ನೀರು ಬಿಡ್ಬೇಕೋ, ಬೇಡ್ವೋ ದೃಢವಾಗಿ ನಿರ್ಧರಿಸಲಿ

KannadaprabhaNewsNetwork |  
Published : Aug 26, 2026, 01:30 AM IST
25ಕೆಡಿವಿಜಿ10-ದಾವಣಗೆರೆ ಬಿಜೆಪಿ ಹಿರಿಯ ಮುಖಂಡ ಲೋಕಿಕೆರೆ ನಾಗರಾಜ. | Kannada Prabha

ಸಾರಾಂಶ

Let them decide firmly whether to leave the water or not.

-ಜಿಲ್ಲಾ ಮಂತ್ರಿಗಳ ನಿರ್ಧಾರಕ್ಕೆ ಸಮ್ಮತಿ: ಬಿಜೆಪಿಯ ಲೋಕಿಕೆರೆ ನಾಗರಾಜ ಹೇಳಿಕೆ

----

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂನಿಂತ ನಾಲೆಗೆ ನೀರು ಹರಿಸುವ ವಿಚಾರದಲ್ಲಿ ಪಲಾಯನವಾದ ಮಾಡದೇ, ಜಿಲ್ಲಾ ಮಂತ್ರಿಗಳು ದೃಢ ನಿರ್ಧಾರ ಕೈಗೊಳ್ಳಲಿ ಎಂದು ಬಿಜೆಪಿ ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಡ್ಯಾಂನಿಂದ ನೀರು ಹರಿಸುವ ವಿಚಾರದಲ್ಲಿ ಎರಡೂ ಕಡೆಯ ರೈತರು ಒಂದು ನಿರ್ಧಾರಕ್ಕೆ ಬರಲೆಂದು ಜಿಲ್ಲಾ ಸಚಿವರು ಹೇಳಿದ ಅವರು, ರೈತರ ತಲೆಯ ಮೇಲೆ ಅದನ್ನು ಹಾಕುವ, ಪಲಾಯನ ಮಾಡುವ ಕೆಲಸ ಮಾಡಬಾರದು ಎಂದರು.

ಬೇಸಿಗೆಯಲ್ಲಿ ಸತತ 120 ದಿನ ನೀರು ಕೊಟ್ಟೇ ಕೊಡಿಸುತ್ತೇನೆ. ಆಕಸ್ಮಾತ್ ನೀರು ಕೊಡಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ದೃಢ ನಿರ್ಧಾರವನ್ನು ಸಚಿವರು ಕೈಗೊಳ್ಳಲಿ. ಭದ್ರಾ ಡ್ಯಾಂನಿಂದ ನಾಲೆಗೆ ನೀರು ಹರಿಸಬೇಕೋ ಅಥವಾ ಬೇಡವೋ ಎಂಬ ವಿಚಾರದಲ್ಲಿ ಮೊದಲು ಸಚಿವರು ದೃಢ ನಿರ್ಧಾರವನ್ನಾದರೂ ಕೈಗೊಳ್ಳಲಿ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಐಸಿಸಿ ಸಭೆ ನಡೆದೇ 10 ದಿನಗಳಾದವು. ಈಗ ಮತ್ತೆ ಸಭೆ ಮಾಡುತ್ತೇವೆಂದು ಸಚಿವರು ಹೇಳಿಕೆ ನೀಡುತ್ತಿದ್ದಾರೆ.

ಭದ್ರಾ ಡ್ಯಾಂನಿಂದ ಚಿತ್ರದುರ್ಗ ಇತರೆ ಜಿಲ್ಲೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಕೊಂಡ್ಯೊಯುತ್ತಾರೆಂಬ ಭಯ ಸಹಜವಾಗಿಯೇ ರೈತರಲ್ಲಿದೆ.

ಜಿಲ್ಲೆಯ ಅಚ್ಚುಕಟ್ಟು ರೈತರ ಪರ ನಿಲ್ಲುತ್ತೇನೆ, ಮಳೆಗಾಲದ ಬೆಳೆಗೆ ನೀರು ಕೊಡಿಸುತ್ತೇನೆ ಅಥವಾ ಬೇಸಿಗೆ ಬೆಳೆಗೆ 120 ದಿನ ಸತತ ನಾಲೆಗೆ ನೀರು ಕೊಡಿಸುತ್ತೇನೆ ಎಂದಾಗಲೀ ಸಚಿವರು ದೃಢವಾಗಿ ಹೇಳಲಿ ಎಂದು ತಿಳಿಸಿದರು.

ಭದ್ರಾ ನೀರಿನ ವಿಚಾರವಾಗಿ ಜಿಲ್ಲಾ ಸಚಿವರು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಸಮ್ಮತಿ ಇದೆ. ಆದರೆ, ನೀರು ಹರಿಸಬೇಕೋ ಅಥವಾ ಬೇಡವೋ ಎಂಬ ವಿಚಾರವನ್ನು ರೈತರ ಮೇಲೆ ಹಾಕಿ, ಪಲಾಯನ ಮಾಡುವುದು ಬೇಡ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಿಮಗಿಂತಲೂ ಸ್ಟ್ರಾಂಗಾ? ನಮ್ಮ ಜಿಲ್ಲೆಯ ರೈತರಿಗೆ ಅನುಕೂಲ ವಾಗುವ ವಿಚಾರದಲ್ಲಿ ಜಿಲ್ಲಾ ಸಚಿವರು ಕೆಲಸ ಮಾಡಲಿ ಎಂದು ಲೋಕಿಕೆರೆ ನಾಗರಾಜ ಸಲಹೆ ನೀಡಿದರು.

ಫೋಟೊ

25ಕೆಡಿವಿಜಿ10

ದಾವಣಗೆರೆ ಬಿಜೆಪಿ ಹಿರಿಯ ಮುಖಂಡ ಲೋಕಿಕೆರೆ ನಾಗರಾಜ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷ ಸಂಘಟನೆಗೆ ಭಾರತ್ ಜೋಡೋ ಸಂಘ ಸಹಕಾರಿ: ಪಿ.ರವಿಕುಮಾರ್
ಬೆಂಗಳೂರು ಜಲ ಮಂಡಳಿ ಅಧಿಕಾರಿಗಳ ಕಳ್ಳಾಟ...!