ಚಿತ್ರದುರ್ಗ: ಸುಳ್ಳು, ಭ್ರಷ್ಟಾಚಾರ, ಮೋಸ ಕಾಂಗ್ರೆಸ್ ಪಕ್ಷದ ಮನೆ ದೇವರೆಂದು ವಿಧಾನ ಪರಿಷತ್ತಿನ ಪ್ರತಿ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಹಗರಣ ದಿನಕ್ಕೊಂದು ಬಯಲಾಗುತ್ತಿವೆ.
ಸಿದ್ದರಾಮಯ್ಯ ಇರೋವರೆಗೆ ಮುಸ್ಲೀಮರು ನಂತರ ಬೊಂಬೆ ಎಂಬ ಮಾಜಿ ಸಚಿವ ಇಕ್ಪಾಲ್ ಅನ್ಸಾರಿ ಹೇಳಿಕೆಗೆ ಪ್ರತಿಕ್ರಿಯಿಸಿದ ನಾರಾಯಣಸ್ವಾಮಿ, ಅನ್ಸಾರಿ ಹೇಳಿಕೆಯೇ ಸಿದ್ದರಾಮಯ್ಯ ಏನು ಎಂಬುದ ತಿಳಿಸುತ್ತದೆ. ಈ ಬಗ್ಗೆ ನಾವೇನೂ ಹೇಳಲ್ಲ ರಾಜ್ಯದ ಜನರೇ ತೀರ್ಮಾನಿಸಲಿದ್ದಾರೆ. ಸಚಿವ ಜಮೀರ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಆದೇಶ ಸರಿಯಿದೆ ನ್ಯಾಯಾಂಗದ ಆದೇಶ ಬೀದೀಲಿ ಪ್ರಶ್ನಿಸೋದು ಸರಿಯಲ್ಲವೆಂದು ಪ್ರಶ್ನೆಯೊಂದಕ್ಕೆ ನಾರಾಯಣಸ್ವಾಮಿ ಉತ್ತರಿಸಿದರು.
------