ಸಂಸ್ಕೃತಿ, ಕೃಷಿ ಉಳಿವಿಗೆ ನಾವೆಲ್ಲರೂ ಹಿಂದೂಗಳಾಗೋಣ -ಕನ್ನೇರಿ ಸ್ವಾಮೀಜಿ

KannadaprabhaNewsNetwork |  
Published : Oct 10, 2026, 02:00 AM IST
ಹಾನಗಲ್ಲ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಉದ್ಘಾಟಿಸಿದರು. ಸಿದ್ದಲಿಂಗಣ್ಣ ಕಮಡೊಳ್ಳಿ, ನಟ ದೊಡ್ಡಣ್ಣ, ಶ್ರೀನಿವಾಸಮೂರ್ತಿ ಇದ್ದರು. | Kannada Prabha

ಸಾರಾಂಶ

ಕಾವಿ ಉಟ್ಟವನಿಗೆ ಕಾವಿಯ ಕಿಮ್ಮತ್ತು ಗೊತ್ತಿರಬೇಕು. ನಾವೆಲ್ಲರೂ ಮೊದಲು ಹಿಂದೂಗಳಾಗೋಣ. ಆಗ ಈ ದೇಶದ ಸಂಸ್ಕೃತಿ, ಕೃಷಿಕನ ಉಳಿವು ಸಾಧ್ಯವಾಗಲಿದೆ ಎಂದು ಕೊಲ್ಲಾಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಹೇಳಿದರು.

ಹಾನಗಲ್ಲ: ಕಾವಿ ಉಟ್ಟವನಿಗೆ ಕಾವಿಯ ಕಿಮ್ಮತ್ತು ಗೊತ್ತಿರಬೇಕು. ನಾವೆಲ್ಲರೂ ಮೊದಲು ಹಿಂದೂಗಳಾಗೋಣ. ಆಗ ಈ ದೇಶದ ಸಂಸ್ಕೃತಿ, ಕೃಷಿಕನ ಉಳಿವು ಸಾಧ್ಯವಾಗಲಿದೆ ಎಂದು ಕೊಲ್ಲಾಪುರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಹೇಳಿದರು.

ಗುರುವಾರ ರಾತ್ರಿ ತಾಲೂಕಿನ ಬಾಳಂಬೀಡದಲ್ಲಿ ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಟ್ರಸ್ಟ ಆಯೋಜಿಸಿದ್ದ ಒಂದೇ ಮಾತರಂ ಗೋ ಶಾಲೆ ನೀಲನಕ್ಷೆ ಅನಾವರಣ, ಧರ್ಮಧ್ವಜ ಅಭಿಯಾನದ ಸಮಾರೋಪ, ರೈತರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಹಿಂದೂ ಹಬ್ಬಗಳನ್ನು ಟೀಕಿಸುವವರಿಗೆ ಹಿಂದುತ್ವದ ಶಕ್ತಿ-ಸಾಮರ್ಥ್ಯದ ಅರಿವಿಲ್ಲ. ಕಾವಿಯ ನೆರಳಲ್ಲಿ ನಮ್ಮ ಸಂಸ್ಕೃತಿ ಉಳಿಸುವ ಕೆಲಸವಾಗಲಿ, ರೈತ ಕುಶಲ ಕಾರ್ಮಿಕ, ಮಣ್ಣು, ನೀರು, ಭೂಮಿ, ಜಾನುವಾರುಗಳೊಂದಿಗೆ ಮಾತನಾಡುವ ಶಕ್ತಿ ರೈತನಿಗೆ ಮಾತ್ರ ಇದೆ. ಇವನಿಗಿಂತ ಕುಶಲ ಬೇರಾರೂ ಇಲ್ಲ. ರೈತರು ರಾಜಕೀಯ ಬಿಡಿ, ಭೂಮಿಯಲ್ಲಿ ದುಡಿಯಿರಿ, ಪ್ರಯೋಗಶೀಲರಾಗಿರಿ. ಎಲ್ಲದಕ್ಕೂ ಮೊದಲು ರೈತರು ನಿರ್ವ್ಯಸನಿಗಳಾಗಿರಿ, ತಾಯಂದಿರು ರೈತರ ಮಕ್ಕಳಿಗೆ ಹೆಣ್ಣು ಕೊಡಲು ಮುಂದೆ ಬನ್ನಿ, ಈ ದೇಶ ಉಳಿಯುತ್ತದೆ ಎಂದರು.ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ, ಶಿಷ್ಟರಿಗೆ ನ್ಯಾಯ ದೊರೆಯುವ ಕಾಲದ ಪುನರುತ್ಥಾನವಾಗಬೇಕು. ರೈತರ ಬಾಳು ಹಸನಾಗದ ಹೊರತು ಯಾವ ಸರ್ಕಾರಗಳೂ ಉಳಿಯಲು ಸಾಧ್ಯವಿಲ್ಲ. ಜಾತಿಯ ತಾಕಲಾಟಗಳನ್ನು ನಿಲ್ಲಿಸಿ ಎಲ್ಲರಿಗೂ ಕೃಷಿ ನೀತಿ ಮುಖ್ಯವಾಗಲಿ. ಮಕ್ಕಳನ್ನು ಮೊದಲು ಧರ್ಮವಂತರನ್ನಾಗಿ ಮಾಡಿ. ಗೋಮಾತೆ ನಮ್ಮ ಸಂಸ್ಕೃತಿ. ನಾವು ಕೀರ್ತಿ, ಪ್ರತಿಷ್ಠೆ, ಪದವಿಗೆ ಹಾತೊರೆಯದೇ, ನೀತಿವಂತ ಬದುಕಿಗೆ ಬದ್ಧರಾಗೋಣ ಎಂದರು. ಅಗಡಿ ಅಕ್ಕಿ ಮಠದ ಗುರುಲಿಂಗ ಸ್ವಾಮಿಗಳು, ಅಕ್ಕಿಆಲೂರಿನ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿದರು. ಹಿರಿಯ ಚಲನಚಿತ್ರ ನಟ ಶ್ರೀನಿವಾಸಮೂರ್ತಿ ಮುಖ್ಯ ಅತಿಥಿಯಾಗಿದ್ದರು. ಕೂಡಲದ ಗುರುಮಹೇಶ್ವರ ಶಿವಾಚಾರ್ಯರು, ಅಕ್ಕಿಆಲೂರಿನ ಶಿವಬಸವ ಸ್ವಾಮಿಗಳು, ಗುಂಡೂರಿನ ತಿಪ್ಪೇಶ್ವರ ಸ್ವಾಮಿಗಳು, ಹೇರೂರಿನ ಪಂಡಿತಾರಾಧ್ಯ ಶಿವಾಚಾರ್ಯರು, ಕೂಸನೂರಿನ ಡಾ.ಜ್ಯೋತಿರ್ಲಿಂಗಾನಂದ ಸ್ವಾಮಿಗಳು, ಹೋತನಹಳ್ಳಿ ಶಂಕರಾನಂದ ಸ್ವಾಮಿಗಳು, ತಿಳವಳ್ಳಿಯ ಬಸವನಿರಂಜನ ಸ್ವಾಮಿಗಳು, ಬಾಳೂರ ಕುಮಾರ ಸ್ವಾಮಿಗಳು ಸಮ್ಮುಖವಹಿಸಿದ್ದರು. ಹರಿಹರದ ಶಿವಯೋಗಿ ಕಂಬಾಳಿಮಠ ಪ್ರಾಸ್ತಾವಿಕ ಮಾತನಾಡಿದರು. ಗೋ ಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿನಾಯಕ ಹಾಗೂ ಸಂತೋಷ ಶಾಸ್ತ್ರಿಗಳು ವೇದಘೋಷ ಮಾಡಿದರು. ಖ್ಯಾತ ಗಾಯಕರಾದ ಸಂಧ್ಯಾ ಗಿರೀಶ್ ಹಾಗೂ ಕಂಬದ ರಂಗಯ್ಯ ಅವರಿಂದ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ಸಿದ್ದಲಿಂಗೇಶ ತುಪ್ಪದ ಸ್ವಾಗತಿಸಿದರು. ಕಿರಣ ಹೂಗಾರ, ರೂಪಶ್ರೀ ಪಸಾರದ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೆಂಡರ್ ನೆಪದಲ್ಲಿ ಮೀನುಗಾರರಿಗೆ ಎನ್‌ಒಸಿಗೆ ತೊಂದರೆ: ಹೋರಾಟದ ಎಚ್ಚರಿಕೆ
ಸಂಕನೂರ ಪರ ರೂಪಾಲಿ ನಾಯ್ಕ ಮತಯಾಚನೆ