ಕನ್ನಡಪ್ರಭ ವಾರ್ತೆ ವಿಜಯಪುರ
ಮಹಾರಾಷ್ಟ್ರದ ಪುಣೆಯ ಪಿಂಪರಿಯ ಮಲ್ಲಿಕಾರ್ಜುನ ಮಂದಿರದಲ್ಲಿ ಹಿಂದೂ ವೀರಶೈವ ಲಿಂಗಾಯತ ಮಂಚ್‌ನಿಂದ ಸಮಾಜ ಮತ್ತು ರಾಷ್ಟ್ರ ಹಿತದ ಉದ್ದೇಶದಿಂದ ಜಾಗೃತಿ ಸಭೆಯಲ್ಲಿ ಮಾತನಾಡಿದರು. ದೇಶದ ಜನಗಣತಿಯಲ್ಲಿ ಹಿಂದೂ ಸಮುದಾಯದ ಸಂಖ್ಯೆ ಕಡಿಮೆಯಾಗದಂತೆ ತಾವು ಹಿಂದೂಗಳಾಗಿ ನೋಂದಾಯಿಸಲು ಸಮುದಾಯವನ್ನು ಜಾಗೃತಗೊಳಿಸಲು ನಿರ್ಣಯವನ್ನು ಎಲ್ಲಾ ಸಂತರು ಸರ್ವಾನುಮತದಿಂದ ಅಂಗೀಕರಿಸಿದರು, ಅಲ್ಲದೆ, ಹಿಂದೂ ವೀರಶೈವ ಲಿಂಗಾಯತ ಮಂಚ್ ಅನ್ನು ಕರ್ನಾಟಕಕ್ಕೆ ವಿಸ್ತರಿಸಲು ಯೋಜನೆ ಸಿದ್ಧಪಡಿಸಲು ಸಮಿತಿ ನೇಮಿಸಲು ನಿರ್ಣಯ ಅಂಗೀಕರಿಸಲಾಯಿತು.
ಹಿಂದೂ ವೀರಶೈವ ಲಿಂಗಾಯತ ಮಂಚ ಕರ್ನಾಟಕ-ಮಹಾರಾಷ್ಟ್ರದ 75 ಶಿವಾಚಾರ್ಯಗಳ ನೇತೃತ್ವದಲ್ಲಿ ಮಹಾ ಆರತಿ, ಸಮಾಜ ಮತ್ತು ರಾಷ್ಟ್ರ ಹಿತಕ್ಕಾಗಿ ವಿವಿಧ ವಿಷಯಗಳ ಮೇಲೆ ನಿರ್ಣಯಗಳನ್ನು ಅಂಗೀಕರಿಸಲಾಯಿತು.ಇದರಲ್ಲಿ ಡಾ.ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಮನಗೂಳಿ ಸಂಗನಬಸವ ಶಿವಾಚಾರ್ಯರು, ಮಸಮನಾಳದ ಸಿದ್ದರಾಮ ಶ್ರೀಗಳು, ಹಿಂದೂ ವೀರಶೈವ ಲಿಂಗಾಯತ ಮಂಚದ ಪದಾಧಿಕಾರಿಗಳು ರಾಜೇಂದ್ರ ಹಿರೇಮಠ, ಹೇಮಂತ ಹರಹರೆ, ಅಣ್ಣಾರಾಯ ಬಿರಾದಾರ, ಗುರುರಾಜ ಚರಂತಿಮಠ, ಎಸ್.ಬಿ.ಪಾಟೀಲ, ದಾನೇಶ ತಿಮಶೆಟ್ಟಿ, ಅಜಯ ಮುಂಗಡೆ, ನಾರಾಯಣ ಬಹಿರವಡೆ, ಗುರುರಾಜ ಕುಂಬಾರ, ದತ್ತ ಬಹಿರವಡೆ, ಸುರೇಶ ವಾಳಕೆ, ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯವಾಹ ಮಹೇಶ್ವರ ಮರಾಠೆ ಭಾಗವಹಿಸಿದ್ದರು. ಎಲ್ಲ ಸಂತರನ್ನು ಒಗ್ಗೂಡಿಸಿ ಇಂದಿನ ಕಾರ್ಯಕ್ರಮದಂತೆ ಕರ್ನಾಟಕದ ಬಿಜಾಪುರ ಅಥವಾ ಬಾಗಲಕೋಟೆ ಜಿಲ್ಲೆಯಲ್ಲಿ ಸಂತರ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.