ವಿದ್ಯಾರ್ಥಿಗಳಲ್ಲಿ ಸರಳತೆ ಇರಲಿ

KannadaprabhaNewsNetwork | Published : May 16, 2024 12:46 AM

ಸಾರಾಂಶ

ಮಕ್ಕಳು ಸಹಜತೆ ಮತ್ತು ಸರಳತೆ ಮೈಗೂಡಿಸಿಕೊಂಡು ಉತ್ತಮವಾಗಿ ಅಧ್ಯಯನ ಮಾಡಿ ಹೆಚ್ಚು ಫಲಿತಾಂಶ ಪಡೆದುಕೊಂಡು ಪಾಲಕರು ಹಾಗೂ ಕಲಿಸಿದ ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್. ಶಹಾ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಮಕ್ಕಳು ಸಹಜತೆ ಮತ್ತು ಸರಳತೆ ಮೈಗೂಡಿಸಿಕೊಂಡು ಉತ್ತಮವಾಗಿ ಅಧ್ಯಯನ ಮಾಡಿ ಹೆಚ್ಚು ಫಲಿತಾಂಶ ಪಡೆದುಕೊಂಡು ಪಾಲಕರು ಹಾಗೂ ಕಲಿಸಿದ ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್. ಶಹಾ ಹೇಳಿದರು.

ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾಮಚಂದ ಮೋತಿಚಂದ ಶಹಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಇಂಡಿ (ರಿ)ಇವರ ಅಡಿಯಲ್ಲಿ ನಡೆಯುತ್ತಿರುವ ಫುಲಚಂದ ಕಸ್ತೂರಚಂದ ದೋಶಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಅಲ್ಲದೇ ನಮ್ಮ ಶಾಲೆಯ10ನೇ ತರಗತಿಯ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ನಮ್ಮ ಫುಲಚಂದ ಕಸ್ತೂರಚಂದ ದೋಶಿ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.

ವಿಜ್ಞಾನ ವಿಭಾಗದಲ್ಲಿ ಇಂಡಿ ತಾಲೂಕಿಗೆ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಅಫ್‌ಶಾನ್ ನಾಗೂರ ಶೇ.96.83, ದ್ವಿತೀಯ ಭಾಗೇಶ್ ಇಕ್ಕಳಕಿ ಹಾಗೂ ಮಾಲಾಶ್ರೀ ರಾಠೋಡ ಶೇ.95.66, ತೃತೀಯ ಸ್ಥಾನ ಪೂಜಾ ವರಕನಳ್ಳಿ ಶೇ.95.17 ಪಡೆದುಕೊಂಡಿದ್ದಾರೆ. ಅಲ್ಲದೇ ಕೇಂದ್ರ ಪರೀಕ್ಷಾ ಮಂಡಳಿ (ಸಿ.ಬಿ.ಎಸ್.ಇ) ನಡೆಸಿದ 10ನೇ ತರಗತಿಯ 2023-24ರ ಶೈಕ್ಷಣಿಕ ವರ್ಷದ ಪರೀಕ್ಷೆಯ ಫಲಿತಾಂಶದಲ್ಲಿ ಸಾದಿಯಾ ಆರ್. ಜಮಾದಾರ ಪ್ರಥಮ ಸ್ಥಾನ ಶೇ.93.8, ದ್ವಿತೀಯ ಸಿದ್ಧಾರ್ಥ ಸಿ. ಈರಗೊಂಡ ಶೇ.91 ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಗ್ರಾಮೀಣ ಪ್ರದೇಶದ 10ನೇ ತರಗತಿಯ ವಿದ್ಯಾರ್ಥಿಗಳ ಪ್ರತಿಭೆಯನ್ನುಗುರುತಿಸಲು ಪ್ರತಿವರ್ಷ ಸಂಸ್ಥೆಯ ವತಿಯಿಂದ ನಡೆಸಿ ಕೊಡುವ ಶಹಾ ಮೆರಿಟ್‌ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಾದ ಕುಮಾರ ಆದಿತ್ಯಾ ರಾಠೋಡ, ದ್ವಿತೀಯ ನಿಖಿಲ್ ಮದರಖಂಡಿ, ತೃತೀಯ ಸಾದಿಯಾ ಜಮಾದಾರ ಅವರಿಗೆ ಅಲ್ಲದೇ 20 ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ನೀರಜಾಕ್ಷಿ ಕೆ., ಶೈಕ್ಷಣಿಕ ಮಾರ್ಗದರ್ಶಕ ನಜೀರ್ ಹುಂಡೇಕರ್, ಎಫ್.ಕೆ.ದೋಶಿ, ಪದವಿಪೂರ್ವ ವಿಭಾಗದ ಪ್ರಾಚಾರ್ಯ ಡಾ.ದಯಾನಂದ ದಳವಾಯಿ, ಶಾಲಾ ವಿಭಾಗದ ಪ್ರಾಂಶುಪಾಲ್‌ ಪ್ರಕಾಶ ಪಾಟೀಲ್‌ ಎಲ್ಲ ಸಿಬ್ಬಂದಿಗಳು ಇದ್ದರು. ಶಿಕ್ಷಕರಾದ ಅಲ್ಲಾಭಕ್ಷ ಉಕ್ಕಲಿ ಸ್ವಾಗತಿಸಿದರು. ಶಿಕ್ಷಕಿ ಭಾಗ್ಯಜ್ಯೋತಿ ಕೋಳಾರಿ ನಿರೂಪಿಸಿದರು ಉಪನ್ಯಾಸಕರಾದ ಬಸವರಾಜ ಚವ್ಹಾಣ ವಂದಿಸಿದರು.

Share this article