ಮುಂಡರಗಿ: ಸರ್ಕಾರಿ ಶಾಲೆಗಳು ಜ್ಞಾನ ನೀಡುವ ದೇಗುಲಗಳು. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ವಿದ್ಯೆ ಕಲಿಸಿದ ಶಾಲೆ ಮತ್ತು ಗುರುವೃಂದವನ್ನು ಎಂದಿಗೂ ಮರೆಯಬಾರದು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದಗೌಡ ಪಾಟೀಲ ತಿಳಿಸಿದರು.ತಾಲೂಕಿನ ನಾಗರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ 2026- 27ನೇ ಸಾಲಿನ ಶಾಲಾ ಸಂಸತ್'''' ಉದ್ಘಾಟನೆ, ನೂತನ ಎಸ್‌ಡಿಎಂಸಿ ಪದಾಧಿಕಾರಿಗಳ ಸ್ವಾಗತ, ಶಾಲೆಯ ಹಿರಿಯ ವಿದ್ಯಾರ್ಥಿನಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಾಲಾ ಸಂಸತ್ ಉದ್ಘಾಟಿಸಿ ಮಾತನಾಡಿದರು.ಶಾಲೆಗಳಲ್ಲಿ ಆಗಿದ್ದಾಗ್ಗೆ ಪಾಲಕರ ಸಭೆ ನಡೆಸಬೇಕು. ಶಿಕ್ಷಕರು, ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿ ಸರ್ವ ಪದಾಧಿಕಾರಿಗಳ ಶಾಲೆಯ ಅಭಿವೃದ್ಧಿ, ಮಕ್ಕಳ ಕಲಿಕೆಯ ಕುರಿತು ಚಿಂತನೆ ನಡೆಸಬೇಕು. ಈ ಶಾಲೆಯನ್ನು ತಾವು ದತ್ತು ಪಡೆದುಕೊಳ್ಳುವುದಾಗಿ ಘೋಷಿಸಿ, ಶಾಲೆಯ ಮೂಲ ಸೌಕರ್ಯ ಹಾಗೂ ಕುಂದುಕೊರತೆಗಳನ್ನು ಈಡೇರಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿನಿ ಸುಪ್ರಿತಾ ಹಲವಾಗಲಿಯವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಚಿಗಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುರೇಶ ಹಲವಾಗಲಿ, ಮೈಲಾರಪ್ಪ ಕಲಕೇರಿ, ಮುತ್ತಣ್ಣ ನಾಯಕ, ಹೊನ್ನೂರಸಾಬ್ ಹೊಸಮನಿ ಸೇರಿದಂತೆ ಗ್ರಾಮದ ಗಣ್ಯರು, ಶಿಕ್ಷಕವೃಂದ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಎಸ್.ಎಚ್. ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಣ ಕಾಕಡೆ ಸ್ವಾಗತಿಸಿ, ಪಿ.ಸಿ. ಉಳ್ಳಾಗಡ್ಡಿ ನಿರೂಪಿಸಿ, ಎಸ್.ಬಿ. ಗದಗ ವಂದಿಸಿದರು.ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನ