ವಿದ್ಯಾರ್ಥಿಗಳ ಪ್ರತಿಭೆಗೆ ಮಾನ್ಯತೆ ಸಿಗಲಿ

KannadaprabhaNewsNetwork |  
Published : Jul 21, 2025, 12:00 AM IST
20ಎಚ್ಎಸ್ಎನ್‌15 : ಶ್ರವಣಬೆಳಗೊಳದ ಎಸ್.ಎನ್. ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ನಮ್ಮ ರಾಷ್ಟ್ರದ ಮುಂದಿನ ಭವಿಷ್ಯವಾಗಿದ್ದು, ಅವರ ಪ್ರತಿಭೆಯನ್ನು ಗುರುತಿಸಿ, ನೈತಿಕ ಮೌಲ್ಯ ಹಾಗೂ ಸೃಜನಾತ್ಮಕತೆಯನ್ನು ಬೆಳೆಸಿದರೆ ನಾಳೆಯ ಸಮರ್ಥ ನಾಗರಿಕರಾಗಿ ರೂಪುಗೊಳ್ಳಲು ಸಹಾಯವಾಗುತ್ತದೆ ಎಂದು ಪ್ರಾಂಶುಪಾಲ ಡಾ. ಎಸ್. ದಿನೇಶ್ ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಮತ್ತು ಸಾಧನೆಗೆ ವೇದಿಕೆಯಾಗುತ್ತವೆ. ಇದಲ್ಲದೆ ಪುರಸ್ಕೃತ ವಿದ್ಯಾರ್ಥಿಗೆ ಉತ್ತಮ ಶಿಕ್ಷಣ ಸಂಸ್ಥೆಗಳ ಪ್ರವೇಶ ಅಥವಾ ವಿದ್ಯಾರ್ಥಿವೇತನ ಪಡೆಯುವ ಸಂದರ್ಭಗಳಲ್ಲಿ ಈ ಪುರಸ್ಕಾರವು ಹೆಚ್ಚುವರಿ ಮೌಲ್ಯ ಒದಗಿಸುತ್ತದೆ. ಇದು ಭವಿಷ್ಯ ನಿರ್ಮಾಣದಲ್ಲಿ ದೊಡ್ಡ ಹೆಜ್ಜೆಯಾಗಬಹುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶ್ರವಣಬೆಳಗೊಳ

ವಿದ್ಯಾರ್ಥಿಗಳು ನಮ್ಮ ರಾಷ್ಟ್ರದ ಮುಂದಿನ ಭವಿಷ್ಯವಾಗಿದ್ದು, ಅವರ ಪ್ರತಿಭೆಯನ್ನು ಗುರುತಿಸಿ, ನೈತಿಕ ಮೌಲ್ಯ ಹಾಗೂ ಸೃಜನಾತ್ಮಕತೆಯನ್ನು ಬೆಳೆಸಿದರೆ ನಾಳೆಯ ಸಮರ್ಥ ನಾಗರಿಕರಾಗಿ ರೂಪುಗೊಳ್ಳಲು ಸಹಾಯವಾಗುತ್ತದೆ ಎಂದು ಪ್ರಾಂಶುಪಾಲ ಡಾ. ಎಸ್. ದಿನೇಶ್ ಹೇಳಿದರು.

ಪಟ್ಟಣದ ಎಸ್.ಎನ್. ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಧನೆಗೆ ಉತ್ತೇಜನ ನೀಡುವುದು, ಅವರ ಪ್ರತಿಭೆಗೆ ಮಾನ್ಯತೆ ನೀಡುವುದರಿಂದ ಅವರ ಶ್ರಮಕ್ಕೆ ಸಾರ್ಥಕತೆ ದೊರೆಯುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಚೈತನ್ಯ ನೀಡುವುದರ ಜತೆಗೆ ಇತರರಿಗೂ ಪ್ರೇರಣೆ ನೀಡುತ್ತದೆ. ಒಬ್ಬ ವಿದ್ಯಾರ್ಥಿಗೆ ಪುರಸ್ಕಾರ ಸಿಕ್ಕರೆ, ಇತರರಲ್ಲೂ ಸ್ಪರ್ಧಾತ್ಮಕ ಮನೋಭಾವ ಮೂಡಲಿದ್ದು, ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.

ಎಸ್ಎಸ್‌ಡಿಜೆಜೆಪಿ ಸಂಘದ ಮುಖ್ಯ ಆಡಳಿತಾಧಿಕಾರಿ ಡಾ. ಉದಯಕುಮಾರ್ ಇರ್ವತ್ತೂರು ಮಾತನಾಡಿ, ಶಾಲಾ-ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿದರೆ, ಮುಂದಿನ ಉನ್ನತ ವ್ಯಾಸಂಗಕ್ಕೆ ಸುಗಮವಾಗುತ್ತದೆ ಹಾಗೂ ನಾಯಕತ್ವದ ಗುಣವನ್ನು ರೂಪಿಸಲು ಸಹಾಯಕವಾಗುತ್ತದೆ. ವಿದ್ಯಾರ್ಥಿ ಜೀವನವೆಂಬುದು ಭವಿಷ್ಯ ನಿರ್ಮಾಣದ ಬಹುಮುಖ್ಯ ಅಡಿಪಾಯ. ಅವನ ಕೌಶಲ್ಯ, ಶ್ರಮ ಮತ್ತು ಸಾಮರ್ಥ್ಯಕ್ಕೆ ಗೌರವ ನೀಡಿದಂತಾಗುತ್ತದೆ. ಅದಕ್ಕಾಗಿ ಪ್ರತಿಭಾ ಪುರಸ್ಕಾರಗಳು ಅತ್ಯಂತ ಮಹತ್ವಪೂರ್ಣ ಪಾತ್ರವಹಿಸುತ್ತವೆ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ, ಶಿಕ್ಷಣ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ ಮತ್ತು ಸಾಧನೆಗೆ ವೇದಿಕೆಯಾಗುತ್ತವೆ. ಇದಲ್ಲದೆ ಪುರಸ್ಕೃತ ವಿದ್ಯಾರ್ಥಿಗೆ ಉತ್ತಮ ಶಿಕ್ಷಣ ಸಂಸ್ಥೆಗಳ ಪ್ರವೇಶ ಅಥವಾ ವಿದ್ಯಾರ್ಥಿವೇತನ ಪಡೆಯುವ ಸಂದರ್ಭಗಳಲ್ಲಿ ಈ ಪುರಸ್ಕಾರವು ಹೆಚ್ಚುವರಿ ಮೌಲ್ಯ ಒದಗಿಸುತ್ತದೆ. ಇದು ಭವಿಷ್ಯ ನಿರ್ಮಾಣದಲ್ಲಿ ದೊಡ್ಡ ಹೆಜ್ಜೆಯಾಗಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಎ.ಇ.ಇ. ಎಸ್.ಜೆ.ಸುಧಾ ಜೈನ್ ರವರು ಉತ್ತಮ ಅಂಕಗಳನ್ನು ಪಡೆದ ದ್ವಿತೀಯ ಪಿಯುಸಿಯ ಸೋನಲ್ ಜೈನ್ ಹಾಗೂ ಸಿಂಚನ ಎಂಬ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಕಾಲೇಜಿಗೆ ಧ್ವನಿವರ್ಧಕ ಉಪಕರಣಗಳನ್ನು ಕೊಡುಗೆಯಾಗಿ ನೀಡಿದರು. ನಂತರ ಉತ್ತಮ ಫಲಿತಾಂಶ ಪಡೆದ ವಿಷಯಗಳ ಉಪನ್ಯಾಸಕರಾದ ಚಿಕ್ಕದೇವೇಗೌಡ ಹಾಗೂ ವೀಣಾರವರನ್ನೂ ಅಭಿನಂದಿಸಲಾಯಿತು.ಎಸ್‌ಎಸ್‌ಡಿಜೆಜೆಪಿ ಸಂಘದ ಕಾರ್ಯದರ್ಶಿ ಪ್ರೊ. ಬಬನ್ ಪಿ. ದತ್ತವಾಡೆ, ಸದಸ್ಯರಾದ ಹೇಮಂತ್ ಜೈನ್ ಹಾಗೂ ಶ್ರೇಯಸ್ ಜೈನ್ ಮಾತನಾಡಿದರು. ನಂತರ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ