ಕಾರಟಗಿ ಪುರಸಭೆ ಉಪಚುನಾವಣೆ: ಮೂವರಿಂದ ನಾಮಪತ್ರ

KannadaprabhaNewsNetwork |  
Published : Nov 11, 2024, 11:54 PM IST
ಫೋಟೋ 11ಕೆಆರಟಿ 1 ಕಾರಟಗಿಯಲ್ಲಿ ಚುನಾವಣಾಧಿಕಾರಿ ಮಲ್ಲಿಕಾರ್ಜನ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದರು.  | Kannada Prabha

ಸಾರಾಂಶ

ಇಲ್ಲಿನ ಪುರಸಭೆಯ 21ನೇ ವಾರ್ಡ್‌ಗೆ ಉಪ ಚುನಾವಣೆಯಲ್ಲಿ ಆಯ್ಕೆ ಬಯಸಿ ಮೂವರು ನಾಮಪತ್ರ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರಟಗಿ

ಇಲ್ಲಿನ ಪುರಸಭೆಯ 21ನೇ ವಾರ್ಡ್‌ಗೆ ಉಪ ಚುನಾವಣೆಯಲ್ಲಿ ಆಯ್ಕೆ ಬಯಸಿ ಮೂವರು ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣಾಧಿಕಾರಿ ಮಲ್ಲಿಕಾರ್ಜುನ ಅವರಿಗೆ ಮೂವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು.ಪುರಸಭೆಯ 21ನೇ ವಾರ್ಡ್ ಸದಸ್ಯ ರಾಮಣ್ಣ ಭಜೇಂತ್ರಿ ನಿಧನದ ಹಿನ್ನೆಲೆ ಸದಸ್ಯ ಸ್ಥಾನ ತೆರವಾಗಿತ್ತು. ಉಪ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಸೂಚನೆ ಹೊರಡಿಸಿದ್ದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ ಯಲ್ಲಪ್ಪ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಬ್ಬರದ ರೋಡ್ ಶೋ ನಡೆಸುವ ಮೂಲಕ ಬಲ ಪ್ರದರ್ಶನ ಮಾಡಿದರು.

ಬಳಿಕ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ಯಲ್ಲಪ್ಪ, ಕಾಂಗ್ರೆಸ್‌ನಿಂದ ಸುರೇಶ್ ಮತ್ತು ಪಕ್ಷೇತರರಾಗಿ ಗಾಳೆಮ್ಮ ರಾಮಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಸಹ ಚುನಾವಣಾಧಿಕಾರಿಯಾಗಿ ಬಸವರಾಜ ರ್‍ಯಾವಳದ ಕಾರ್ಯನಿರ್ವಹಿಸಿದರು. ಚುನಾವಣೆಗೆ ಸಂಬಂಧಿಸಿದಂತೆ ಮಂಗಳವಾರ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ನ. 14ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ. ನ. 23ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ.ಮರು ಮತದಾನ ಅವಶ್ಯವಿದ್ದರೆ, ನ. 25ರಂದು ಸಹ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿರುವುದರಿಂದ 21ನೇ ವಾರ್ಡ್‌ನಲ್ಲಿ ಫಲಿತಾಂಶ ಪ್ರಕಟವಾಗುವ ದಿನದವರೆಗೂ ನೀತಿ ಸಂಹಿತೆ ಜಾರಿಯಲ್ಲಿದೆ. ನ. 26ರಂದು ತಾಲೂಕು ಕೇಂದ್ರದಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಕೇವಲ ಒಂದೇ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟದೆ.

ಅದರೆ,, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಶತಾಯ-ಗತಾಯ ಗೆಲುವು ದಾಖಲಿಸಲು ಉಭಯ ಪಕ್ಷಗಳು ತೆರೆ ಮರೆಯಲ್ಲಿ ಶ್ರಮಿಸುತ್ತಿವೆ. ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಬ್ಬ ಅಭ್ಯರ್ಥಿ ಕಣದಲ್ಲಿದ್ದು, ನ. 14ರ ಬಳಿಕ ಅಂತಿಮವಾಗಿ ಯಾರು ಚುನಾವಣಾ ಕಣದಲ್ಲಿ ಉಳಿಯಲಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿಲ್ಲಿಯಲ್ಲಿ ಡಿಕೆಶಿ ರಾಜ್ಯ ನೀರಾವರಿ ಸಭೆ
ಗ್ಯಾಸ್ ಇಲ್ಲದೇ ಬೆಳಗಾವಿಯ 60 + ಕೈಗಾರಿಕೆ ಬಂದ್‌ ಹಂತಕ್ಕೆ