ಕನ್ನಡಪ್ರಭ ವಾರ್ತೆ, ತುಮಕೂರುಕಲಾವಿದನ ಶ್ರಮ ಕಲಾವಿದನಿಗೆ ಮಾತ್ರ ಗೊತ್ತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸದಬಿರುಚಿಯ ನಾಟಕಗಳ ಅವಶ್ಯಕತೆ ಇದ್ದು ಇನ್ನೂ ಹೆಚ್ಚು ನಾಟಕಗಳು ರಂಗದ ಮೇಲೆ ಮೂಡಿ ಬರಲಿ ಎಂದು ರಂಗಭೂಮಿ ಕಲಾವಿದ ಚಿಕ್ಕಪ್ಪಯ್ಯ ವ್ಯಾಖ್ಯಾನಿಸಿದರು. ಅವರು ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಝೆನ್ ಟೀಮ್ ಆಯೋಜಿಸಿದ್ದ ನಿರ್ದಿಗಂತ ತಂಡ ಪ್ರಸ್ತುತಪಡಿಸಿದ್ದ ಕೂ ಹೂ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಕಲಾವಿದ ಕಲೆಗಾಗಿ ತನ್ನ ತನು, ಮನ ಧನವನ್ನು ಅರ್ಪಿಸಿಕೊಂಡು ತನ್ನ ಅಪಾರ ಸಂಕಟವನ್ನು ಎದೆಯೊಳಗಿಟ್ಟುಕೊಂಡು ಕಲೆಯನ್ನು ಬೇರೆಯವರಿಗೆ ತೋರಿಸುತ್ತಾ ಹೋಗುತ್ತಾನೆ. ಅಂತಹ ಕಲಾವಿದರಿಗೆ ಸೆಲ್ಯೂಟ್ ಎಂದರು.ತುಮಕೂರಿನಲ್ಲಿ ಝೆನ್ ಟೀಮ್ ಹಲವಾರು ನಾಟಕಗಳನ್ನು ಕಳೆದ 20 ವರ್ಷಗಳಿಂದ ಆಯೋಜಿಸುತ್ತಾ ಬಂದಿದ್ದಾರೆ. ಈಗ ಪ್ರಕಾಶ ರೈ ಅವರ ನಿರ್ದಿಗಂತ ತಡ ಹೊಸತೊಂದು ನಾಟಕವನ್ನು ಸಿದ್ಧತೆ ಮಾಡಿಕೊಂಡು ರಾಜ್ಯಾದ್ಯಂತ ಸಂಚಾರ ಹೊರಟಿದೆ. ನಾಟಕದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರಿಗೂ ಶುಭ ಕೋರುವುದಾಗಿ ತಿಳಿಸಿದರು.ತುಮಕೂರು ರಂಗಭೂಮಿಗೆ ವಿಶೇಷ ಸ್ಥಾನವನ್ನು ನೀಡಿದೆ. ಒಂದು ಕಡೆ ಪೌರಾಣಿಕ ನಾಟಕಗಳು ನಿರಂತರವಾಗಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಅದರ ಸಮಾನವಾಗಿ ಸಾಮಾಜಿಕ ನಾಟಕಗಳು, ಪರಿಣಾಮಕಾರಿ ನಾಟಕಗಳು ಕೂಡ ನಡೆಯುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ. ವರ್ಷ ಪೂರ್ತಿ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಕಲೆಯನ್ನು ಬೆಳೆಸುವ ಕಾರ್ಯಕ್ರಮಗಳು ನಡೆಯುತ್ತಿರುವುದು ವಿಶೇಷ ಎಂದರು.ವಕೀಲ ಡಾ. ಮೌಲಾ ಷರೀಪ್ ಸಿ.ಕೆ. ಮಾತನಾಡಿ ಸಿನಿಮಾ ರೀತಿ ನಾಟಕದಲ್ಲಿ ಟೇಕ್‌ಗಳು ಇರುವುದಿಲ್ಲ. ಕಲೆಯನ್ನು ಕರಗತ ಮಾಡಿಕೊಂಡವನು ರಂಗಭೂಮಿ ಕಲಾವಿದ ಮಾತ್ರ. ಆತ ಒಂದೇ ಟೇಕಿನಲ್ಲಿ ಅಭಿನಯಿಸಬೇಕು. ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವಂತಹ ಚಿತ್ರಗಳು ಬರುತ್ತಿದೆ. ಇಂತಹದರ ಮಧ್ಯೆ ಜನಸಾಮಾನ್ಯರಿಗೆ ಉತ್ತಮ ಅಭಿರುಚಿ ಬೆಳೆಸುವಂತಹ ನಾಟಕಗಳು ಹೆಚ್ಚೆಚ್ಚು ಆಗಲಿ ಎಂದು ಆಶಿಸಿದರು.ಕಲೆಯನ್ನು ಕರಗತ ಮಾಡಿಕೊಳ್ಳುವ ವಿಧಾನ ಯಾರಿಗೆ ಗೊತ್ತಿದ್ದರೆ ಅದು ನಾಟಕಕಾರನಿಗೆ ಮಾತ್ರ. ಎಂದರು. ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಕ್ಷೇತ್ರವಾದ ತುಮಕೂರಿನ ಜನರು ಶರಣು ಬಯಸಿ ಬರುವವರಿಗೆ ಎಲ್ಲವನ್ನು ಕೊಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕೃಷ್ಣೇಗೌಡ ಮತ್ತಿತರರು ಇದ್ದರು. ತೇಜಸ್ವಿ ಪುಸ್ಕರ್ ನಿರೂಪಿಸಿದರು. ಬಳಿಕ ನಿರ್ದಿಂಗತ ತಂಡ ಪ್ರಸ್ತುತಪಡಿಸಿದ ಝೆನ್ ಟೀಮ್ ಆಯೋಜಿಸಿದ ಅರುಣ್ ಲಾಲ್ ನಿರ್ದೇಶಿಸಿದ `ಕೂ ಹೂ'''''''' ನಾಟಕ ಪ್ರದರ್ಶನಗೊಂಡಿತು.