ಕೃಷಿ ನಿರ್ವಹಣೆಗೆ ಹಸಿರು ಕ್ರಾಂತಿಯಾಗಲಿ

KannadaprabhaNewsNetwork |  
Published : Nov 11, 2024, 11:54 PM IST
ರೈತರೇ ಆಹಾರ ಬದ್ದತೆಯ ಜೊತೆಗೆ ಪೌಷ್ಟಿಕತೆ ಭದ್ರತೆಗೆ ಹೆಚ್ಚು ಗಮನಹರಿಸಿ : ಡಾ. ಕೇಶವಯ್ಯ | Kannada Prabha

ಸಾರಾಂಶ

ರಾಜ್ಯದ ಕೃಷಿ ಪ್ರದೇಶವು ಮರುಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಈ ನಿಟ್ಟಿನಲ್ಲಿ ಖುಷ್ಕಿ ಬೇಸಾಯದ ನಿರ್ವಹಣೆ ಕುರಿತಂತೆ ಎರಡನೇ ಹಸಿರು ಕ್ರಾಂತಿಯಾಗಬೇಕಿದೆ ಎಂದು ಸಹ ಸಂಶೋಧನಾ ನಿರ್ದೇಶಕ ಡಾ. ಕೇಶವಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ರಾಜ್ಯದ ಕೃಷಿ ಪ್ರದೇಶವು ಮರುಭೂಮಿಯಾಗಿ ಪರಿವರ್ತನೆಯಾಗುತ್ತಿದೆ. ಈ ನಿಟ್ಟಿನಲ್ಲಿ ಖುಷ್ಕಿ ಬೇಸಾಯದ ನಿರ್ವಹಣೆ ಕುರಿತಂತೆ ಎರಡನೇ ಹಸಿರು ಕ್ರಾಂತಿಯಾಗಬೇಕಿದೆ ಎಂದು ಸಹ ಸಂಶೋಧನಾ ನಿರ್ದೇಶಕ ಡಾ. ಕೇಶವಯ್ಯ ಹೇಳಿದರು.

ಕುಣಿಗಲ್‌ನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಕ್ಷೇತ್ರೋತ್ಸವ, ದಶಮಾನೊತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಆಹಾರ ಬದ್ಧತೆಯ ಜೊತೆಗೆ ಪೌಷ್ಟಿಕತೆ ಭದ್ರತೆಯ ಕಡೆ ಹೆಚ್ಚು ಗಮನ ನೀಡಬೇಕೆಂದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ರಮೇಶ್ ಮಾತನಾಡಿ, ಪ್ರಸ್ತುತ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ರೈತರ ಅಭಿವೃದ್ಧಿಗಾಗಿ ಚಾಲ್ತಿಯಲ್ಲಿರುವ ಯೋಜನೆಗಳ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ನ್ಯಾನೊ ಗೊಬ್ಬರ ಬಳಕೆಯ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುತ್ತಿದ್ದು, ಹಸಿರು ಗೊಬ್ಬರ ಬಳಕೆಯ ಪ್ರೋತ್ಸಾಹಕ್ಕಾಗಿ ಶೇ.70ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದರು. ಮಂಡ್ಯದ ವಲಯ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ಪಿ ಮಹದೇವು ಮಾತನಾಡಿ, ನೀರಿನ ಸಂರಕ್ಷಣೆ, ಮಣ್ಣಿನ ಪೋಶಕಾಂಶಗಳ ನಿರ್ವಹಣೆ, ಸಮಗ್ರ ಕೃಷಿ ಪದ್ದತಿಯನ್ನು ಅಳಡಿಸಿಕೊಳ್ಳುವುದರಿಂದ ಕೃಷಿಯಲ್ಲಿ ಲಾಭದಾಯಕತೆಯನ್ನು ಕಾಣುವ ಬಗ್ಗೆ ಹಾಗೂ ವಿವಿದ ಮೇವಿನ ಬೆಳೆಗಳ ಉತ್ಪಾಧನಾ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಿದರು. ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ವಿ. ಗೋವಿಂದೇಗೌಡ ಮಾತನಾಡಿ, ರೈತ ಸ್ನೇಹಿ ಹಾಗೂ ರೈತರ ಸಮಸ್ಯೆಗೆ ಅನುಗುಣವಾಗಿ ವಿಶ್ವವಿದ್ಯಾನಿಲಯದ ಸಂಬಂದಪಟ್ಟ ಸಂಶೋಧನಾ ಕೇಂದ್ರಗಳು ನೂತನ ಸುದಾರಿತ ತಳಿಗಳು, ಬೆಳೆ ಪದ್ದತಿಗಳ ಕುರಿತು ಪ್ರಾಯೋಗಗಳನ್ನು ನಡೆಸಿ ಕ್ಷೇತ್ರೋತ್ಸವ ಆಯೋಜಿಸಲಾಗಿದೆ. ಈ ಕ್ಷೇತ್ರೋತ್ಸವದಲ್ಲಿ ಪ್ರದರ್ಶಿಸುತ್ತಿರುವ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳಬೇಕು. ರೈತರು ಜಮೀನಿನಲ್ಲಿ ಒಂದು ಬೆಳೆಗೆ ಸೀಮಿತರಾಗದೆ ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಬಂದಂತಹ ಉತ್ಪಾನೆಗೆ ಮೌಲ್ಯವರ್ಧನೆ ಮಾಡಿ ರೈತ ಗುಂಪುಗಳ ಮೂಲಕ ಮಾರಾಟ ಮಾಡಿ ಉಧ್ಯಮಿಗಳಾಗಬೇಕೆಂದರು. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನವೆಂಬರ್ ೧೪ ರಿಂದ ೧೭ ರವರೆಗೆ ನಡೆಯುವ ಕೃಷಿ ಮೇಳದಲ್ಲಿ ಹೆಚ್ಚಿನ ರೈತರು ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳಲು ಕರೆ ನೀಡಿದರು. ಬೇಸಾಯ ತಜ್ಞ ಡಾ. ದಿನೇಶ್, ಕುಣಿಗಲ್‌ನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಸಂತೋಷ್ ಶೇಠ್, ವಿಜ್ಞಾನಿ ಡಾ. ಲೋಗಾನಂದನ್, ಕ್ಷೇತ್ರ ಅಧೀಕ್ಷಕರಾದ ಡಾ. ಕೆ.ಆರ್. ಶ್ರೀನಿವಾಸ್, ಸಿಮಿಟ್ ಸಂಸ್ಥೆಯ ವಿಜ್ಞಾನಿ ಡಾ. ಟಿ. ಸತೀಸ್, ಸಹಾಯಕ ಕೃಷಿ ನಿರ್ದೇಶಕ ರಂಗನಾಥ್, ಪಶು ಸಂಗೋಪನೆ ಪಾಲಿಟೆಕ್ನಿಕ್‌ನ ಪ್ರಾಂಶುಪಾಲೆ ಡಾ. ಸುಮ, ಗೃಹ ವಿಜ್ಞಾನಿ ಡಾ. ಸಿಂಧು, ಡಾ. ಸಿದ್ದಗಂಗಯ್ಯ, ಡಾ.ಸೋಮಶೇಖರಪ್ಪ ಮತ್ತಿತರರಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ