ಸಮಗಾರ ಹರಳಯ್ಯನ ಆದರ್ಶ ಯುವಪೀಳಿಗೆ ಪಾಲಿಸಲಿ: ಜಗದೀಶ ಬೆಟಗೇರಿ

KannadaprabhaNewsNetwork |  
Published : May 07, 2025, 12:50 AM IST
2ಎಚ್‌ವಿಆರ್‌4 | Kannada Prabha

ಸಾರಾಂಶ

ಕಲ್ಯಾಣ ಕ್ರಾಂತಿ ನಡೆಯಲು ಪ್ರಮುಖ ಕಾರಣಕರ್ತರು ಸಮಗಾರ ಹರಳಯ್ಯನವರು. ಸಮಕಾಲಿನ ಶರಣರಲ್ಲಿ ಗುರುತಿಸಿಕೊಂಡ ಹರಳಯ್ಯನವರ ಆದರ್ಶ ಭಕ್ತಿ ಯುವಪೀಳಿಗೆಯಲ್ಲಿ ಮೂಡಿಸಬೇಕು.

ಹಾವೇರಿ: ೧೨ನೇ ಶತಮಾನದಲ್ಲಿ ಬಸವಣ್ಣನವರು ಸಮಗಾರ ಹರಳಯ್ಯನ ಮಗ ಶೀಲವಂತ ಹಾಗೂ ಬ್ರಾಹ್ಮಣ ಮಧುವರಸನ ಮಗಳು ಲಾವಣ್ಯವತಿಯ ವಿವಾಹವನ್ನು ತಾವೇ ಮುಂದು ನಿಂತು ನೆರವೇರಿಸಿದರು. ಇದನ್ನು ಸಹಿಸದ ಸಂಪ್ರದಾಯವಾದಿಗಳು ಶರಣರ ಮೇಲೆ ದೌರ್ಜನ್ಯ ನಡೆಸಿದರು. ಆಗ ನಡೆದುದೆ ಕಲ್ಯಾಣ ಕ್ರಾಂತಿ ಎಂದು ಸಮಗಾರ ಹರಳಯ್ಯ(ಚಮ್ಮಾರ) ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಗದೀಶ ಬೆಟಗೇರಿ ತಿಳಿಸಿದರು.

ಇಲ್ಲಿನ ಬೆಟಗೇರಿ ಬಿಲ್ಡಿಂಗ್‌ನಲ್ಲಿ ಸಮಗಾರ ಹರಳಯ್ಯ(ಚಮ್ಮಾರ) ಸಂಘದ ರಾಜ್ಯ ಹಾಗೂ ಜಿಲ್ಲಾ- ತಾಲೂಕು ಘಟಕಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲ್ಯಾಣ ಕ್ರಾಂತಿ ನಡೆಯಲು ಪ್ರಮುಖ ಕಾರಣಕರ್ತರು ಸಮಗಾರ ಹರಳಯ್ಯನವರು. ಸಮಕಾಲಿನ ಶರಣರಲ್ಲಿ ಗುರುತಿಸಿಕೊಂಡ ಹರಳಯ್ಯನವರ ಆದರ್ಶ ಭಕ್ತಿ ಯುವಪೀಳಿಗೆಯಲ್ಲಿ ಮೂಡಿಸಬೇಕು ಎಂದರು.

ಪತ್ರಕರ್ತ ಮಾಲತೇಶ ಅಂಗೂರ ಮಾತನಾಡಿ, ಜಾತಿ ಕಂದಕಗಳನ್ನು ದೂರ ಮಾಡುವ ಮೂಲಕ ಬಸವಣ್ಣವರ ಕ್ರಾಂತಿಯಿಂದ ಸಣ್ಣ ಸಮಾಜಗಳು ಸಮಾನತೆ ನಿಟ್ಟಿನಲ್ಲಿ ಬದುಕುವಂತಾಗಿದೆ. ಅಂದು ಬಸವಣ್ಣನವರು ಆರಂಭಿಸಿದ ಸಮ ಸಮಾಜ ನಿರ್ಮಾಣದ ಚಳವಳಿ ಬಹ ದೊಡ್ಡ ಆಂದೋಲನವನ್ನೇ ಹುಟ್ಟುಹಾಕಿತು ಎಂದರು.

ಮಾದೇವಪ್ಪ ವಾಳದ, ಉತ್ತಪ್ಪ ತೇರದಾಳ ಮಾತನಾಡಿದರು. ಶ್ರೀದೇವಿ ತೇರದಾಳ್ ಅವರನ್ನು ಸನ್ಮಾನಿಸಲಾಯಿತು. ಧರ್ಮರಾಜ್ ದೊಡ್ಡಮನಿ ಸ್ವಾಗತಿಸಿದರು. ಪೃಥ್ವಿರಾಜ್ ಬೆಟಗೇರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲಲಿತಮ್ಮ ಹಂಜಗಿ, ಬಸವರಾಜ ಸಾತಪತಿ, ರೂಪೇಶ್ ಬಳ್ಳಾರಿ, ಪರಶುರಾಮ್ ಬಾತಗಾವಿ, ಮಂಜುನಾಥ ರಾಯಭಾಗ, ಸುನಿಲ್ ಬೆಟಗೇರಿ, ದೇವೇಂದ್ರಪ್ಪ ಅರಕೇರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಭೂಮಿಕಾ, ಸಂಜನಾ ಬೆಟಿಗೇರಿ ಪ್ರಾರ್ಥಿಸಿದರು.ಕಾರ್ಮಿಕರನ್ನು ಗೌರವದಿಂದ ಕಾಣಬೇಕು

ಹಾವೇರಿ: ಕಾರ್ಮಿಕರನ್ನು ಗೌರವದಿಂದ ಕಾಣಬೇಕು ಹಾಗೂ ಕಾರ್ಮಿಕರ ಹಕ್ಕುಗಳು ಅವರಿಗೆ ಸಿಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್. ಮುತಾಲಿಕದೇಸಾಯಿ ತಿಳಿಸಿದರು.

ಶಿಗ್ಗಾಂವಿಯ ಎಚ್ಎಸ್ಎಸ್ ಟೆಕ್ಸ್‌ಟೈಲ್‌ನಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಜರುಗಿದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಎಲ್ಲೆಡೆ ಆಚರಿಸುವ ಮೂಲಕ ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ ಎಂದರು.ಜಿಲ್ಲಾ ಕಾರ್ಮಿಕ ಅಧಿಕಾರಿ ತರನ್ನುಮ ಬೆಂಗಾಲಿ ಅಧ್ಯಕ್ಷತೆ ವಹಿಸಿದ್ದರು. ದಿವಾಣಿ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಶಿಗ್ಗಾಂವಿ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಅಶ್ವಿನಿ ಚಂದ್ರಕಾಂತ, ತಹಸೀಲ್ದಾರ್ ರವಿಕುಮಾರ ಕೊರವರ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ, ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ, ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ. ಲಕ್ಕಣ್ಣನವರ, ಕಾರ್ಯದರ್ಶಿ ವಿವೇಕ ರಾಮಗೇರಿ, ಎಚ್ಎಸ್ಎಸ್ ಟೆಕ್ಸ್‌ಟೈಲ್ ಸೀನಿಯರ್ ಜನರಲ್ ಮ್ಯಾನೇಜರ್ ಮಾಯವನ ವೆಂಕಟಾಚಲ ಭಾಗವಹಿಸಿದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ