ಸಂಸ್ಕಾರ ಕಲಿಸುವ ಶಿಕ್ಷಣ ಸಂಸ್ಥೆ ಹೆಚ್ಚಲಿ

KannadaprabhaNewsNetwork |  
Published : Feb 24, 2025, 12:33 AM IST
ಪ್ರಾರ್ಥನಾ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮತ್ತು ಸಂಸ್ಕಾರ ಕಲಿಸುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. ಪಟ್ಟಣದ ಬಸವ ವಿದ್ಯಾಪ್ರಸಾರಕ ಸಮಿತಿಯ ಪ್ರಾರ್ಥನಾ ವಿದ್ಯಾಮಂದಿರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣ ಲಾಭದಾಯಕ ವ್ಯವಹಾರ ಆಗಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮತ್ತು ಸಂಸ್ಕಾರ ಕಲಿಸುವ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಬೇಕಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. ಪಟ್ಟಣದ ಬಸವ ವಿದ್ಯಾಪ್ರಸಾರಕ ಸಮಿತಿಯ ಪ್ರಾರ್ಥನಾ ವಿದ್ಯಾಮಂದಿರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣ ಲಾಭದಾಯಕ ವ್ಯವಹಾರ ಆಗಿದೆ. ಮಕ್ಕಳಿಗೆ ಉತ್ತಮ, ಶಿಸ್ತುಬದ್ಧ ಶಿಕ್ಷಣ ನೀಡಬೇಕು ಎನ್ನುವುದು ಎಲ್ಲ ಪಾಲಕರ ಕನಸು. ಆದರೆ ಶಾಲೆಗಳಲ್ಲಿ ಮಾನವೀಯತೆ, ಸಂಸ್ಕಾರ ಮರೆಯಾಗುತ್ತಿದೆ. ಯಾವ ವಿಶ್ವವಿದ್ಯಾಲಯವೂ ಕಲಿಸದ ಬದುಕಿನ ಪಾಠಗಳನ್ನು ಸಮಾಜ ನಮಗೆ ಕಲಿಸುತ್ತದೆ. ಅಂಥ ಸಮಾಜದ ಋಣ ತೀರಿಸುವ ಕೆಲಸ ನಾವು ಮಾಡಬೇಕು ಎಂದರು.

ಸಿ.ಆರ್.ಸಿ ಗುಂಡು ಚವ್ಹಾಣ ಮಾತನಾಡಿ, ಪ್ರಾರ್ಥನಾ ವಿದ್ಯಾಮಂದಿರದ ವಿದ್ಯಾರ್ಥಿಗಳು ಸರ್ಕಾರ ಏರ್ಪಡಿಸುವ ಪ್ರತಿಭಾ ಕಾರಂಜಿ, ಕಲೋತ್ಸವ, ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ, ಉತ್ತಮ ಪ್ರಗತಿ ತೋರುತ್ತಿದ್ದಾರೆ ಎಂದರು.

ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ಮುರಿಗೆಪ್ಪ ಮೋಟಗಿ, ಕಾರ್ಯದರ್ಶಿ ಜಗದೀಶ ಕಂಠಿ, ಮುಖ್ಯ ಗುರುಮಾತೆ ದಿವ್ಯಾ ಹೆಬ್ಬಾರ, ಶಾಲಾ ಸಲಹಾ ಸಮಿತಿ ಸದಸ್ಯರಾದ ಜಿ.ಆರ್.ನಾವದಗಿ, ಎಸ್.ಎ.ಬೇವಿನಗಿಡದ, ವಿದ್ಯಾರ್ಥಿ ಪ್ರತಿನಿಧಿಗಳಾದ ಅನುರೂಪ ಗಡೇದ, ಸಾಕ್ಷಿ ಹೆಬ್ಬಾಳ ಇದ್ದರು. ಉಪಾಧ್ಯಕ್ಷ ಸಿದ್ದಣ್ಣ ಹುನಗುಂದ, ವಿಜಯಲಕ್ಷ್ಮಿ ಗಡೇದ, ಸಹ ಕಾರ್ಯದರ್ಶಿ ರೇಣುಕಾ ಕಡಿ, ನಿರ್ದೇಶಕರಾದ ಗುರುಶಾಂತಪ್ಪ ಜೋಳದ, ಪ್ರಭುದೇವ ಕಲಬುರ್ಗಿ, ಬಸಲಿಂಗಪ್ಪ ನಾವದಗಿ, ರುದ್ರಪ್ಪ ಕಡಿ, ನಿಂಗಪ್ಪ ಚಟ್ಟೇರ, ಪ್ರವೀಣ ನಾಗಠಾಣ, ರೇವಪ್ಪ ಮೋಟಗಿ, ಪೂರ್ಣಿಮಾ ಜಮಖಂಡಿ, ಶೋಭಾ ಸುಕಾಲಿ, ನಿರ್ಮಲಾ ರಾಂಪೂರ, ಮಹಾಬಲೇಶ್ವರ ಗಡೇದ ಮತ್ತಿತರರು ಇದ್ದರು. ಶಿಕ್ಷಕ ರಾಜು ಜಾಧವ ಸ್ವಾಗತಿಸಿದರು. ಮುಖ್ಯಗುರು ವಿನೋದ ಪಟಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ರಿವೇಣಿ ರಾಠೋಡ ಮತ್ತು ಅಂಜನಾ ಬಸರಕೋಡ ನಿರೂಪಿಸಿದರು. ಶಾರದಾ ಗೌಡರ ವಂದಿಸಿದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ