ಕನ್ನಡಪ್ರಭ ವಾರ್ತೆ ದಾವಣಗೆರೆ ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಆಯ್ಕೆ ಮಾಡಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಮಕ್ಕಳ ಮುಂದಿನ ಶಿಕ್ಷಣಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಅಭಿಪ್ರಾಯಪಟ್ಟರು.
ನಿಮ್ಮ ಪೋಷಕರು, ತಂದೆ ತಾಯಿಗಳು ತಮ್ಮ ಮಕ್ಕಳ ಮೇಲೆ ವಿಶ್ವಾಸವಿಟ್ಟು ಸಾಲಸೂಲ ಮಾಡಿ ಕಷ್ಟಪಟ್ಟು ಫೀಜು ಕಟ್ಟಿ ಶಾಲೆ-ಕಾಲೇಜಿಗೆ ಸೇರಿಸುತ್ತಾರೆ. ಹಾಗಾಗಿ, ಶಿಕ್ಷಣ ಕಲಿತು ಅವರ ನಂಬಿಕೆ ಉಳಿಸುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ತಿಳಿಸಿದರು.
ಜೆ.ಎಚ್.ಪಟೇಲ್ ಕಾಲೇಜಿನ ಕಾರ್ಯದರ್ಶಿ ಮುಸ್ತಾಫ ಮಾತನಾಡಿ, ಕರವೇ ಸಾಧನೆ ಮಾಡಿದ ಮಕ್ಕಳಿಗೆ ಪ್ರೋತ್ಸಾಹಿಸಿದ ಜೊತೆಗೆ ಒಂದಿಷ್ಟು ಸಂಸ್ಕಾರವನ್ನು ಕಲಿಸುವ ಕೆಲಸವನ್ನು ಮಾಡುತ್ತಿದೆ. ಇಂದಿನ ಮಕ್ಕಳು ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದಬೇಕು. ಅದಕ್ಕೆ ಮನೆಯಲ್ಲಿ ಪೋಷಕರು ಒತ್ತಡ ತರಬಾರದು. ಕಲಿಕೆಯ ಒಂದು ಭಾಗವಾಗಿ ನನ್ನ ಜವಾಬ್ದಾರಿ ಎಂದು ಓದಿದರೆ ಸಾಕು. ಇಂಥ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಂಥ ಕಾರ್ಯಗಳಲ್ಲಿ ಕರವೇ ಮತ್ತಷ್ಟು ಕಾರ್ಯಕ್ರಮ ಉದ್ದೇಶ ಮತ್ತಷ್ಟು ಉಜ್ವಲ ವಾಗಲಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಕರ್ನಾಟಕ ರತ್ನ ವಿಷ್ಣುವರ್ಧನ್ ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿ, ಈ ಪ್ರಶಸ್ತಿಯನ್ನು ಪಡೆದಿದ್ದು ಮತ್ತಷ್ಟು ಕೆಲಸ ಮಾಡಲು ಧೈರ್ಯ ಸ್ಥೈರ್ಯ ಹುಮ್ಮಸ್ಸು ಉಂಟಾಗಿದೆ. ನಾವು ಎಲೆಮರೆಕಾಯಿಯಾಗಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿರುತ್ತೇವೆ. ಕರವೇಯಂತಹ ಸಂಘಟನೆಗಳು ನನ್ನನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆ ತರುವ ವಿಚಾರ. ಅಲ್ಲದೇ ಮಕ್ಕಳಿಗೆ ಈ ಪ್ರಶಸ್ತಿ ಮತ್ತಷ್ಟು ಸಾಧಿಸುವ ಛಲ ಹುಟ್ಟಿಸುತ್ತದೆ ಎಂದು ತಿಳಿಸಿದರು.
ಅತಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಸವರಾಜ ಸಾಗರ್, ಶ್ರೀನಿವಾಸ ಚಿನ್ನಿಕಟ್ಟೆ, ಕೋಮಲ್ ಜೈನ್, ಬಸಮ್ಮ, ಗಿರೀಶ್ ಕುಮಾರ್, ಮಹೇಶ್ವರಪ್ಪ, ಮಂಜುಶ್ರೀ ಗೌಡ, ರವಿಕುಮಾರ, ಜಿ.ಎಸ್.ಸಂತೋಷ್, ಗೋಪಾಲ ದೇವರ ಮನೆ, ಜಬಿವುಲ್ಲಾ, ರಫೀಕ್, ಲಿಂಗರಾಜ್, ಖಾದರ್ ಭಾಷಾ, ನಾಗರಾಜ, ಎಂ.ವೈ.ಮಾಂತೇಶ್, ಮಲ್ಲ ನಾಯಕ್, ವಿನಯ್, ರಾಜೇಶ್, ರಮೇಶ್, ಶಾಂತಮ್ಮ, ಶಾಹೀನ ಬೇಗಂ, ಸಾಕಮ್ಮ, ಆಲೂರು ನಾಗಮ್ಮ, ಮಂಜುಳಾ ಗಣೇಶ್, ಧರ್ಮರಾಜ್, ಪರಮೇಶ್, ಮುಸ್ತಫ, ತನ್ವೀರ್, ಭಾಷಾ ಅಮಾನುಲ್ಲ ಖಾನ್, ಪೈಲ್ವಾನ್ ಜಬಿವುಲ್ಲಾ, ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
-12ಕೆಡಿವಿಜಿ39: ದಾವಣಗೆರೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಉದ್ಘಾಟಿಸಿದರು. ಎಂ.ಎಸ್.ರಾಮೇಗೌಡ, ವಾಸುದೇವ ರಾಯ್ಕರ್ ಇತರರು ಇದ್ದರು.