ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯಕ್ರಮದಲ್ಲಿ ಶಾಸಕ ಬಸವಂತಪ್ಪ ಆಗ್ರಹ । ಮಹಿಳೆಯರು ಬ್ಯಾಂಕ್ ಗಳಲ್ಲಿ ಅನಾವಶ್ಯಕ ಸಾಲ ಪಡೆಯದಿರಿ
ಕನ್ನಡಪ್ರಭ ವಾರ್ತೆ ದಾವಣಗೆರೆಸ್ತ್ರೀ ಶಕ್ತಿ ಸಂಘಗಳಿಗೆ ನಾಂದಿ ಹಾಡಿ ರಾಜ್ಯದ ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬಿದವರು ಕಾಂಗ್ರೆಸ್ ಹಿರಿಯ ನಾಯಕಿ, ಮಾಜಿ ಸಚಿವೆ ಮೋಟಮ್ಮ ಪರಿಶ್ರಮದಿಂದಾಗಿ ಇಂದು ಗ್ರಾಮೀಣ ಸ್ತ್ರೀ ಶಕ್ತಿ ಸಂಘಗಳು ಪುರುಷರಿಗೆ ಸಾಲ ನೀಡುವಷ್ಟು ಆರ್ಥಿಕ ಸ್ವಾವಲಂಬಿಯಾಗಿವೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಶ್ಲಾಘಿಸಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲೂಕು ದೊಡ್ಡಘಟ್ಟ ಗ್ರಾಮದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ,ಸಿ.ಟ್ರಸ್ಟ್, ಚನ್ನಗಿರಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ದೊಡ್ಡಘಟ್ಟ ವಲಯದಿಂದ ಶ್ರೀ ಚೌಡೇಶ್ವರಿ ಮಾಂಗಲ್ಯ ಮಂದಿರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರು ಬ್ಯಾಂಕ್ ಗಳಲ್ಲಿ ಅನಾವಶ್ಯಕವಾಗಿ ಸಾಲ ಪಡೆಯದೇ, ಅವಶ್ಯಕವಿದ್ದರೆ ಮಾತ್ರ ಸಾಲ ಪಡೆಯಬೇಕು. ಹಾಗೆಯೇ ಸಕಾಲದಲ್ಲಿ ಸಾಲ ಮರುಪಾವತಿಸಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಐದೂ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಮಹಿಳೆಯರು ತಮ್ಮ ಗಂಡನಿಗೆ ಕೊಡದೆ, ಮಕ್ಕಳ ಓದಿಗೆ, ಕುಟುಂಬ ನಿರ್ವಹಣೆ ಸದ್ಭಳಕೆ ಮಾಡಿಕೊಂಡು, ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಿಳಿಸಿದರು.ಕ್ಷೇತ್ರದ ಜನರು ಏನೇ ಸಮಸ್ಯೆ ಇದ್ದರೂ ಹೇಳಿ:
ಧರ್ಮಸ್ಥಳ ಸಂಸ್ಥೆಯವರು ಶೇಕಡಾ ಬಡ್ಡಿದರ ಪ್ರಮಾಣವನ್ನು ಸಾಕಷ್ಟು ಕಡಿಮೆ ಮಾಡಬೇಕು. ಶ್ರೀ ಚೌಡೇಶ್ವರಿ ಸಮುದಾಯ ಸಂಘಕ್ಕೆ ಊಟದ ಕೊಠಡಿ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದು, ತಮ್ಮ ಅನುದಾನ ಬರುತ್ತಿದ್ದಂತೆ ಹಂತ ಹಂತವಾಗಿ ಊಟದ ಹಾಲ್ ನಿರ್ಮಿಸುವುದು ತಮ್ಮ ಜವಾಬ್ದಾರಿ. ಮಾಯಕೊಂಡ ಕ್ಷೇತ್ರದ ಜನರ ಏನೇ ಸಮಸ್ಯೆ ಇದ್ದರೂ, ಸಹಾಯ ಬೇಕಾದಲ್ಲಿ ಯಾವುದೇ ಸಮಯದಲ್ಲಿ ತಮ್ಮ ಗಮನಕ್ಕೆ ತಂದರೆ ಸ್ಪಂದಿಸುವೆ. 108 ಅಂಬ್ಯುಲೆನ್ಸ್‌ನಂತೆ ಹಿಂದೆ ಕೆಲಸ ಮಾಡಿದ್ದೆ. ನಾನು ಇರುವವರೆಗೂ 108 ಅಂಬ್ಯುಲೆನ್ಸ್ ಆಗಿ ನಿಮ್ಮ ಸೇವೆ ನಿರಂತರ ದುಡಿಯುವೆ ಎಂದು ಭರವಸೆ ನೀಡಿದರು.ಹದಡಿ ಚಂದ್ರಗಿರಿ ಮಠದ ಶ್ರೀ ಜಗದ್ಗುರು ಪರಮಹಂಸ ಮುರುಳೀಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧಕ್ಷ ಹನುಮಂತಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿತ್ರದುರ್ಗ ಜಿಲ್ಲಾ ನಿರ್ದೇಶಕ ದಿನೇಶ ಪೂಜಾರ, ಕೃಷಿ ಅಧಿಕಾರಿ ಡಿ.ಎಂ.ರಂಗಸ್ವಾಮಿ, ಜಯಪ್ಪ, ಬಾಲಚಂದ್ರಪ್ಪ, ಷಣ್ಮುಖಪ್ಪ, ಮಲ್ಲಿಕಾರ್ಜುನ, ಮಹೇಶ, ಹಿರಿಯ ವಕೀಲ ಜಿ.ಟಿ.ಶೇಖರಪ್ಪ, ರಂಗಸ್ವಾಮಿ, ಕುಮುದ್ವತಿ ಹಾಗೂ ಗ್ರಾಮಸ್ಥರಿದ್ದರು. ರೈತರಿಗೆ ಸೂಕ್ತ ಬರ ಪರಿಹಾರಕ್ಕೆ ಒತ್ತಾಯ
ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು ಮಾಯಕೊಂಡ ಭಾಗದ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ಭತ್ತ ಖರೀದಿ ಕೇಂದ್ರ ಸ್ಥಾಪನೆ, ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ನೀಡಲು, ಬರ ಪರಿಹಾರದಡಿ ರೈತರಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿದ್ದೇನೆ. ರಾಜ್ಯದ ಮಹಿಳೆಯರು ಸರ್ಕಾರದ ಗ್ಯಾರಂಟಿ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಬೇಕು. ಇನ್ನೊಂದು ಯೋಜನೆ ಶೀಘ್ರವೇ ಜಾರಿಗೊಳ್ಳಲಿದೆ.ಕೆ.ಎಸ್.ಬಸವಂತಪ್ಪ, ಮಾಯಕೊಂಡ ಶಾಸಕ