿನಲ್ಲಿ ಕೃಷಿ ತಾಂತ್ರಿಕತೆಗಳನ್ನು ಬಳಸಿ ಕೊಳ್ಳುವುದು ಅನಿರ್ವಾಯವಾಗಿದೆ ಎಂದು ಹೇಳಿದರು.

ಕೃಷಿ ಕಾರ್ಯಾನುಭವ ಶಿಬಿರದ ಮುಖ್ಯಸ್ಥ ಡಾ. ಶಂಕರ ಎಂ.ಎಚ್. ಮಾತನಾಡಿ, ಆರು ಹಳ್ಳಿಗಳಲ್ಲಿ ಯಶಸ್ವಿಯಾಗಿ ತಂಗಿನಲ್ಲಿ ಬಿಳಿ ನೊಣದ ಬಾಧೆಯ ಹತೋಟಿ, ಹೈನುಗಾರಿಕೆಯಲ್ಲಿ ಅಜೋಲ್ಲಾ, ಜಾನುವಾರು ತಪಾಸಣೆ ಶಿಬಿರ ಮಾನವ ಆರೋಗ್ಯ ಶಿಬಿರ, ತಂಗಿನ ಮರ ಹತ್ತುವ ಸಾಧನದ ಬಳಕೆಯ ಪ್ರಾತ್ಯಕ್ಷಿಕೆ, ಸಮಗ್ರ ಕೃಷಿ ಪದ್ಧತಿ, ಜೇನು ಕೃಷಿ ಕಾರ್ಯಗಳ ಬೆಳೆ ವಿಚಾರ ಸಂಕೀರಣ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಉಲ್ಲೇಖಿಸಿದರು.

ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕೃಷಿ ಮಾಹಿತಿ ಕೇಂದ್ರ, ಬೆಳೆ ಸಂಗ್ರಹಾಲಯ, ಖಾಸಗಿ ಮಳಿಗೆಗಳಿಗೆ, ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಂದಾರ ಮತ್ತು ಹರ್ಷ ಪಿ. ಕಾರ್ಯಕ್ರಮ ನಿರೂಪಿಸಿದರು. ಅರ್ಚನ ವಂದಿಸಿದರು. ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದು ೩೦೦೦ ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

ಹಾಸನ ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ. ಎಸ್. ಎನ್. ವಾಸುದೇವನ್, ಹಾಸನದ ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ನಿತಿನ್, ಎಸ್.ಎ., ಹಾಸನ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ನಿವೃತ್ತ ಡೀನ್‌ ಡಾ. ಎಲ್. ಮಂಜುನಾಥ್ ಮತ್ತಿತರರಿದ್ದರು.

ವಸ್ತು ಪ್ರದರ್ಶನದ ಮಳಿಗೆಗಳ ಮತ್ತು ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್. ವಿ. ಸುರೇಶ ನೆರವೇರಿಸಿದರು.

Share this article