ಹೆಣ್ಣುಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟುವ ಕೆಲಸವಾಗಲಿ

KannadaprabhaNewsNetwork |  
Published : Oct 16, 2026, 01:45 AM IST
ಶ್ರವಣಬೆಳಗೊಳ ಸಮೀಪದ ಶ್ರೀ ಧವಲತೀಥಂನಲ್ಲಿರುವ ಗೊಮ್ಮಟೇಶ್ವರ ವಿದ್ಯಾಪೀಠದ ಕಾಳಾಲದೇವಿ ಕನ್ಯಾಶ್ರಮದ ನೂತನ ಕಟ್ಟಡದ ಭೂಮಿಪೂಜೆ ಹಾಗೂ ಶಿಲಾನ್ಯಾಸ ಬುಧವಾರ ನೆರವೇರಿತು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಅನಿತಾ ಡಿ. ಸುರೇಂದ್ರ ಕುಮಾರ್, ಎಂ.ಎ.ಗೋಪಾಲಸ್ವಾಮಿ, ಎಚ್.ಪಿ.ಅಶೋಕ್ ಕುಮಾರ್ ಇದ್ದರು. | Kannada Prabha

ಸಾರಾಂಶ

ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನವಿದೆ. ಭೂಮಾತೆ, ಭಾರತಾಂಬೆ, ಕನ್ನಡಾಂಬೆ ಎಂದು ಗೌರವಿಸುವ ನಾವು, ನದಿಗಳು, ಪ್ರಕೃತಿ ಹಾಗೂ ವೃಕ್ಷಗಳನ್ನೂ ಮಾತೃಸ್ವರೂಪದಲ್ಲಿ ಕಾಣುತ್ತೇವೆ. ಲಕ್ಷ್ಮೀಯನ್ನು ಸಂಪತ್ತಿನ ಅಧಿದೇವತೆ, ಸರಸ್ವತಿಯನ್ನು ಜ್ಞಾನದ ಅಧಿದೇವತೆ ಎಂದು ಆರಾಧಿಸುವ ಸಂಸ್ಕೃತಿ ನಮ್ಮದು. ಆದರೂ ಹೆಣ್ಣುಮಕ್ಕಳ ಶಿಕ್ಷಣದ ವಿಚಾರದಲ್ಲಿ ಸಮಾಜದಲ್ಲಿ ಹಿಂಜರಿಕೆಯ ಮನೋಭಾವ ಕಂಡುಬರುವುದು ವಿಪರ್ಯಾಸ. ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆದು, ಜ್ಞಾನವಂತರಾಗಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಹೆಣ್ಣುಮಕ್ಕಳಿಗೆ ಕೇವಲ ವಿದ್ಯೆ ನೀಡುವುದಷ್ಟೇ ಅಲ್ಲದೆ, ಜ್ಞಾನ, ಧಾರ್ಮಿಕ ಸಂಸ್ಕಾರ ಹಾಗೂ ಜೀವನಮೌಲ್ಯಗಳನ್ನು ಕಲಿಸಿ, ಅವರ ಕನಸುಗಳಿಗೆ ರೆಕ್ಕೆ ಕಟ್ಟುವ ಕೆಲಸವಾಗಬೇಕು ಎಂದು ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಶ್ರವಣಬೆಳಗೊಳ ಸಮೀಪದ ಶ್ರೀ ಧವಲತೀಥಂನಲ್ಲಿರುವ ಗೊಮ್ಮಟೇಶ್ವರ ವಿದ್ಯಾಪೀಠದ ಕಾಳಾಲದೇವಿ ಕನ್ಯಾಶ್ರಮದ ವಿದ್ಯಾರ್ಥಿನಿಯರಿಗಾಗಿ ಧರ್ಮಸ್ಥಳದ ಪರಿವಾರದ ವತಿಯಿಂದ ನಿರ್ಮಿಸಲಾಗುತ್ತಿರುವ ನೂತನ ವಸತಿಗೃಹದ ಭೂಮಿಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶಿ? ಸ್ಥಾನವಿದೆ. ಭೂಮಾತೆ, ಭಾರತಾಂಬೆ, ಕನ್ನಡಾಂಬೆ ಎಂದು ಗೌರವಿಸುವ ನಾವು, ನದಿಗಳು, ಪ್ರಕೃತಿ ಹಾಗೂ ವೃಕ್ಷಗಳನ್ನೂ ಮಾತೃಸ್ವರೂಪದಲ್ಲಿ ಕಾಣುತ್ತೇವೆ. ಲಕ್ಷ್ಮೀಯನ್ನು ಸಂಪತ್ತಿನ ಅಧಿದೇವತೆ, ಸರಸ್ವತಿಯನ್ನು ಜ್ಞಾನದ ಅಧಿದೇವತೆ ಎಂದು ಆರಾಧಿಸುವ ಸಂಸ್ಕೃತಿ ನಮ್ಮದು. ಆದರೂ ಹೆಣ್ಣುಮಕ್ಕಳ ಶಿಕ್ಷಣದ ವಿಚಾರದಲ್ಲಿ ಸಮಾಜದಲ್ಲಿ ಹಿಂಜರಿಕೆಯ ಮನೋಭಾವ ಕಂಡುಬರುವುದು ವಿಪರ್ಯಾಸ. ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆದು, ಜ್ಞಾನವಂತರಾಗಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.

ಶಿಕ್ಷಣದ ಜತೆಗೆ ಆತ್ಮವಿಶ್ವಾಸ, ಅಂತರಂಗದ ಅನುಭೂತಿ ಹಾಗೂ ಉತ್ತಮ ಸಂಸ್ಕಾರ ಬೆಳೆಸುವುದು ಅಗತ್ಯ. ಶಿಕ್ಷಣವು ಉದ್ಯೋಗ ಪಡೆಯುವ ಸಾಧನವಾಗುವುದರೊಂದಿಗೆ ವ್ಯಕ್ತಿತ್ವ ವಿಕಸನ ಮತ್ತು ಸುಸಂಸ್ಕೃತ ಬದುಕಿಗೂ ದಾರಿಯಾಗಬೇಕು. ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ ಎಂದು ತಿಳಿಸಿದರು.ಧರ್ಮಸ್ಥಳದ ಪರಿವಾರದವರು ಪರೋಪಕಾರ ಹಾಗೂ ಸಮಾಜಸೇವೆಗೆ ಹೆಸರಾಗಿದ್ದಾರೆ. ಕನ್ಯಾಶ್ರಮದ ಕಟ್ಟಡದ ಅಗತ್ಯವನ್ನು ತಿಳಿಸಿದಾಗ, ಮಾತೃಶ್ರೀ ರತ್ನಮ್ಮನವರ ಸ್ಮರಣಾರ್ಥ ವಸತಿಗೃಹ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ಸಂಗತಿ. ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂ?ಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಪರಿವಾರದ ವತಿಯಿಂದ ಮಾತೃಶ್ರೀ ರತ್ನಮ್ಮನವರ ಸ್ಮರಣಾರ್ಥ ಸುಮಾರು ೨೦೦ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ೫೪ ಕೊಠಡಿಗಳ ಸುಸಜ್ಜಿತ ವಸತಿಗೃಹ ನಿರ್ಮಾಣಕ್ಕೆ ಸೇವಾ ಸಂಕಲ್ಪ ಕೈಗೊಳ್ಳಲಾಗಿದೆ ಎಂದರು.ಡಿ. ಸುರೇಂದ್ರ ಕುಮಾರ್ ಮಾತನಾಡಿ, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಅವರ ಭವಿ? ರೂಪಿಸುವ ಕಾರ್ಯಕ್ಕೆ ನೆರವಾಗುವುದು ಮಹತ್ವದ ಸೇವೆಯಾಗಿದೆ. ವಿದ್ಯಾರ್ಥಿನಿಯರು ಉತ್ತಮ ಪರಿಸರದಲ್ಲಿ ವಾಸಿಸಿ, ವಿದ್ಯಾಭ್ಯಾಸದ ಜತೆಗೆ ಸಂಸ್ಕಾರವನ್ನೂ ಬೆಳೆಸಿಕೊಳ್ಳಬೇಕು. ನೂತನ ಕಟ್ಟಡವು ಅವರ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿ ಎಂದು ಆಶಿಸಿದರು.ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ೨೦೨೩ರಲ್ಲಿ ಗೊಮ್ಮಟೇಶ್ವರ ವಿದ್ಯಾಪೀಠವನ್ನು ಪುನರಾರಂಭಿಸಿ, ಲೌಕಿಕ ಶಿಕ್ಷಣದ ಜತೆಗೆ ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರ ನೀಡಲಾಗುತ್ತಿದೆ. ಹೆಣ್ಣುಮಕ್ಕಳ ಶಿಕ್ಷಣವೇ ಕುಟುಂಬ ಹಾಗೂ ಸಮಾಜದ ಸಂಸ್ಕಾರದ ಆಧಾರ ಎಂಬ ಆಶಯದೊಂದಿಗೆ ೨೦೨೪ರಲ್ಲಿ ಕಾಳಾಲದೇವಿ ಕನ್ಯಾಶ್ರಮ ಆರಂಭಿಸಲಾಗಿದೆ. ಪ್ರಸ್ತುತ ಸುಮಾರು ೮೦ ವಿದ್ಯಾರ್ಥಿನಿಯರು ಗುರುಕುಲ ಮಾದರಿಯಲ್ಲಿ ಶಿಕ್ಷಣ ಪಡೆಯುತ್ತಿರುವುದು ಶ್ಲಾಘನೀಯ ಎಂದರು.ಅನಿತಾ ಸುರೇಂದ್ರ ಕುಮಾರ್ ಮಾತನಾಡಿ, ಕುಟುಂಬ ಹಾಗೂ ಸಮಾಜದಲ್ಲಿ ಸಂಸ್ಕಾರ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಹೆಣ್ಣುಮಕ್ಕಳ ಪಾತ್ರ ಮಹತ್ವದ್ದಾಗಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜತೆಗೆ ಅವರಲ್ಲಿ ಧಾರ್ಮಿಕ ಪ್ರಜ್ಞೆ, ಉತ್ತಮ ಸಂಸ್ಕಾರ ಹಾಗೂ ಜೀವನಮೌಲ್ಯಗಳನ್ನು ಬೆಳೆಸಬೇಕು ಎಂಬುದು ಸ್ವಾಮೀಜಿಯವರ ಆಶಯವಾಗಿದೆ ಎಂದರು.ಕನ್ಯಾಶ್ರಮ ಆರಂಭವಾದಾಗ ಕೆಲವೇ ವಿದ್ಯಾರ್ಥಿನಿಯರಿದ್ದು, ಇದೀಗ ಆ ಸಂಖ್ಯೆ ೮೦ರ ಸಮೀಪ ತಲುಪಿರುವುದು ಸಂತಸದ ಸಂಗತಿ. ಹೆಚ್ಚಿನ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ ವಸತಿಗೃಹದ ಅಗತ್ಯವಿತ್ತು. ನಮ್ಮ ಮಾತೃಶ್ರೀಯವರ ಸ್ಮರಣಾರ್ಥ ಈ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.ನಗರ ಪ್ರದೇಶಗಳಲ್ಲಿ ಧಾರ್ಮಿಕತೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು. ವಿದ್ಯಾಭ್ಯಾಸದ ಜತೆಗೆ ಧಾರ್ಮಿಕ ಪ್ರಜ್ಞೆ ಬೆಳೆಸಿದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ವಿಧಾನ ಪರಿ?ತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಸ್ವಾಮೀಜಿಯವರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದು, ಕ್ಷೇತ್ರದ ಪರಂಪರೆಯಂತೆ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಸಮಾಜಸೇವೆಯನ್ನು ಮಠದ ಯುವಸ್ವಾಮೀಜಿಯವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಡಿ. ಸುರೇಂದ್ರ ಕುಮಾರ್ ಅವರು ನೂತನ ಕಟ್ಟಡದ ಪ್ರಥಮ ಶಿಲೆ ಸ್ಥಾಪಿಸಿದರು. ಅನಿತಾ ಸುರೇಂದ್ರ ಕುಮಾರ್ ಶಿಲಾನ್ಯಾಸದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಗಣ್ಯರು, ಮಠದ ಪ್ರತಿನಿಧಿಗಳು ಹಾಗೂ ವಿದ್ಯಾಪೀಠದ ಸಿಬ್ಬಂದಿ ಉಪಸ್ಥಿತರಿದ್ದರು.=========ಪೋಟೋ

ಶ್ರವಣಬೆಳಗೊಳ ಸಮೀಪದ ಶ್ರೀ ಧವಲತೀಥಂನಲ್ಲಿರುವ ಗೊಮ್ಮಟೇಶ್ವರ ವಿದ್ಯಾಪೀಠದ ಕಾಳಾಲದೇವಿ ಕನ್ಯಾಶ್ರಮದ ನೂತನ ಕಟ್ಟಡದ ಭೂಮಿಪೂಜೆ ಹಾಗೂ ಶಿಲಾನ್ಯಾಸ ಬುಧವಾರ ನೆರವೇರಿತು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಅನಿತಾ ಡಿ. ಸುರೇಂದ್ರ ಕುಮಾರ್, ಎಂ.ಎ.ಗೋಪಾಲಸ್ವಾಮಿ, ಎಚ್.ಪಿ.ಅಶೋಕ್ ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್ ಆಪರೇಷನ್ ಸಿಎಂ ಮಾಡಿಸಿದ್ದಾರೆ ಎಂಬ ಎಚ್ಡಿಕೆ ಹೇಳಿಕೆಯಲ್ಲಿ ಆಧಾರವಿಲ್ಲ: ಕೆ.ಎಂ.ಉದಯ್
ಅಭಿವೃದ್ಧಿಯಲ್ಲಿ ನಿರೀಕ್ಷಿತ ಪ್ರಗತಿ ಕಾಣದ ದೊಡ್ಡಅರಸಿನಕೆರೆ ಗ್ರಾಮ: ಶಾಸಕ ಉದಯ್