ಅಂಡಮಾನ್‌ನ ರಾಜಧಾನಿ ವಿಜಯಪುರಂನ ಮನ್ಷಾ ರೀಜೆನ್ಸಿ ಫೋರ್ಟ್ ಬ್ಲೇರ್‌ನಲ್ಲಿ ನಡೆದ 2026ರ ಬಸವ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಗಾಟಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ನಮ್ಮ ಆಚರಣೆಗಳು ಕೇವಲ ಸಾಂಕೇತಿಕವಾಗದೆ ಅವುಗಳಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯತೆಯನ್ನೊಳಗೊಂಡಾಗ ಮಾತ್ರ ಧರ್ಮ ಸಾರ್ಥಕವಾಗುತ್ತದೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಅಂಡಮಾನ್‌ನ ರಾಜಧಾನಿ ವಿಜಯಪುರಂನ ಮನ್ಷಾ ರೀಜೆನ್ಸಿ ಫೋರ್ಟ್ ಬ್ಲೇರ್‌ನಲ್ಲಿ ನಡೆದ 2026ರ ಬಸವ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪೂಜೆ-ಪುನಸ್ಕಾರಗಳಿಗಿಂತ ಮನುಷ್ಯನ ಮನಃಸ್ಥಿತಿ ಮುಖ್ಯ. ಪರರ ಸುಖ-ದುಃಖಗಳನ್ನು ನಮ್ಮದೆಂದು ಭಾವಿಸುವ ಗುಣವೇ ನಿಜವಾದ ಧರ್ಮ. ಮನಸ್ಸು ಅರಳಿದಾಗ ಮಾತ್ರ ಮಾಡುವ ಪೂಜೆಗೆ ಫಲ ಸಿಗುತ್ತದೆ, ಕೆರಳಿದ ಮನಸ್ಸಿನಿಂದ ಮಾಡುವ ಯಾವುದೇ ಆಚರಣೆ ವ್ಯರ್ಥ ಎಂದರು.
ನಮಸ್ಕಾರ ಮಾಡುವುದು ಕೇವಲ ಗೌರವ ಸೂಚಕವಲ್ಲ, ಅದು ಅಹಂಕಾರವನ್ನು ಕಳೆದುಕೊಳ್ಳುವ ಮಾರ್ಗ. ಬಸವಣ್ಣನವರು ತನ್ನನ್ನು ತಾನು ‘ಎನಗಿಂತ ಕಿರಿಯರಿಲ್ಲ’ ಎಂದು ಕರೆದುಕೊಳ್ಳುವ ಮೂಲಕ ಸಮಾಜದ ಮುಂದೆ ದೊಡ್ಡವರಾದರು. ಜಗತ್ತಿನ ಪ್ರತಿಯೊಬ್ಬ ಮನುಷ್ಯ ಪ್ರತಿಯೊಂದು ಜೀವರಾಶಿಯಲ್ಲಿಯೂ ಭಗವಂತನನ್ನು ಕಾಣುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದರು.
ವಿನಯ್ ಗುರೂಜಿ ಮಾತನಾಡಿ, ಆಧುನಿಕ ಜಗತ್ತಿನ ಗೊಂದಲಗಳಿಗೆ ಬಸವ ತತ್ವ ಮತ್ತು ಭಗವದ್ಗೀತೆಯ ಚಿಂತನೆಗಳು ಸಂಜೀವಿನಿಯಿದ್ದಂತೆ ಬುದ್ಧಿವಂತಿಕೆಗಿಂತ ಮುಗ್ಧತೆ ಜೀವನಕ್ಕೆ ಹೆಚ್ಚು ಹತ್ತಿರವಾದುದು ಜ್ಞಾನವಿದ್ದು ಅಹಂಕಾರ ಬೆಳೆಸಿಕೊಳ್ಳುವ ವ್ಯಕ್ತಿ ಅಂಧಕಾಸುರ ನಾಗುತ್ತಾನೆ ಆದರೆ ಅದೇ ಜ್ಞಾನದೊಂದಿಗೆ ಮಗುವಿನಂತಹ ಮುಗ್ಧತೆಯನ್ನು ಬೆಳೆಸಿಕೊಂಡರೆ ಅದು ನಿಜವಾದ ಅಧ್ಯಾತ್ಮಿಕನಾಗುವನು ಎಂದರು.
ಧರ್ಮ ಎನ್ನುವುದು ವಾಸ್ತವದ ಹಾದಿಯಷ್ಟೇ ಹೊರತು ಅದುವೇ ವಾಸ್ತವವಲ್ಲ. ಪ್ರತಿಯೊಬ್ಬರ ಒಳಗೆ ಚೈತನ್ಯವಿದೆ ಅದನ್ನೇ ಬಸವಣ್ಣನವರು ಬಯಲು ಎಂದು ಕರೆದಿದ್ದಾರೆ. ಧರ್ಮ ಯಾವುದೇ ಇರಲಿ, ಅದಕ್ಕಿಂತ ಮೊದಲು ಮಾನವೀಯತೆ ಮುಖ್ಯ. ಬಸವಣ್ಣನವರ ಅನುಭವ ಮಂಟಪ ಕೇವಲ ಚರ್ಚೆಯ ವೇದಿಕೆಯಲ್ಲ ಅದು ಅನುಭವಗಳ ಸಾಗರ ಎಂದರು.
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಪಂಗಡಕ್ಕೆ ಸೇರಿದವನಲ್ಲ. ನಮ್ಮದೊಂದೇ ಪಕ್ಷ, ಅದು ಮನುಷ್ಯನಾಗುವ ಪಕ್ಷ ಪಿತೃಪಕ್ಷದ ಸಮಯದಲ್ಲಿ ಶ್ರದ್ಧೆಯಿಲ್ಲದೆ ಮಾಡುವ ಪೂಜೆಗಿಂತ, ತಂದೆ-ತಾಯಿ ಜೀವಂತವಿದ್ದಾಗ ಅವರನ್ನು ಗೌರವಿಸುವುದು ನಿಜವಾದ ಶ್ರಾದ್ಧ ಎಂದರು.
ಕಾರ್ಯ್ರಮದಲ್ಲಿ ಬಂಗಾರಮುಖಿಯ ಮಾರುತಿ ಗುರೂಜಿ ,ಶರಣ ಚಿಂತಕ ಚಟ್ನಳ್ಳಿ ಮಹೇಶ್, ನಿವೃತ್ತ ಪ್ರಾಚಾರ್ಯ ಸಿದ್ಧು ಯಾಪಲಪರವಿ , ಜಿ ಬಿ ಪಾಟೀಲ್, ಬಿ ಆರ್ ಪೋಲಿಸ್, ಅಶೋಕ ಮೊಳಗಲಿ ಮಾತನಾಡಿದರು.
ರಾಮಚಂದ್ರ ಹಡಪ, ಶೋಭಾ ಶಿವಳ್ಳಿ ವಚನದ ಮೂಲಕ ಪ್ರಾರ್ಥಿಸಿದರು. ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್ ಎಂ ಸುರೇಶ್ ಸ್ವಾಗತಿಸಿದರೆ ತೇಜಸ್ವಿನಿ ನಿರೂಪಿಸಿದರು. ಸ್ಪರ್ಷ ವಚನ ವಂದನೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.