ಕನ್ನಡಪ್ರಭ ವಾರ್ತೆ ಮಾಲೂರು
ದಾಖಲೆ ಸಹಿತ ಅರ್ಜಿ ಸಲ್ಲಿಸ
ಇ ಖಾತೆಗೆ ಸಂಬಂದಿಸಿದಂತೆ ಭೂ ಪರಿವರ್ತನೆ ನಿವೇಶನ, ನಗರ ಯೋಜನಾ ಪ್ರಾಧಿಕಾರ ಅನುಮೋದನೆ ಪತ್ರ, ಋಣಬಾರೆ ಪತ್ರ, ಸ್ವತ್ತಿನ ಹಾಗೂ ಮಾಲೀಕರ ಭಾವಚಿತ್ರ, ಸ್ವತ್ತಿನ ಕ್ರಯಪತ್ರ, ಆಧಾರ್ ಕಾರ್ಡ್ ನಕಲು, ೨೦೨೪-೨೫ನೇ ಸಾಲಿನ ವರೆಗೆ ತೆರಿಗೆ ಪಾವತಿ, ಬಿ-ಖಾತೆ ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ನೊಂದಾಯಿತ ಮಾರಾಟ ಪತ್ರ, ದಾನ ಪತ್ರ, ವಿಭಾಗ ಪತ್ರಗಳು, ೧೦.೦೯.೨೦೨೪ರಿಂದ ೨೦೨೪-೨೫ನೇ ಸಾಲಿನ ವರೆಗೆ ಆಸ್ತಿ ತೆರಿಗೆ ಋಣ ಬಾರೆ ದಾಖಲೆಗಳನ್ನು ಅರ್ಜಿ ಸಲ್ಲಿಸುವವರು ನೀಡಬೇಕಾಗಿದೆ ಎಂದರು.ಫಲಾನುಭವಿಗಳು ಅಭಿಯಾನದಡಿ ಅರ್ಜಿ ಸಲ್ಲಿಸಿ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿಕೊಟ್ಟಲ್ಲಿ ಬಿ ಖಾತೆ ಮಾಡಿಕೊಡಲಾಗುವುದು. ಈ ಅವಕಾಶವನ್ನು ಬಳಸಿಕೊಳ್ಳದಿದ್ದಲ್ಲಿ ನಿಮ್ಮ ನಿವೇಶನಕ್ಕೆ ಸಂಬಂಧಿಸಿದಂತೆ ವ್ಯವಹಾರಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.ಪುರಸಭೆಯಿಂದ ಅಗತ್ಯ ಸೌಲಭ್ಯ
ಅನಧಿಕೃತ ಬಡಾವಣೆಗಳಲ್ಲಿ ಬಿ ಖಾತೆ ನೀಡಿದ ಮೇಲೆ ಪುರಸಭೆಯು ನೀರು ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲತ್ತುಗಳನ್ನು ಒದಗಿಸುವ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲವರು ಅನಧಿಕೃತ ಬಡಾವಣೆಗಳನ್ನು ನಿರ್ಮಿಸಿ ಆ ಬಡಾವಣೆಗಳಲ್ಲಿ ಯಾವುದೇ ರೀತಿಯ ಸವಲತ್ತುಗಳನ್ನು ಒದಗಿಸದೆ ನಿವೇಶನಗಳನ್ನು ಮಾರಿಕೊಂಡು ಹೋಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.ಇ, ಬಿ ಖಾತಾ ಆಂದೋಲನವನ್ನು ಸರ್ಕಾರ ಕೈಗೊಂಡಿರುವುದರಿಂದ ನಾಗರಿಕರಿಗೆ ಪ್ರಯೋಜನವಾಗಲಿದೆ. ಪುರಸಭಾ ಸದಸ್ಯರು ಪುರಸಭಾ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.