ಪ್ರತಿಯೊಬ್ಬರಲ್ಲೂ ಸಮಷ್ಠಿ ಪ್ರಜ್ಞೆ ಇರಲಿ

KannadaprabhaNewsNetwork |  
Published : Apr 12, 2026, 03:00 AM IST
ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾದಕರಿಂದ ಆಶೀರ್ವಚನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ತ್ಯಜಿಸಿ, ಸುಖ-ಶಾಂತಿ ಮತ್ತು ನೆಮ್ಮದಿಯುಕ್ತ ಬದುಕಬೇಕು. ನಮ್ಮಲ್ಲಿ ಸಮಷ್ಠಿ ಪ್ರಜ್ಞೆ ಇರಬೇಕು. ನಾವು ಸತ್ಪಾತ್ರ ಮತ್ತು ಸತ್ಕಾರಕ್ಕಾಗಿ ದೇಣಿಗೆ ಅಥವಾ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ತ್ಯಜಿಸಿ, ಸುಖ-ಶಾಂತಿ ಮತ್ತು ನೆಮ್ಮದಿಯುಕ್ತ ಬದುಕಬೇಕು. ನಮ್ಮಲ್ಲಿ ಸಮಷ್ಠಿ ಪ್ರಜ್ಞೆ ಇರಬೇಕು. ನಾವು ಸತ್ಪಾತ್ರ ಮತ್ತು ಸತ್ಕಾರಕ್ಕಾಗಿ ದೇಣಿಗೆ ಅಥವಾ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಅಭಿಪ್ರಾಯಪಟ್ಟರು.

ನಗರದ ಅಥಣಿ ರಸ್ತೆಯಲ್ಲಿರುವ ಸಿದ್ಧಾರ್ಥ ನಗರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೇವರು ನಮಗೆ ನೀಡುವ ಆದಾಯದಲ್ಲಿ ತನು-ಮನ-ಧನದಿಂದ ಧರ್ಮಕ್ಕಾಗಿ ಮೀಸಲಾಗಿಡಬೇಕು. ಮೇಲು-ಕೀಳುಗಳೆಂಬ ಅನಿಷ್ಠವನ್ನು ಹೋಗಲಾಡಿಸಿ, ಎಲ್ಲರೂ ಒಂದೇ ಮತ್ತು ವಸುದೈವ ಕುಟುಂಬಕಂ ಎನ್ನುವ ಸಹಿಂಷ್ಣುತೆಯ ಗುಣವನ್ನು ಬೆಳೆಸಿಕೊಂಡು ರಾಷ್ಟ್ರವು ಸರ್ವ ಜನಾಂಗದ ಶಾಂತಿಯ ತೋಟವಾಗುವಂತೆ ಬದುಕಬೇಕು. ಸತ್ಯದ ಅರಿವಿನೊಂದಿಗೆ ಬದುಕು ಸಾಗಿಸುವ ಮನಸ್ಸು ನಮ್ಮದಾಗಬೇಕು. ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ತ್ಯಜಿಸಬೇಕು. ಜೀವನದಲ್ಲಿ ಪ್ರೀತಿ, ಶಾಂತಿ, ನೆಮ್ಮದಿ, ಸಮಾನತೆ, ಸಾಮರಸ್ಯತೆ, ಸಂಸ್ಕೃತಿ- ಸಂಸ್ಕಾರ, ಸದ್ಗುಣಗಳು ಒಡಮೂಡಬೇಕು. ಧಾರ್ಮಿಕ ಮತ್ತು ಅಧ್ಯಾತ್ಮಿಕತೆಯ ಕಾರ್ಯದಲ್ಲಿ ತೊಡಗಬೇಕು ಎಂದರು.

ಶಿವನಗೌಡ ಪಾಟೀಲ, ಡಾ.ಬಿ.ಎಸ್.ಪಾಟೀಲ, ಎಂ.ಎಸ್.ಖೊದ್ನಾಪೂರ, ಗುರುಬಸಯ್ಯ ಹಿರೇಮಠ, ಭರಮಣ್ಣ ಕಡಕೋಳ, ಸಾಬು ಅಗ್ರಾಣಿ, ಸುನೀಲ ಪತ್ತೇಪೂರ, ಅಲ್ಲಮಪ್ರಭು ಶಿರಹಟ್ಟಿ, ರಾಜಶೇಖರ ಉಮರಾಣಿ, ಸುರೇಶ ಹಲಕುಡೆ, ಶೋಭಾ ಚವ್ಹಾಣ, ನವರಸಪುರ ವಿವಿಧ ಬಡಾವಣೆಗಳ ನೂರಾರು ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಭಾಗವಹಿಸಿದರು.

----------11bij03: ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾದಕರಿಂದ ಆಶೀರ್ವಚನನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ತ್ಯಜಿಸಿ, ಸುಖ-ಶಾಂತಿ ಮತ್ತು ನೆಮ್ಮದಿಯುಕ್ತ ಬದುಕಬೇಕು. ನಮ್ಮಲ್ಲಿ ಸಮಷ್ಠಿ ಪ್ರಜ್ಞೆ ಇರಬೇಕು. ನಾವು ಸತ್ಪಾತ್ರ ಮತ್ತು ಸತ್ಕಾರಕ್ಕಾಗಿ ದೇಣಿಗೆ ಅಥವಾ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಅಭಿಪ್ರಾಯಪಟ್ಟರು.

ನಗರದ ಅಥಣಿ ರಸ್ತೆಯಲ್ಲಿರುವ ಸಿದ್ಧಾರ್ಥ ನಗರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೇವರು ನಮಗೆ ನೀಡುವ ಆದಾಯದಲ್ಲಿ ತನು-ಮನ-ಧನದಿಂದ ಧರ್ಮಕ್ಕಾಗಿ ಮೀಸಲಾಗಿಡಬೇಕು. ಮೇಲು-ಕೀಳುಗಳೆಂಬ ಅನಿಷ್ಠವನ್ನು ಹೋಗಲಾಡಿಸಿ, ಎಲ್ಲರೂ ಒಂದೇ ಮತ್ತು ವಸುದೈವ ಕುಟುಂಬಕಂ ಎನ್ನುವ ಸಹಿಂಷ್ಣುತೆಯ ಗುಣವನ್ನು ಬೆಳೆಸಿಕೊಂಡು ರಾಷ್ಟ್ರವು ಸರ್ವ ಜನಾಂಗದ ಶಾಂತಿಯ ತೋಟವಾಗುವಂತೆ ಬದುಕಬೇಕು. ಸತ್ಯದ ಅರಿವಿನೊಂದಿಗೆ ಬದುಕು ಸಾಗಿಸುವ ಮನಸ್ಸು ನಮ್ಮದಾಗಬೇಕು. ನಮ್ಮಲ್ಲಿರುವ ಕಾಮ, ಕ್ರೋಧ, ಮದ, ಮೋಹ, ಲೋಭ ಮತ್ತು ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ತ್ಯಜಿಸಬೇಕು. ಜೀವನದಲ್ಲಿ ಪ್ರೀತಿ, ಶಾಂತಿ, ನೆಮ್ಮದಿ, ಸಮಾನತೆ, ಸಾಮರಸ್ಯತೆ, ಸಂಸ್ಕೃತಿ- ಸಂಸ್ಕಾರ, ಸದ್ಗುಣಗಳು ಒಡಮೂಡಬೇಕು. ಧಾರ್ಮಿಕ ಮತ್ತು ಅಧ್ಯಾತ್ಮಿಕತೆಯ ಕಾರ್ಯದಲ್ಲಿ ತೊಡಗಬೇಕು ಎಂದರು.

ಶಿವನಗೌಡ ಪಾಟೀಲ, ಡಾ.ಬಿ.ಎಸ್.ಪಾಟೀಲ, ಎಂ.ಎಸ್.ಖೊದ್ನಾಪೂರ, ಗುರುಬಸಯ್ಯ ಹಿರೇಮಠ, ಭರಮಣ್ಣ ಕಡಕೋಳ, ಸಾಬು ಅಗ್ರಾಣಿ, ಸುನೀಲ ಪತ್ತೇಪೂರ, ಅಲ್ಲಮಪ್ರಭು ಶಿರಹಟ್ಟಿ, ರಾಜಶೇಖರ ಉಮರಾಣಿ, ಸುರೇಶ ಹಲಕುಡೆ, ಶೋಭಾ ಚವ್ಹಾಣ, ನವರಸಪುರ ವಿವಿಧ ಬಡಾವಣೆಗಳ ನೂರಾರು ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಭಾಗವಹಿಸಿದರು.

----------11bij03: ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾದಕರಿಂದ ಆಶೀರ್ವಚನ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಲೆಗಳ ಮಾನ್ಯತೆ ಮತ್ತೊಮ್ಮೆ ಪರಿಶೀಲಿಸಿ: ಸಂಸದ ರಮೇಶ ಜಿಗಜಿಣಗಿ
2028ಕ್ಕೆ ಮನೆ ಮಗನಂತ ಶಾಸಕನ ಅಗತ್ಯವಿದೆ