ಕಾರ್ಯಕರ್ತರು ಬೇರು ಮಟ್ಟದಿಂದ ಪಕ್ಷ ಕಟ್ಟಲಿ: ಮಾಜಿ ಸಚಿವ ಬಿ.ಸಿ. ಪಾಟೀಲ

KannadaprabhaNewsNetwork |  
Published : Jun 18, 2025, 02:17 AM ISTUpdated : Jun 18, 2025, 02:18 AM IST
ಹಿರೇಕೆರೂರು ಬಿಜೆಪಿ ಮಂಡಲದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ ಅವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಶೀಘ್ರ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಜರುಗಲಿವೆ. ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಬೇಕು.

ಹಿರೇಕೆರೂರು: ಪಕ್ಷದ ನೂತನ ಅಧ್ಯಕ್ಷರು ಪಕ್ಷ ಸೂಚಿಸುವ ಎಲ್ಲ ಕೆಲಸಗಳನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಕಾರ್ಯಕರ್ತರಿಗೂ ಮುಂದಿನ ದಿನಗಳಲ್ಲಿ ಅವಕಾಶಗಳು ಸಿಗುತ್ತವೆ. ಎಲ್ಲರೂ ಒಗ್ಗೂಡಿ ಬೇರು ಮಟ್ಟದಿಂದ ಮತ್ತಷ್ಟು ಪಕ್ಷವನ್ನು ಗಟ್ಟಿಗೊಳಿಸಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.ತಾಲೂಕಿನ ಬಾಳಂಬೀಡ ಗ್ರಾಮದ ತಮ್ಮ ನಿವಾಸದಲ್ಲಿ ಸೋಮವಾರ ಹಿರೇಕೆರೂರು ಬಿಜೆಪಿ ಮಂಡಲದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ ಅವರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.ಶೀಘ್ರ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಜರುಗಲಿವೆ. ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಬೇಕು ಎಂದರು.

ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರವನ್ನು ಜನರಿಗೆ ತಿಳಿಸಬೇಕು. ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಹಗರಣಗಳಲ್ಲಿ ಕಾಲ ಕಳೆಯುತ್ತಿದೆ. ಜನರ ಮನಸ್ಸಿನಲ್ಲಿ ಈ ಸರ್ಕಾರ ಯಾವಾಗ ತೊಲುಗುವುದು ಎಂಬ ಭಾವನೆ ಬಂದಿದೆ ಎಂದರು.

ಹಿರೇಕೆರೂರು ಮಂಡಲದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ ಮಾತನಾಡಿ, ಪಕ್ಷವು ಬಹುದೊಡ್ಡ ಜವಾಬ್ದಾರಿ ನೀಡಿದೆ. ಮಾಜಿ ಸಚಿವ ಬಿ.ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಮತ್ತಷ್ಟು ಪಕ್ಷವನ್ನು ಗಟ್ಟಿಗೊಳಿಸುವೆ ಎಂದರು.ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಶಿವಕುಮಾರ್ ತಿಪ್ಪಶೆಟ್ಟಿ, ರಟ್ಟಿಹಳ್ಳಿ ಮಂಡಲದ ಅಧ್ಯಕ್ಷ ದೇವರಾಜ ನಾಗಣ್ಣನವರ್, ಪಕ್ಷದ ಮುಖಂಡರಾದ ಎಸ್‌.ಎಸ್. ಪಾಟೀಲ್, ಪಾಲಾಕ್ಷಗೌಡ ಪಾಟೀಲ, ಡಿ.ಸಿ. ಪಾಟೀಲ್, ಅಶೋಕಗೌಡ ಪಾಟೀಲ, ಆರ್‌.ಎನ್. ಗಂಗೋಳ, ಆನಂದಪ್ಪ ಹಾದಿಮನಿ, ಬಿ.ಎನ್. ಬಣಕಾರ್, ರುದ್ರಗೌಡ ಪಾಟೀಲ್, ಪಪಂ ಸದಸ್ಯರಾದ ರಮೇಶ ತೋರಣಗಟ್ಟಿ, ಗುರುಶಾಂತ್ ಯತ್ತಿನಹಳ್ಳಿ, ಅಲ್ತಾಪ್ ಖಾನ್ ಪಠಾಣ, ಮುಖಂಡರಾದ ಜಗದೀಶ ದೊಡ್ಡಗೌಡ್ರ, ರವಿಶಂಕರ್ ಬಾಳಿಕಾಯಿ, ಗೀತಾ ದಂಡಿಗಿಹಳ್ಳಿ, ರಮೇಶ ಮೇಗಳಮನಿ, ಚನೇಶ ದಿವಿಗಿಹಳ್ಳಿ, ಪುಟ್ಟನಗೌಡ ಪಾಟೀಲ, ಜಿಲಾನಿ ಬಳೆಗಾರ, ಮನೋಹರ್ ವಡ್ಡಿನಕಟ್ಟಿ, ಮಲಿಕ್‌ರೆಹಾನ್, ಲಕ್ಷ್ಮಣ ಪೂಜಾರ್, ನಿಂಗಾಚಾರಿ ಮಾಯಾಚಾರಿ, ಹೊನ್ನಪ್ಪ ಸಾಲಿ, ಲತಾ ಬಣಕಾರ ಇತರರು ಇದ್ದರು.

ನಿರಂತರ ಮಳೆ: ಎಚ್ಚರ ವಹಿಸಲು ಸಲಹೆ

ಹಾವೇರಿ: ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ನದಿ ದಡದಲ್ಲಿರುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಹರಿದು ಪ್ರಾಣಹಾನಿ ಹಾಗೂ ಜಾನುವಾರು ಹಾನಿ ಆಗುವ ಸಂಭವ ಇರುತ್ತದೆ. ಹಾಗಾಗಿ ರೈತರು ಹಾಗೂ ಸಾರ್ವಜನಿಕರು ಜಾಗೃತರಾಗಿರಬೇಕು ಹಾಗೂ ಎಚ್ಚರಿಕೆಯಿಂದ ಕೆಲಸಗಳನ್ನು ಮಾಡಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ್ ಸಲಹೆ ನೀಡಿದ್ದಾರೆ.ನದಿ, ಹಳ್ಳ, ಕೊಳ್ಳಗಳ ಜಮೀನು ಪ್ರದೇಶಗಳಿಗೆ ಪ್ರವಾಹ ಬಂದು ಹಾನಿಯಾಗುವ ಸಂಭವ ಇರುತ್ತದೆ. ಜತೆಗೆ ರಸ್ತೆ, ಹೊಲಗಳಲ್ಲಿ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಪ್ರಸರಣದಿಂದ ಅವಘಡ ಸಂಭವಿಸುವ ಸಾಧ್ಯತೆ ಇರುತ್ತದೆ. ರೈತರು ಹಾಗೂ ಸಾರ್ವಜನಿಕರು ಸದಾ ಜಾಗೃತರಾಗಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ