
ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ತಾಲೂಕು ಶೂಲದ ಅಂಜನೇಯ ದೇವಾಲಯದ ಬಳಿ ಭೂ ಬಳಕೆ ಮತ್ತು ಭೂ ಹೊದಿಕೆ ನೀತಿಗೆ ಒತ್ತಾಯಿಸಿ, ಅವೈಜ್ಞಾನಿಕ ರಿಂಗ್ ರಸ್ತೆ ವಿರೋಧಿಸಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಒಂದು ಯೋಜನೆಯಿಂದ ಜನರ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಸಾಮಾಜಿಕ ಪರಿಣಾಮಗಳ ಕುರಿತು ಅಧ್ಯಯನ ನಡೆಸದೆ, ರೈತರೊಂದಿಗೆ ಸಮಾಲೋಚನೆ ನಡೆಸದೆ ರಚಿಸಿರುವ ಡಿಪಿಆರ್ ಅತ್ಯಂತ ಅವೈಜ್ಞಾನಿಕವಾಗಿದೆ. ಇದರ ವಿರುದ್ಧದ ಹೋರಾಟ ನ್ಯಾಯಯುತವಾಗಿದೆ. ಹಾಗಾಗಿ ನಿಮ್ಮ ಹೋರಾಟದ ಜೊತೆಗೆ ನಾನು ಸದಾ ಇದ್ದೇ ಇರುತ್ತೇನೆ ಎಂದರು.ವಿದ್ಯಾವಂತ ಯುವಜನರು ಈ ರೀತಿಯ ಅನ್ಯಾಯಕ್ಕೆ ಒಳಗಾದ ರೈತರು, ಕಾರ್ಮಿಕರು ಹಾಗೂ ಜನರ ಧ್ವನಿಯನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸವನ್ನು ಮಾಡಬೇಕಿದೆ. ಈ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಪ್ರಶ್ನಿಸುವ, ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಡಾ.ಮಂಜುನಾಥ್ ಮಾಡಿದ್ದಾರೆ. ಡಿಪಿಆರ್‌ನಲ್ಲಿರುವ ಎಲ್ಲಾ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ನಿಮ್ಮ ಹೋರಾಟಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ. ಹಾಗಾಗಿ ವ್ಯವಸ್ಥೆಯ ವಿರುದ್ಧ ನಾವೆಲ್ಲರೂ ಹೋರಾಟಕ್ಕೆ ಮುಂದಾಗಬೇಕಿದೆ. ನಿಮ್ಮ ಧ್ವನಿಯನ್ನು, ಪ್ರತಿರೋಧವನ್ನು ಆಳುವವರ ಮಟ್ಟಕ್ಕೆ ತಲುಪಿಸಲು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದು ಪಿ.ವಿ.ರಾಜಗೋಪಾಲ್ ಅಭಯ ನೀಡಿದರು.
ಗಾಂಧಿ ಸಹಜ ಬೇಸಾಯ ಆಶ್ರಮದ ಸಂಸ್ಥಾಪಕ ಡಾ.ಮಂಜುನಾಥ್ ಮಾತನಾಡಿ, ಒಂದು ಯೋಜನೆಯ ಕುರಿತ ವಿಸ್ಕೃತ ವರದಿ(ಡಿಪಿಆರ್), ಈ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ತಿಳಿದಿರಬೇಕು. ಆದರೆ ಈ ಯೋಜನೆ ಕುರಿತು ಭೂಮಿ ಕಳೆದುಕೊಳ್ಳುವ ರೈತರಷ್ಟೇ ಅಲ್ಲ,ರೈತ ಸಂಘಟನೆಗಳು, ಹೋರಾಟಗಾರರನ್ನು ಎಲ್ಲರನ್ನು ಕತ್ತಲೆಯಲ್ಲಿ ಇಡಲಾಗಿದೆ. ರೈತರೊಂದಿಗೆ ಚರ್ಚೆ ನಡೆಸದೆ,ಪಂಚಾಯಿತಿಗಳಿಂದ ಎನ್.ಒ.ಸಿ. ಪಡೆಯದೆ, ವಿವಿಧ ಇಲಾಖೆಗಳೊಂದಿಗೆ, ರೈತರೊಂದಿಗೆ ಚರ್ಚಿ ನಡೆಸದೆ, ಡಿಪಿಆರ್. ತಯಾರಿಸಿ, ಎಲ್ಲ ರೀತಿಯ ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ಕೇಂದ್ರ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ,ಅನುಮೋದನೆ ಪಡೆಯಲಾಗಿದೆ. ಹಾಗಾಗಿ ಇದೊಂದು ಜನವಿರೋಧಿ, ರೈತವಿರೋಧಿ, ಪರಿಸರ ವಿರೋಧಿ ಡಿಪಿಆರ್ ಆಗಿದೆ ಎಂಬ ಆಂಶವನ್ನು ಸಂತ್ರಸ್ಥ ರೈತರ ಮುಂದಿಟ್ಟರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಚಿಂತಕ ಕೆ.ದೊರೆರಾಜು ಮಾತನಾಡಿ, ಗಾಂಧಿ ಮಾರ್ಗದಲ್ಲಿ ನಡೆದರೆ, ನಮ್ಮ ಹೋರಾಟ ನಿಜಕ್ಕೂ ಸತ್ಯದಿಂದ ಕೂಡಿದ್ದರೆ ಗೆಲುವು ನಮ್ಮದೆ. ಆಳುವ ಸರ್ಕಾರಗಳು ನಮ್ಮನ್ನು ಬೆದರಿಸುವ, ಹಿಬ್ಬಾಗಿಸುವ ಕೆಲಸವನ್ನು ಮಾಧ್ಯಮಗಳು, ಪೊಲೀಸ್ ಮೂಲಕ ಮಾಡುತ್ತಲೇ ಬಂದಿವೆ. ಹಾಗಾಗಿ ಈ ಎಚ್ಚರಿಕೆಯನ್ನು ಇಟ್ಟುಕೊಂಡೇ ಹೋರಾಟ ರೂಪಿಸಬೇಕಾಗಿದೆ ಎಂದರು.