ಲೇಖಕಿಯರು ಬೆಳೆಯಬೇಕಾದರೆ ಮೊದಲು ಅವರನ್ನು ಸ್ಥಳೀಯ ಮಟ್ಟದಲ್ಲಿ ಗುರುತಿಸಿ ಪ್ರೋತ್ಸಾಹಿಸಬೇಕು. ಅವರ ಕೃತಿಗಳ ಕುರಿತು ಅವಲೋಕನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕುಂದಾಪುರದಲ್ಲಿ ಇತ್ತೀಚೆಗೆ ಹುಟ್ಟಿಕೊಂಡ ಸುರಗಂಗಾ ಕಲಾ - ಸಾಹಿತ್ಯ ಮಹಿಳಾ ವೇದಿಕೆ ಈ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಎಂದು ಖ್ಯಾತ ಲೇಖಕಿ ಡಾ.ರೇಖಾ ಬನ್ನಾಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಲೇಖಕಿಯರು ಬೆಳೆಯಬೇಕಾದರೆ ಮೊದಲು ಅವರನ್ನು ಸ್ಥಳೀಯ ಮಟ್ಟದಲ್ಲಿ ಗುರುತಿಸಿ ಪ್ರೋತ್ಸಾಹಿಸಬೇಕು. ಅವರ ಕೃತಿಗಳ ಕುರಿತು ಅವಲೋಕನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕುಂದಾಪುರದಲ್ಲಿ ಇತ್ತೀಚೆಗೆ ಹುಟ್ಟಿಕೊಂಡ ಸುರಗಂಗಾ ಕಲಾ - ಸಾಹಿತ್ಯ ಮಹಿಳಾ ವೇದಿಕೆ ಈ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಎಂದು ಖ್ಯಾತ ಲೇಖಕಿ ಡಾ.ರೇಖಾ ಬನ್ನಾಡಿ ಹೇಳಿದರು. ಅವರು ರೋಟರಿ ಮಿಡ್ ಟೌನ್ ಕುಂದಾಪುರ ಸಹಯೋಗದಲ್ಲಿ ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಹಮ್ಮಿಕೊಂಡ ''''''''''''''''ಕನ್ನಡ ರಾಜ್ಯೋತ್ಸವ 26'''''''''''''''' ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ರೊಟೇರಿಯನ್ ಸಚಿನ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಗೌರವಾಧ್ಯಕ್ಷೆ ಡಾ.ಪಾರ್ವತಿ ಜಿ.ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆರಂಭದಲ್ಲಿ ಸಂಗೀತ ವಿದುಷಿ ನಳಿನಿ ವಿ.ರಾವ್ ಮತ್ತು ಬಳಗದವರು ನಾಡಗೀತೆ ಹಾಡಿದರು. ಸುಮತಿ ಶೆಣೈ ಮತ್ತು ವಿಮಲಾ ನಾವಡ ಅವರು ಸುಮನಾ ಹೇರ್ಳೆ ಅವರ ಸಾಹಿತ್ಯಾವಲೋಕನ ನಡೆಸಿಕೊಟ್ಟರು.ಕಥೆಗಾರ್ತಿ ಶಾಂತಾ ಸುರೇಶ್ ಹೆಬ್ಬಾರ್ ಮತ್ತು ಕವಯಿತ್ರಿ ಸುಶೀಲಾ ಎಲ್.ಶೆಟ್ಟಿ ಅವರನ್ನು ''''''''''''''''ಸುರಗಂಗಾ ಕನ್ನಡ ರಾಜ್ಯೋತ್ಸವ ಪುರಸ್ಕಾರ'''''''''''''''' ವನ್ನಿತ್ತು ಸನ್ಮಾನಿಸಲಾಯಿತು. ಸನ್ಮಾನ ಪತ್ರಗಳನ್ನು ಶ್ರೀದೇವಿ ಹಂದೆ ಮತ್ತು ಲೇಖಾ ಹೊಳ್ಳ ವಾಚಿಸಿದರು. ಸುಪ್ರಸನ್ನ ನಕ್ಕತ್ತಾಯರು ರಚಿಸಿದ ಕಲಾಕೃತಿಗಳನ್ನು ಸ್ಮರಣಿಕೆಯಾಗಿ ನೀಡಲಾಯಿತು.ಮೂಕಾಂಬಿಕಾ ಉಡುಪ ಮತ್ತು ನಿಮಿತಾ ಶೆಟ್ಟಿಯವರು ಭಾವಗೀತೆಗಳನ್ನು ಹಾಡಿದರು. ವೇದಿಕೆಯು ಏರ್ಪಡಿಸಿದ್ದ ''''''''''''''''ಕನ್ನಡ ಕೈಬರಹ ಸ್ಪರ್ಧೆ''''''''''''''''ಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸುಮಲತಾ ಸುರೇಶ್ ಸ್ವಾಗತಿಸಿದರು. ಜೆಸ್ಸಿ ಎಲಿಜಬೆತ್ ವಂದನಾರ್ಪಣೆಗೈದರು. ಸುಜಾತಾ ರಮೇಶ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಸುಪ್ರೀತಾ ಪುರಾಣಿಕ್ - ಮಹಾಲಕ್ಷ್ಮಿ ಸೋಮಯಾಜಿ ಮತ್ತು ಬಳಗದವರಿಂದ ''''''''''''''''ಕರ್ನಾಟಕ ವೈಭವ'''''''''''''''' ಅನ್ನುವ ಸಂಗೀತ - ನೃತ್ಯ ರೂಪಕದ ಪ್ರಸ್ತುತಿ ಎಲ್ಲರ ಗಮನ ಸೆಳೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.